ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಅಗಸ್ಟ 28ರಂದು ಮಳೆ ಮುಂದುವರೆಯುವ ಲಕ್ಷಣಗಳಿವೆ. ಈ ಹಿನ್ನಲೆ ಜಿಲ್ಲೆಯ 10 ತಾಲೂಕಿನ ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.
ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು, ಹಲವು ಮುನ್ನಚ್ಚರಿಕೆವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ. ಅದರೊಂದಿಗೆ ಮಕ್ಕಳ ಸುರಕ್ಷತೆ ಕಾಪಾಡುವುದಕ್ಕಾಗಿ ಕರಾವಳಿ ಭಾಗದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕಿನ ಶಾಲೆಗಳಿಗೆ ರಜೆ ನೀಡಲಾಗಿದೆ.
ಮಲೆನಾಡು ಭಾಗದ ಶಿರಸಿ, ಸಿದ್ದಾಪುರ, ಯಲ್ಲಾಪುರ, ಜೊಯಿಡಾ ಹಾಗೂ ದಾಂಡೇಲಿ ಶಾಲೆಗಳಿಗೂ ರಜೆ ಘೋಷಣೆಯಾಗಿದೆ. ಹಳಿಯಾಳ ಹಾಗೂ ಮುಂಡಗೋಡು ಭಾಗದ ಶಾಲೆಗಳಿಗೆ ಈ ಮಳೆ ರಜೆ ಇಲ್ಲ. ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಜೊತೆ ಪಿಯು ಕಾಲೇಜುಗಳಿಗೂ ರಜೆ ನಿಯಮ ಅನ್ವಯ ಆಗಲಿದೆ. ಹವಾಮಾನ ಇಲಾಖೆ ಹಾಗೂ ಶೈಕ್ಷಣಿಕ ಅಧಿಕಾರಿಗಳು ನೀಡಿದ ಮಾಹಿತಿ ಅನ್ವಯ ಈ ರಜೆ ಘೋಷಿಸಲಾಗಿದೆ. ತಹಶೀಲ್ದಾರರು ಸಹ ರಜೆ ನೀಡುವಂತೆ ಕೋರಿದ್ದು, ಅವರ ಮಾಹಿತಿಯನ್ನು ಜಿಲ್ಲಾಡಳಿತ ಪರಿಗಣಿಸಿದೆ.
Discussion about this post