ಮೇಷ ರಾಶಿ: ಈ ದಿನ ಎಲ್ಲಾ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೂ ಯಶಸ್ಸಿನ ಯೋಗವಿದೆ. ಉದ್ಯೋಗ ಹಾಗೂ ವ್ಯಾಪಾರದ ಯೋಜನೆ ಫಲ ಕೊಡುತ್ತದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಕಾಣಲಿದೆ.
ವೃಷಭ ರಾಶಿ: ನೆರೆ ಹೊರೆಯವರ ಜೊತೆ ಚನ್ನಾಗಿರಿ. ಹಣಕಾಸು ವಿಷಯ ಸಮತೋಲನದಲ್ಲಿರಿಸಿಕೊಳ್ಳಿ. ಸಮಾಧಾನದಿಂದ ಇಡೀ ದಿನ ಕಳೆಯಿರಿ. ಆತಂಕ ಬೇಡ.
ಮಿಥುನ ರಾಶಿ: ಉದ್ಯೋಗದಲ್ಲಿ ಪ್ರಗತಿ ಸಾಧ್ಯವಿದೆ. ವಿದ್ಯಾರ್ಥಿಗಳ ಓದಿಗೂ ನೆರವು ಸಿಗಲಿದೆ. ಆಪ್ತರಿಂದ ಮೆಚ್ಚುಗೆ ಸಿಗಲಿದೆ.
ಕರ್ಕ ರಾಶಿ: ಆರೋಗ್ಯದಲ್ಲಿ ಸುಧಾರಣೆ ಆಗಲಿದೆ. ಉದ್ಯೋಗದಲ್ಲಿ ಪ್ರಗತಿ ಕಾಣಲಿದ್ದೀರಿ. ಆರ್ಥಿಕ ಲಾಭ ಆಗಲಿದೆ. ಗೌರವ ಸಲ್ಲಿಸುವ ಅವಕಾಶಗಳು ಸಿಗಲಿದೆ.
ಸಿಂಹ ರಾಶಿ: ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ಆಗುವ ಕೆಲಸ ಮಾಡಬೇಡಿ. ನಾಯಕತ್ವ ಗುಣ ಬೆಳೆಸಿಕೊಳ್ಳಿ. ಸ್ನೇಹಿತರ ಜೊತೆ ಕಾಲ ಕಳೆಯುವುದು ಸೂಕ್ತ.
ಕನ್ಯಾ ರಾಶಿ: ನಿಮ್ಮ ಶ್ರಮ ಫಲ ಕೊಡಲಿದೆ. ಕಡಿಮೆ ಸಮಯದಲ್ಲಿಯೇ ಉನ್ನತ ಸಾಧನೆ ಸಾಧ್ಯವಿದೆ. ಕುಟುಂಬದಲ್ಲಿ ಸಂತೋಷ ಕಾಣಬಹುದು.
ತುಲಾ ರಾಶಿ: ಹಣಕಾಸು ಪರಿಸ್ಥಿತಿಗಳು ಸುಧಾರಿಸಲಿದೆ. ವೃತ್ತಿ ವಿಷಯವಾಗಿ ಹೊಸ ಕಲಿಕೆ-ಅವಕಾಶಗಳು ಸಿಗಲಿದೆ. ಬಂಧು-ಮಿತ್ರರಿಗೆ ಸಹಾಯ ಮಾಡಿದರೆ ಒಳ್ಳೆಯದಾಗುತ್ತದೆ.
ವೃಶ್ಚಿಕ ರಾಶಿ: ಆರೋಗ್ಯದಲ್ಲಿನ ತೊಡಕುಗಳು ನಿವಾರಣೆ ಆಗಲಿದೆ. ನಿಮ್ಮ ಕೆಲಸದಿಂದ ಜನಪ್ರಿಯತೆ ಸಿಗಲಿದೆ. ಉದ್ಯೋಗದಲ್ಲಿ ಬದ್ಧತೆಯಿಲಿ.
ಧನು ರಾಶಿ: ಹಣಕಾಸು ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಕುಟುಂಬದವರ ಜೊತೆ ಬೆರೆಯಲು ಸೂಕ್ತ ಸಮಯ. ಸಾಮಾಜಿಕ ಗೌರವ ಸಿಗಲಿದೆ.
ಮಕರ ರಾಶಿ: ಆಕಸ್ಮಿಕ ಹಣ ಲಾಭವಾಗುವ ಲಕ್ಷಣವಿದೆ. ಪ್ರಯಾಣ ಸಾಧ್ಯತೆಗಳು ಇವೆ. ವಿದ್ಯಾರ್ಥಿಗಳು ಈ ಸಮಯವನ್ನು ಸರಿಯಾಗಿ ಬಳಸಿಕೊಂಡರೆ ಯಶಸ್ಸು ಖಚಿತ.
ಕುಂಭ ರಾಶಿ: ಮೊಬೈಲ್ ಬಳಕೆಯಿಂದ ಈ ದಿನ ನೀವು ದೂರವಿರುವುದು ಒಳಿತು. ಸಾಮಾಜಿಕ ಮನ್ನಣೆಗಳಿಗೆ ಆದ್ಯತೆ ಕೊಡಿ. ಹೊಸ ಸ್ನೇಹಿತರನ್ನು ಪರಿಚಯಿಸಿಕೊಂಡು ಮುನ್ನಡೆಯಿರಿ.
ಮೀನ ರಾಶಿ: ಬಹುದಿನದ ನಿಮ್ಮ ಉದ್ದೇಶ ಈ ದಿನ ಈಡೇರಲಿದೆ. ಒಳ್ಳೆಯ ಬೆಳವಣಿಗೆ ಆಗಲಿದೆ. ಆರೋಗ್ಯದಲ್ಲಿಯೂ ಸುಧಾರಣೆ ಕಾಣಿಸಲಿದೆ.
