ಮೀನುಗಾರಿಕೆಗೆ ಹೋದಾಗ ಸಮುದ್ರಕ್ಕೆ ಬಿದ್ದಿದ್ದ ಅಂಕೋಲಾದ ಮೀನುಗಾರ ಸತೀಶ ಹರಿಕಂತ್ರ ಅವರು ಮೂರು ದಿನದ ನಂತರ ಶವವಾಗಿ ಸಿಕ್ಕಿದ್ದಾರೆ.
ಅಂಕೋಲಾದ ಬಾವಿಕೇರಿ ದೇಶನಭಾಗ ಬಳಿ ಗೇರಕೊಪ್ಪದಲ್ಲಿ ಸತೀಶ ಹರಿಕಂತ್ರ (40) ಅವರು ವಾಸವಾಗಿದ್ದರು. ಬೇಲೆಕೇರೆಯ ಅಯೋಧ್ಯಾ ದೋಣಿ ಮೂಲಕ ಮೀನುಗಾರಿಕೆಗೆ ಹೋಗುತ್ತಿದ್ದರು. ಅಗಸ್ಟ 24ರಂದು ಸಹ ಅವರು ಬೇಲಿಕೇರೆಯಿಂದ ಮೀನುಗಾರಿಕೆಗೆ ಹೊರಟಿದ್ದರು.
ಮೀನಿಗೆ ಹಾಕಿದ ಬಲೆ ಎಳೆಯುವಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದರು. ಸಾಕಷ್ಟು ಹುಡುಕಾಟ ನಡೆಸಿದರೂ ಅವರು ಸಿಕ್ಕಿರಲಿಲ್ಲ. ಅಗಸ್ಟ 27ರಂದು ಬೇಲೆಕೇರಿ ಹೊರಭಾಗದ ಸಮುದ್ರದಲ್ಲಿ ಶವವೊಂದು ಕಾಣಿಸಿದ್ದು, ಆ ದೇಹ ಸತೀಶ ಹರಿಕಂತ್ರ ಅವರದ್ದು ಎಂದು ಖಚಿತವಾಯಿತು. ಸತೀಶ ಅವರ ತಮ್ಮ ರವಿ ಹರಿಕಂತ್ರ ಪೊಲೀಸರಿಗೆ ನೀಡಿದ ಮಾಹಿತಿ ಪ್ರಕಾರ ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದರು.
