ಉತ್ತರ ಕನ್ನಡ ಜಿಲ್ಲೆಯ ಅನೇಕ ಉತ್ಪನ್ನಗಳು ವಿದೇಶಕ್ಕೆ ರಪ್ತಾಗುತ್ತಿವೆ. 2024-25ರ ಒಂದು ವರ್ಷದ ಅವಧಿಯಲ್ಲಿ 101.57 ಕೋಟಿ ರೂ ಮೌಲ್ಯದ ಉತ್ಪನ್ನಗಳು ಈ ಜಿಲ್ಲೆಯಿಂದ ವಿದೇಶಕ್ಕೆ ಹೋಗಿವೆ.
ಉತ್ತರ ಕನ್ನಡ ಜಿಲ್ಲೆಯ 230 ಜನ ವಿದೇಶಗಳಿಗೆ ಸಾಮಗ್ರಿ ರಪ್ತು ಮಾಡುವ ಪರವಾನಿಗೆಪಡೆದಿದ್ದಾರೆ. ಅವರು ಇಲ್ಲಿನ ಕಾಳು ಮೆಣಸು, ಅರಶಿನ, ಸಕ್ಕರೆ, ವೆನಿಲಾ ಬೀನ್ಸ, ಹರ್ಬಲ್ ಟೀ ಸೇರಿ ವಿವಿಧ ವಸ್ತುಗಳನ್ನು ವಿವಿಧ ದೇಶಗಳಿಗೆ ರವಾನಿಸಿದ್ದಾರೆ.
ಸರ್ಕಾರಕ್ಕೆ ಸಿಕ್ಕ ದಾಖಲೆಗಳ ಪ್ರಕಾರ 7340 ಮೆಟ್ರಿಕ್ ಟನ್ ಸಕ್ಕರೆ, 2449 ಮೆಟ್ರಿಕ್ ಟನ್ ಲೇಖನ ಸಾಮಾಗ್ರಿ, 3,11,000 ಕೆಜಿಯಷ್ಟು ಕಾಫಿ, ಅರೆಬಿಕ ರ್ರಿ ಮತ್ತು ರೊಬೋಸ್ಟ ರ್ರಿ ರಪ್ತಾಗಿದೆ. ಇದರೊಂದಿಗೆ 110845 ಕೆಜಿ ಸಾವಯವ ಮೆಣಸಿನಕಾಯಿ ಚಕ್ಕೆಗಳು, ಅರಿಶಿಣ, ಕಪ್ಪು ಮತ್ತು ಬಿಳಿ ಮೆಣಸುಗಳನ್ನು ರಪ್ತು ಮಾಡಲಾಗಿದೆ. 28,044 ಕೆಜಿ ವೆನಿಲ್ಲಾ ಬೀನ್ಸ್ ಮತ್ತು ವೆನಿಲ್ಲಾ ಬೀನ್ಸ್ ಪೌಡರ್ ವಿದೇಶಕ್ಕೆ ಕಳುಹಿಸಲಾಗಿದೆ. 1677.3ಕೆಜಿಯಷ್ಟು ಹರ್ಬಲ್ ಟೀ ಹಾಗೂ ಔಷಧಿಗಳು ಸಹ ಇಲ್ಲಿಂದ ವಿದೇಶಕ್ಕೆ ಹೋಗಿವೆ.
2023-24ರಲ್ಲಿ 156.34 ಕೋಟಿ ರೂ ಮೌಲ್ಯದ ಉತ್ಪನ್ನಗಳು ವಿದೇಶಕ್ಕೆ ರಪ್ತಾಗಿದ್ದವು. ಆ ಅವಧಿಯಲ್ಲಿ ಸಹ 7340 ಮೆಟ್ರಿಕ್ ಟನ್ ಸಕ್ಕರೆ, 2449 ಮೆಟ್ರಿಕ್ ಟನ್ ಲೇಖನ ಸಾಮಾಗ್ರಿ, 3,11,000ಕೆಜಿ ಕಾಫಿ ಅರೆಬಿಕ ಚರ್ರಿ ಮತ್ತು ರೊಬೋಸ್ಟ ಚರ್ರಿ ಸಾಗಾಟವಾಗಿದ್ದವು. 110845 ಕೆಜಿ ಸಾವಯವ ಮೆಣಸಿನಕಾಯಿ ಚಕ್ಕೆಗಳ ಜೊತೆ ಅರಿಶಿಣ, ಕಪ್ಪು ಮತ್ತು ಬಿಳಿ ಮೆಣಸುಗಳನ್ನು ವಿದೇಶಕ್ಕೆ ಕಳುಹಿಸಲಾಗಿತ್ತು. ಆ ವರ್ಷ 5358 ಕೆಜಿ ವೆನಿಲ್ಲಾ ಬೀನ್ಸ್ ಮತ್ತು ವೆನಿಲ್ಲಾ ಬೀನ್ ಪೌಡರ್ ಮತ್ತು ಹರ್ಬಲ್ ಟೀ ಯನ್ನು ರಪ್ತು ಮಾಡಿದ ಬಗ್ಗೆ ದಾಖಲೆಗಳಿವೆ.
ಉತ್ತರ ಕನ್ನಡ ಜಿಲ್ಲೆಯ ಉತ್ಪನ್ನಹೊರತುಪಡಿಸಿ ಬೇರೆ ಜಿಲ್ಲೆಯ ಉತ್ಪನ್ನಗಳು ಇಲ್ಲಿಂದ ವಿದೇಶಕ್ಕೆ ರಪ್ತಾಗುತ್ತಿವೆ. ರಪ್ತುದಾರರ ವಿವಿಧ ಕುಂದು ಕೊರತೆಗಳ ಬಗ್ಗೆ ಜಿಲ್ಲಾ ಕೈಗಾರಿಕಾ ಇಲಾಖೆ ಸಮಾಲೋಚನೆ ನಡೆಸುತ್ತಿದೆ. `ಇಲ್ಲಿನ ಉತ್ಪನ್ನಗಳಿಗೆ ಸೂಕ್ತ ಹಾಗೂ ಉತ್ತಮ ಮಾರುಕಟ್ಟೆ ಒದಗಿಸಲು ಕೈಗಾರಿಕೆಗಳ ಬೆಳವಣಿಗೆಗೆ ಯೋಜನೆ ರೂಪಿಸಲಾಗುತ್ತದೆ’ ಎಂದು ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ ನಾಯ್ಕ ಮಾಹಿತಿ ನೀಡಿದರು.
