ಯಲ್ಲಾಪುರದ ಪುಟ್ಟಿ ಚನ್ನಾಗೌಡ ಅವರು ಶಿರಸಿಯ ಬನವಾಸಿ ಬಳಿಯಿರುವ ತಮ್ಮ ತಂಗಿ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸಾವಿಗೂ ಮುನ್ನ ಅವರು ಎರಡು ಗುಟುಕು ನೀರು ಕುಡಿದಿದ್ದು, ಮೂರನೇ ಗುಟುಕು ಗಂಟಲಿನಲ್ಲಿ ಇಳಿಯುವುದರ ಮೊದಲೇ ಸಾವನಪ್ಪಿದ್ದಾರೆ.
ಯಲ್ಲಾಪುರದ ಬಳಗಾರ ಬಳಿಯ ಹಂಸನಗದ್ದೆಯಲ್ಲಿ ಪುಟ್ಟಿ ಚನ್ನಾಗೌಡ (75) ಅವರು ವಾಸವಾಗಿದ್ದರು. ವಯಸ್ಸಾದ ಕಾರಣ ಅವರ ಆರೋಗ್ಯ ಹದಗೆಟ್ಟಿದ್ದು, ಅಗಸ್ಟ 23ರಂದು ಶಿರಸಿಗೆ ಹೋಗಿದ್ದರು. ಅಲ್ಲಿಂದ ಮುಂದೆ ತಮ್ಮ ತಂಗಿಮನೆಯಾದ ಹುಡ್ಲಕೊಪ್ಪಕ್ಕೆ ತೆರಳಿ ಅಲ್ಲಿಯೇ ಆಶ್ರಯಪಡೆದಿದ್ದರು.
ಅಗಸ್ಟ 28ರ ರಾತ್ರಿ ಮಲಗಿದ್ದ ಪುಟ್ಟಿ ಚನ್ನಾಗೌಡ ಅವರು ಬಾಯಾರಿಕೆ ಆದ ಬಗ್ಗೆ ತಂಗಿ ಭವಾನಿ ಅವರಲ್ಲಿ ಹೇಳಿದರು. ಆಗ, ಭವಾನಿ ಅವರು ನೀರು ತಂದು ಕೊಟ್ಟರು. ಎರಡು ಗುಟುಕು ನೀರು ಕುಡಿದ ಅವರ ಮೂರನೇ ಗುಟಕು ನೀರನ್ನು ಬಾಯಲ್ಲಿ ಹಾಕಿದ್ದರು. ಆದರೆ, ಅದು ಗಂಟಲಿನಿoದ ಒಳಗೆ ಹೋಗಲಿಲ್ಲ.
ಬಾಯಲ್ಲಿದ್ದ ನೀರನ್ನು ಒಮ್ಮೆಲೆ ಹೊರ ಉಗಿದು ಅವರು ಸಾವನಪ್ಪಿದರು. ಶಿರಸಿ ಸರ್ಕಾರಿ ಆಸ್ಪತ್ರೆ ವೈದ್ಯರು ಪುಟ್ಟಿ ಚನ್ನಾಗೌಡ ಅವರ ಸಾವನ್ನು ಖಚಿತಪಡಿಸಿದರು. ಶಂಕರ ಚನ್ನಾಗೌಡ ಅವರು ನೀಡಿದ ಮಾಹಿತಿ ಪ್ರಕಾರ ಬನವಾಸಿ ಪೊಲೀಸರು ಪ್ರಕರಣ ದಾಖಲಿಸಿದರು.
