ಮೇಷ ರಾಶಿ: ಈ ದಿನ ನಿಮಗೆ ಲಾಭ ಹಾಗೂ ಜಯ ಸಿಗಲಿದೆ. ಸಾಮಾಜಿಕ ಹಾಗೂ ರಾಜಕೀಯ ಮನ್ನಣೆ ದೊರೆಯಲಿದೆ. ಆಸೆಗಳು ಈಡೇರಲಿದೆ. ಶತ್ರುಗಳು ಸಮೀಪದಲ್ಲಿರುವುದರಿಂದ ಎಚ್ಚರಿಕೆ ಅಗತ್ಯ. ದೂರ ಪ್ರಯಾಣ ಉತ್ತಮವಲ್ಲ.
ವೃಷಭ ರಾಶಿ: ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಉದ್ಯೋಗದ ವಿಷಯದಲ್ಲಿ ಇನ್ನಷ್ಟು ಶ್ರಮವಹಿಸಬೇಕು. ಹಣಕಾಸು ದೃಷ್ಠಿಯಿಂದ ಈ ದಿನ ಉತ್ತಮವಾಗಿದ್ದರೂ ಖರ್ಚು-ವೆಚ್ಚಗಳನ್ನು ತಗ್ಗಿಸಿ.
ಮಿಥುನ ರಾಶಿ: ನಿಮ್ಮ ಬುದ್ಧಿವಂತಿಕೆ ಕೆಲಸದ ವಿಷಯದಲ್ಲಿ ಪ್ರಯೋಜನಕ್ಕೆ ಬರಲಿದೆ. ಗೆಳೆಯರಿಂದ ಸಹಾಯ ಸಿಗಲಿದೆ. ವೃತ್ತಿ ವಿಷಯದಲ್ಲಿ ಎಚ್ಚರಿಕೆ ಅಗತ್ಯ.
ಕರ್ಕ ರಾಶಿ: ವಿವಾದಗಳಿಂದ ನೀವು ದೂರವಿರುವುದು ಒಳಿತು. ಮನಸ್ಸು ಶಾಂತವಾಗಿರುವAತೆ ನೋಡಿಕೊಳ್ಳಿ. ಸಹನೆಯಿಂದ ವರ್ತಿಸಿ.
ಸಿಂಹ ರಾಶಿ: ಆರೋಗ್ಯ ಸಮಸ್ಯೆಗಳು ಬರಬಹುದು. ವೈದ್ಯರನ್ನು ಭೇಟಿ ಮಾಡಿ. ಸ್ಪರ್ಧಾತ್ಮಕ ವಿಷಯದಲ್ಲಿ ಶ್ರಮ ಅಗತ್ಯ. ನಿಮ್ಮೊಳಗಿನ ಬಯಕೆಗಳನ್ನು ಬಹಿರಂಗಪಡಿಸಲು ಸೂಕ್ತ ಸಮಯವಲ್ಲ.
ಕನ್ಯಾ ರಾಶಿ: ಆರೋಗ್ಯ ಸುಧಾರಣೆಗಾಗಿ ಯೋಗ ಮಾಡಿ. ಮಾನಸಿಕ ಸಮನ್ವಯತೆ ಕಾಪಾಡಿಕೊಳ್ಳಿ. ನಾಯಕತ್ವ ಗುಣ ನಿಮಗೆ ಶಕ್ತಿ ಕೊಡಲಿದೆ. ಸಮಸ್ಯೆಗಳು ದೂರವಾಗಲಿದೆ.
ತುಲಾ ರಾಶಿ: ಮನೆ ಕೆಲಸಗಳು ಸರಿಯಾಗಿ ಸಾಗಲಿದೆ. ಆರ್ಥಿಕ ಸ್ಥಿತಿ ಹದಗೆಡುವ ಲಕ್ಷಣವಿದೆ. ಜಾಗೃತೆಯಿಂದ ವ್ಯವಹರಿಸಿ.
ವೃಶ್ಚಿಕ: ವೈಯಕ್ತಿಕ ಜೀವನದಲ್ಲಿ ತೊಂದರೆ ಎದುರಾಗುವುದನ್ನು ತಪ್ಪಿಸಲು ಕುಟುಂಬದ ಜೊತೆ ಸಮಯ ಕಳೆಯಿರಿ. ಹೂಡಿಕೆ ವಿಷಯದಲ್ಲಿ ಮುನ್ನಡೆ ಸಾಧ್ಯ. ಉದ್ಯೋಗದಲ್ಲಿ ಕಿರಿಕಿರಿ ಆಗಲಿದೆ. ಅಪಾಯದ ಸನ್ನಿವೇಶಗಳಿಂದ ದೂರವಿರಿ. ವಿರೋಧಿಗಳಿಂದ ಎಚ್ಚರಿಕೆ
ಧನು ರಾಶಿ: ಉದ್ಯೋಗ ಹಾಗೂ ವ್ಯವಹಾರದಲ್ಲಿ ಮುನ್ನಡೆ ಸಾಧ್ಯವಿದೆ. ಮಹತ್ವದ ಹುದ್ದೆಗಳು ದೊರೆಯಲಿದೆ. ಆರ್ಥಿಕ ಸ್ಥಿತಿಯೂ ಉತ್ತಮವಾಗಿರಲಿದೆ.
ಮಕರ ರಾಶಿ: ಈ ದಿನ ನಿಮಗೆ ಸಾಧಾರಣವಾಗಿರಲಿದೆ. ಸೋಮಾರಿತನ ಒಳ್ಳೆಯದಲ್ಲ. ಕೆಲಸದಲ್ಲಿ ಜಾಗೃತರಾಗಿರಿ.
ಕುಂಭ ರಾಶಿ: ಈ ದಿನ ನಿಮ್ಮ ಚಿಂತನೆಗಳಿಗೆ ಸೂಕ್ತ ಸಮಯ ಸಿಗಲಿದೆ. ಮಾನಸಿಕ ಗೊಂದಲಗಳಿAದ ದೂರವಿರಿ. ಧ್ಯಾನ ಮಾಡಿ, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ.
ಮೀನ ರಾಶಿ: ನಿಮ್ಮ ಜವಾಬ್ದಾರಿಗಳು ಹೆಚ್ಚಳವಾಗಲಿದೆ. ಖರ್ಚು ವೆಚ್ಚಗಳ ಬಗ್ಗೆ ಗಮನಹರಿಸಿ. ಭಾವನಾತ್ಮಕ ವಿಷಯಗಳು ನಿಮ್ಮನ್ನು ಕಾಡಲಿದೆ.
