ಯಲ್ಲಾಪುರದ ವಿವಿಧ ಕಡೆ ಪ್ರತಿಷ್ಠಾಪಿಸಲಾದ ಗಣೇಶ ಮಂಟಪಕ್ಕೆ ಶುಕ್ರವಾರ ಬಾಂಬ್ ನಿಷ್ಕ್ರಿಯ ದಳದವರು ಭೇಟಿ ನೀಡಿದ್ದಾರೆ. ಶ್ವಾನದಳವೂ ಆಗಮಿಸಿದ್ದು, ಎಲ್ಲಾ ಕಡೆ ತಪಾಸಣೆ ನಡೆಸಿದ್ದಾರೆ.
ಗಣೇಶ ಉತ್ಸವದ ಅವಘಡ ತಡೆಗಾಗಿ ಪೊಲೀಸ್ ಇಲಾಖೆ ಶಿರಸಿ ವಿಭಾಗಕ್ಕೆ ಬಾಂಬ್ ನಿಷ್ಕ್ರಿಯ ದಳವನ್ನು ನಿಯೋಜಿಸಿದೆ. ಹೀಗಾಗಿ ಅವರು ಎಲ್ಲಾ ಕಡೆ ತೆರಳಿ ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಕಾಳಮ್ಮನಗರ, ನೂತನ ನಗರ, ಟಿಳಕ ಚೌಕ, ಕಿರವತ್ತಿ, ಹೊಸಳ್ಳಿ ಸೇರಿದಂತೆ 8 ಕಡೆ ಈ ದಿನ ತಪಾಸಣೆ ನಡೆದಿದೆ.
ಬಾಂಬ್ ನಿಷ್ಕ್ರಿಯ ದಳದವರನ್ನು ನೋಡಿದ ಜನ ಆತಂಕಕ್ಕೆ ಒಳಗಾಗಿದ್ದರು. ಆದರೆ, ಪೊಲೀಸರು `ಇದೊಂದು ಸಹಜ ಪ್ರಕ್ರಿಯೆ’ ಎಂದು ಹೇಳಿ ಸಮಾಧಾನ ಮಾಡಿದರು. ಕರ್ತವ್ಯದಲ್ಲಿದ್ದ ಅಧಿಕಾರಿಗಳು ಸಹ `ವದಂತಿಗಳಿಗೆ ಕಿವಿಕೊಡಬೇಡಿ’ ಎಂದು ಕಿವಿಮಾತು ಹೇಳಿದರು.
