`ವರ್ಷದಿಂದ ವರ್ಷಕ್ಕೆ ಭೂಮಿಯ ಬೆಲೆ ಹೆಚ್ಚಾಗುತ್ತಿದ್ದು, ಜಮೀನು ಮಾರುವ ರೈತರು ಭವಿಷ್ಯದ ಬಗ್ಗೆಯೂ ಚಿಂತಿಸಬೇಕು’ ಎಂದು ಗ್ರೀನ್ ಆಪಲ್ ಪ್ರಾಬ್ ಸಲ್ಯುಶನ್ ನಿರ್ದೇಶಕ ಆದಿತ್ಯ ನಾಯ್ಕ ಅವರು ಹೇಳಿದ್ದಾರೆ.
`ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳು ಬರುವ ನಿರೀಕ್ಷೆಯಿದೆ. ಆ ಯೋಜನೆಗಳ ಜಾರಿ ನಂತರ ಭೂಮಿಯ ಬೆಲೆ ಇನ್ನಷ್ಟು ಹೆಚ್ಚಳವಾಗಲಿದೆ. ಹೀಗಾಗಿ ರೈತರು ಈಗಲೇ ಭೂಮಿ ಮಾರುವ ಮುನ್ನ ಕೆಲ ಕಾಲ ಕಾಯುವುದು ಉತ್ತಮ’ ಎಂದವರು ಭೂ ಮಾಲಕರಿಗೆ ಸಲಹೆ ನೀಡಿದ್ದಾರೆ.
ಗ್ರೀನ್ ಆಪಲ್ ಪ್ರಾಬ್ ಸಲ್ಯುಶನ್ ಬೆಂಗಳೂರಿನ ಪ್ರಸಿದ್ಧ ಕಂಪನಿಯಾಗಿದ್ದು, ತಮ್ಮ ಕೆಲಸದ ಜೊತೆ ವಿವಿಧ ವಿಷಯಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಸಾಮಾಜಿಕ ಕಳಕಳಿಯ ಸೇವೆಯಿಂದ ಈ ಕಂಪನಿ ಬೆಳೆದಿದ್ದು, `ಒಟ್ಟಿಗೆ ಬೆಳೆಯೋಣ’ ಎಂಬ ತತ್ವದ ಅಡಿ ರೈತರ ಬೆಳವಣಿಗೆಗೂ ಸಹಕಾರಿಯಾಗಿದೆ. ಈ ಹಿನ್ನಲೆ ಈ ಕಂಪನಿ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಜನ ಜಾಗೃತಿ ಅಭಿಯಾನ ನಡೆಸಿದ್ದು, ಅದರ ಭಾಗವಾಗಿ ಈ ವಿಶೇಷ ಲೇಖನವನ್ನು ಪ್ರಕಟಿಸುತ್ತಿದೆ.
`ಎಂಥ ಕಷ್ಟ ಪರಿಸ್ಥಿತಿಯಲ್ಲಿಯೂ ರೈತರು ತಮ್ಮ ಬಳಿಯಿರುವ ಪೂರ್ಣ ಪ್ರಮಾಣದ ಭೂಮಿ ಮಾರಾಟ ಮಾಡಬಾರದು. ತೀರಾ ಕಷ್ಟ ಎನಿಸಿದಾಗ ತಮ್ಮ ಬಳಿಯಿರುವ ಭೂಮಿಯ ಒಂದು ಭಾಗವನ್ನು ಮಾತ್ರ ಮಾರಾಟ ಮಾಡಬೇಕು. ಅದು ಸಹ ಆ ಭೂಮಿಯನ್ನು ಖರೀದಿಸಿದವರು ಅಲ್ಲಿ ವಿವಿಧ ಅಭಿವೃದ್ಧಿ ಚಟುವಟಿಕೆ ಮಾಡುತ್ತಾರೆ ಎಂದು ಖಾತ್ರಿಪಡಿಸಿಕೊಂಡು ಮಾರಾಟ ಮಾಡಬೇಕು. ಮಾರಾಟ ಮಾಡಿದ ಭೂಮಿ ಅಭಿವೃದ್ಧಿ ಆದಾಗ ಅದರ ಪಕ್ಕದಲ್ಲಿರುವ ರೈತನ ಭೂಮಿಗೂ ಭಾರೀ ಬೇಡಿಕೆ ಬರುತ್ತದೆ. ಆ ವೇಳೆ ರೈತ ತಮ್ಮ ಬಳಿಯಿರುವ ಭೂಮಿಯ ಇನ್ನೊಂದು ಭಾಗ ಮಾರಾಟ ಮಾಡಿದರೆ ಮೊದಲ ಮಾರಾಟಕ್ಕಿಂತ 10 ಪಟ್ಟು ಹೆಚ್ಚಿನ ಬೆಲೆ ಸಿಗುತ್ತದೆ’ ಎಂಬ ಲೆಕ್ಕಾಚಾರದ ಮಾತುಗಳನ್ನು ಹೇಳಿದ್ದಾರೆ.
`ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ವಿಮಾನ ನಿಲ್ದಾಣ, ಬಂದರು ನಿರ್ಮಾಣದ ಚರ್ಚೆ ನಡೆದಿದೆ. ಈಗಿರುವ ಪ್ರದೇಶಗಳು ಸಹ ಭವಿಷ್ಯದಲ್ಲಿ ಅಭಿವೃದ್ಧಿ ಆಗಲಿದ್ದು, ಆ ಅವಧಿಯವರೆಗೂ ರೈತರು ತಾಳ್ಮೆಯಿಂದ ಕಾದಲ್ಲಿ ಮುಂದಿನ ತಲೆಮಾರಿಗೆ ಉತ್ತಮ ಉಡುಗರೆ ಕೊಡಲು ಸಾಧ್ಯ’ ಎಂಬುದು ಅವರ ಅಭಿಪ್ರಾಯ. `ಜಿಲ್ಲೆಯ ಸಾಕಷ್ಟು ಭೂಮಿಗಳು ಉತ್ತಮ ರಸ್ತೆ ಹೊಂದಿಲ್ಲ. ಇಕ್ಕಟ್ಟಾದ ರಸ್ತೆ ಹೊಂದಿದ ಭೂಮಿಗಳಿಗೆ ಉತ್ತಮ ಬೆಲೆ ಬರಲು ಸಾಧ್ಯವಿಲ್ಲ. ರಸ್ತೆ ತಕರಾರುಗಳ ಬಗ್ಗೆ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣಗಳನ್ನು ಬಗೆಹರಿಸಿಕೊಂಡರೂ ಭೂಮಿಗೆ ಬೆಲೆ ಬರುವುದು ನಿಶ್ಚಿತ’ ಎಂದವರು ತಮ್ಮ ಅನುಭವಗಳನ್ನು ಬಿಚ್ಚಿಟ್ಟರು.
`ಯಾವುದೇ ಕ್ಷೇತ್ರ ಅಭಿವೃದ್ಧಿ ಆಗಬೇಕು ಎಂದರೆ ಅಕ್ಕ-ಪಕ್ಕದವರ ಸಹಕಾರ ಅತಿ ಮುಖ್ಯ. ಅಭಿವೃದ್ಧಿ ಆದ ಕ್ಷೇತ್ರಗಳಿಗೆ ಹೂಡಿಕೆದಾರರು ಬರಲಿದ್ದು, ಹೆಚ್ಚಿನ ದರ ಕೊಟ್ಟು ಭೂಮಿ ಖರೀದಿಸುತ್ತಾರೆ. ಭವಿಷ್ಯದಲ್ಲಿ ಅಂಕೋಲಾ, ಕುಮಟಾ, ಹೊನ್ನಾವರ ಭಾಗವೂ ಕಾರವಾರಕ್ಕಿಂತಲೂ ಹೆಚ್ಚಿನ ಅಭಿವೃದ್ಧಿ ಆಗುವ ಸಾಧ್ಯತೆಗಳಿದೆ. ಕಾರವಾರದಲ್ಲಿ ಎಲ್ಲಾ ಭೂಮಿಗಳಿಗೆ ತೆರಳಲು ಸೂಕ್ತ ರಸ್ತೆ ಇಲ್ಲದಿರುವುದು ಹಿನ್ನಡೆಗೆ ಕಾರಣವಾಗಿದ್ದು, ಉಳಿದ ತಾಲೂಕುಗಳಲ್ಲಿ ಈ ಸಮಸ್ಯೆ ಬಾರದಂತೆ ನೋಡಿಕೊಳ್ಳಬೇಕು’ ಎಂದವರು ಜನರಿಗೆ ಸಲಹೆ ನೀಡಿದರು.
`ಕರಾವಳಿ ಭಾಗದ ಭೂಮಿಗೆ ಮುಂದಿನ ದಿನದಲ್ಲಿ ಮಹಾನಗರದಲ್ಲಿನ ದರ ಬರಲಿದೆ. ಬೆಂಗಳೂರಿಗೆ ಸ್ಪರ್ಧೆ ನೀಡುವ ನಿಟ್ಟಿನಲ್ಲಿ ಇಲ್ಲಿನ ಭೂಮಿಯ ದರ ಏರಿಕೆ ಆಗಲಿದೆ. ಭೂ ಪರಿವರ್ತನೆ ಹಾಗೂ ಇ ಸ್ವತ್ತು ಆಗಿದ್ದ ಭೂಮಿಗಳಿಗಂತೂ ಉತ್ತಮ ಬೇಡಿಕೆ ಸಿಗಲಿದ್ದು, ಭೂಮಿ ಮಾರಾಟಗಾರರು ಕಾಗದಪತ್ರಗಳನ್ನು ಸರಿಪಡಿಸಿಕೊಳ್ಳುವುದು ಉತ್ತಮ ಆಯ್ಕೆ’ ಎಂದವರು ವಿವರಿಸಿದರು. `ಮುಖ್ಯವಾಗಿ ಭೂಮಿಗೆ ಕನಿಷ್ಟ 40 ಅಡಿ ರಸ್ತೆಯಿರುವಂತೆ ನೋಡಿಕೊಳ್ಳಬೇಕು. ಆಗ, ಹೂಡಿಕೆದಾರರ ಜೊತೆ ಭೂ ಮಾಲಕರು ಒಪ್ಪಂದ ಮಾಡಿಕೊಂಡು ಜಂಟಿಯಾಗಿ ಭೂಮಿ ಅಭಿವೃದ್ಧಿ ಮಾಡಲು ಸಾಧ್ಯವಿದೆ. ಅದರಿಂದ ಭೂ ಮಾಲಕರಿಗೂ ಉತ್ತಮ ಆದಾಯ ಸಿಗುತ್ತದೆ’ ಎಂಬ ಮಾಹಿತಿ ನೀಡಿದರು.
ಇನ್ನೂ `ಹೆದ್ದಾರಿಯಿಂದ 2-3ಕಿಮೀ ದೂರದಲ್ಲಿದ್ದವರು ತಮ್ಮ ದೊಡ್ಡ ಭೂಮಿಯನ್ನು ದಾಖಲೆಗಳ ಪ್ರಕಾರ ಚಿಕ್ಕ ಚಿಕ್ಕ ಹಿಡುವಳಿಯನ್ನಾಗಿ ಮಾಡಿಕೊಳ್ಳಬೇಕು. ಇದರಿಂದ ದೊಡ್ಡ ದೊಡ್ಡ ಯೋಜನೆಗಳು ಬಂದಾಗ ಪರಿಹಾರಪಡೆಯಲು ಅನುಕೂಲವಾಗಲಿದೆ. ಚಿಕ್ಕ ಚಿಕ್ಕ ಹಿಡುವಳಿಗಳ ಪೈಕಿ ಅಗತ್ಯವಿದ್ದಾಗ ಮಾತ್ರ ಭೂಮಿಯ ಅಲ್ಪ ಭಾಗವನ್ನು ಮಾರಾಟ ಮಾಡಬೇಕು. ಎಲ್ಲಾ ಭೂಮಿಯನ್ನು ಒಟ್ಟಿಗೆ ಮಾರಾಟ ಮಾಡುವುದಕ್ಕಿಂತ ಹಂತ ಹಂತವಾಗಿ ಮಾರಾಟ ಮಾಡಿದರೆ ಲಾಭದ ನಿರೀಕ್ಷೆ ಹೆಚ್ಚು’ ಎಂದವರು ತಮ್ಮ ಅನುಭವ ಹಂಚಿಕೊoಡರು.
