ಶಿರಸಿಯ ಬನವಾಸಿ ಬಳಿ ಜೂಜಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಐವರು ಸಿಕ್ಕಿಬಿದ್ದಿದ್ದು, ಎಲ್ಲರಿಗೂ ಪೊಲೀಸರು ಕಾನೂನು ಪಾಠ ಮಾಡಿದ್ದಾರೆ.
ಅಗಸ್ಟ 28ರಂದು ರಾತ್ರಿ ಮಂಟಗಲ್ ಓಣಿಕೇರಿ ಗ್ರಾಮದ ಭೂತೇಶ್ವರ ದೇವಾಲಯದ ಬಳಿ ಮೊಂಬತ್ತಿ ಬೆಳಕು ಉರಿಯುತ್ತಿತ್ತು. ಆ ಬೆಳಕಿನ ಕಡೆ ಬನವಾಸಿ ಪಿಎಸ್ಐ ಮಹಾಂತಪ್ಪ ಕುಂಬಾರ್ ತಮ್ಮ ಸಿಬ್ಬಂದಿ ಜೊತೆ ಹೋಗಿದ್ದರು. ಆಗ ಅಲ್ಲಿ, ಅದೇ ಊರಿನ ಚಾಲಕ ಮನೋಹರ ಪೂಜಾರಿ ದುಡ್ಡು ಹರಡಿಕೊಂಡು ಕುಳಿತಿದ್ದರು. ಅವರ ಜೊತೆ ಕೂಲಿ ಕೆಲಸ ಮಾಡುವ ರವೀಶ ಉಪ್ಪಾರ, ರವೀಂದ್ರ ಪೂಜಾರಿ, ಶೇಖರ ಉಪ್ಪಾರ ಹಾಗೂ ವೆಲ್ಡಿಂಗ್ ಕೆಲಸ ಮಾಡುವ ಪ್ರದೀಪ ಗಾಣಿಗ ಇಸ್ಪಿಟ್ ಆಡುತ್ತಿದ್ದರು.
ಪೊಲೀಸರು ಆ ಐದು ಜನರನ್ನು ವಶಕ್ಕೆಪಡೆದರು. `ಹಣಕಟ್ಟಿ ಅಂದರ್ ಬಾಹರ್ ಆಡುವುದು ಅಪರಾಧ’ ಎಂದು ತಿಳುವಳಿಕೆ ಮೂಡಿಸಿದರು. ಅದಾದ ನಂತರ ಅರ್ದ ಉರಿದ ಮೊಂಬತ್ತಿ, ಅಲ್ಲಿದ್ದ 1450ರೂ ಹಣ, ಇಸ್ಪಿಟ್ ಎಲೆ ಜೊತೆ ಇನ್ನಿತರ ಪರಿಕ್ಕರಗಳನ್ನು ವಶಕ್ಕೆಪಡೆದರು. ಆ ಐದು ಜನರ ವಿರುದ್ಧ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸಿದರು.
