ಅಂಕೋಲಾದ ಕಾಕರಮಠದಲ್ಲಿ ವಾಸವಾಗಿದ್ದ ಅನೀಲಕುಮಾರ ಎಂಬಾತರು ಏಕಾಏಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದರಿಂದ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ನಾಗಶ್ರೀ ಅವರು ಕಂಗಾಲಾಗಿದ್ದಾರೆ.
ಅoಕೋಲಾ ಅಂಬಾರಕೊಡ್ಲದ ನಾಗಶ್ರೀ ಅವರು ಮೂರು ವರ್ಷದ ಹಿಂದೆ ಬೆಂಗಳೂರಿನ ಅನಿಲಕುಮಾರ ಅವರನ್ನು ಪ್ರೀತಿಸಿದ್ದರು. ಅದರಂತೆ ಅವರನ್ನೇ ಮದುವೆ ಆಗಿದ್ದರು. ಅನಿಲಕುಮಾರ ಅವರು ಅಂಕೋಲಾಗೆ ಆಗಮಿಸಿ ಕಾಕರಮಠದಲ್ಲಿ ಬಾಡಿಗೆ ಮನೆ ಮಾಡಿದ್ದರು.
ಟೇಲರಿಂಗ್ ವೃತ್ತಿ ಮಾಡಿಕೊಂಡು ಅನಿಲಕುಮಾರ ಅವರು ಸಂಸಾರ ಸರಿದೂಗಿಸುತ್ತಿದ್ದರು. ಈ ನಡುವೆ ಅನಿಲಕುಮಾರ ಅವರು ಸರಾಯಿ ಸೇವನೆ ಶುರು ಮಾಡಿದರು. ಅಗಸ್ಟ 29ರಂದು ಎದೆನೋವು ಎಂದು ಅನಿಲಕುಮಾರ ಅವರು ಆಸ್ಪತ್ರೆಗೆ ಹೋಗಿ ಬಂದಿದ್ದರು. ಆ ದಿನ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದರು.
ರಾತ್ರಿ ಸರಾಯಿ ಕುಡಿದ ಅವರು ಊಟ ಮಾಡಿದ್ದು, 10.30ಕ್ಕೆ ಶೌಚಾಲಯಕ್ಕೆ ಹೋದರು. ಅಲ್ಲಿ ತಮ್ಮ ಲುಂಗಿಯಿAದ ನೇಣು ಹಾಕಿಕೊಂಡು ಸಾವನಪ್ಪಿದರು. ಅವರ ಸಾವಿಗೆ ಕಾರಣವೂ ಗೊತ್ತಾಗಲಿಲ್ಲ. ನಾಗಶ್ರೀ ಅವರು ನೀಡಿದ ಮಾಹಿತಿ ಅನ್ವಯ ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದರು.
