ಕಳೆದ 24 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆಯಲ್ಲಿರುವ ರಾಘವೇಂದ್ರ ಹೆಗಡೆ ಅವರಿಗೆ ರಾಷ್ಟ್ರಪತಿ ಪದಕ ದೊರೆತಿದೆ. ಜನಸ್ನೇಹಿ ಪೊಲೀಸ್ ಅಧಿಕಾರಿಯಾಗಿ ಅವರು ಮಾಡಿದ ಸೇವೆಯನ್ನು ಸರ್ಕಾರ ಗುರುತಿಸಿದೆ.
ರಾಘವೇಂದ್ರ ಕೃಷ್ಣಮೂರ್ತಿ ಹೆಗಡೆ ಅವರು ಸಿದ್ದಾಪುರದ ಹುಲಿಮನೆ ಗ್ರಾಮದವರು. ಪೊಲೀಸ್ ಇಲಾಖೆಯಲ್ಲಿ ವಿವಿಧ ಹಂತದ ಹುದ್ದೆಗಳನ್ನು ಅವರು ಕರ್ತವ್ಯ ನಿಭಾಯಿಸಿದ್ದಾರೆ. ತಮಗಿರುವ ಅನುಭವ ಹಾಗೂ ಅರ್ಹತೆ ಆಧಾರದಲ್ಲಿ ಅವರು ಸದ್ಯ ಪೊಲೀಸ್ ಅಧೀಕ್ಷಕರಾಗಿದ್ದಾರೆ.
ಬೆಂಗಳೂರಿನ ಸಿಐಡಿ ಪ್ರಧಾನ ಕಚೇರಿಯಲ್ಲಿ ರಾಘವೇಂದ್ರ ಹೆಗಡೆ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಅಗಸ್ಟ 30ರಂದು ರಾಜ್ಯಪಾಲ ಥಾವರಚಂದ್ರ ಗೆಹ್ಲೋಟ್ ಅವರು ರಾಘವೇಂದ್ರ ಹೆಗಡೆ ಅವರಿಗೆ ರಾಷ್ಟ್ರಪತಿ ಪದಕ ಪ್ರಧಾನ ಮಾಡಿದ್ದಾರೆ. ರಾಜಭವನದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ ಪರಮೇಶ್ವರ ಸೇರಿ ಅನೇಕರು ಸಾಕ್ಷಿಯಾಗಿದ್ದರು.
