ಹೊನ್ನಾವರದಲ್ಲಿ ಹಂದಿ ಕಾಟ ಹೆಚ್ಚಾಗಿದೆ. ತಮ್ಮ ಪಾಡಿಗೆ ತಾವು ಬೈಕಿನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಈ ಹಂದಿ ಬಲಿಪಡೆದಿದೆ.
ಹೊನ್ನಾವರದ ಕಡ್ಲೆ ಬಳಿಯ ಗೋಡೆಕೇರಿಯಲ್ಲಿ ನಾಗರಾಜ ಗೌಡ (32) ಅವರು ವಾಸವಾಗಿದ್ದರು. ಕಟ್ಟಡ ಕಾರ್ಮಿಕರಾಗಿದ್ದ ಅವರು ಸೆಂಟ್ರಿಕ್ ಕೆಲಸದಲ್ಲಿ ಪರಿಣಿತಿಪಡೆದಿದ್ದರು. ಅದೇ ಕಾಯಕದ ಮೂಲಕ ನಾಗರಾಜ ಗೌಡ ಅವರು ಜೀವನ ಕಟ್ಟಿಕೊಂಡಿದ್ದರು.
ಅಗಸ್ಟ 31ರ ರಾತ್ರಿ 10.15ರ ಆಸುಪಾಸಿಗೆ ನಾಗರಾಜ ಗೌಡ ಅವರು ಬೈಕಿನಲ್ಲಿ ಹೋಗುತ್ತಿದ್ದರು. ಹೊನ್ನಾವರದಿಂದ ಅರೆಗುಂಡಿ ರಸ್ತೆ ಮಾರ್ಗವಾಗಿ ಅವರು ಸಂಚರಿಸುತ್ತಿದ್ದರು. ಸಂತೆಗುಳಿ ಗ್ರಾಮದ ಶಾಲೆಯ ಬಳಿ ಅವರ ಬೈಕಿಗೆ ಅಡ್ಡವಾಗಿ ಹಂದಿಯೊAದು ಬಂದಿತು. ಅವರ ಬೈಕಿನ ವೇಗವೂ ಎಂದಿಗಿAತ ಜಾಸ್ತಿಯೇ ಇತ್ತು.
ಆ ಹಂದಿಗೆ ಬೈಕು ಡಿಕ್ಕಿಯಾಗುವುದನ್ನು ತಪ್ಪಿಸುವುದಕ್ಕಾಗಿ ನಾಗರಾಜ ಗೌಡ ಅವರು ಸಾಹಸ ಮಾಡಿದರು. ವೇಗವಾಗಿದ್ದ ಬೈಕನ್ನು ಒಮ್ಮೆಲೆ ಬೇರೆ ದಿಕ್ಕಿನ ಕಡೆ ತಿರುಗಿಸಿದರು. ಇದರಿಂದ ಹಂದಿಗೆ ಬೈಕ್ ಗುದ್ದುವುದು ತಪ್ಪಿತು. ಆ ಹಂದಿ ಪ್ರಾಣಾಪಾಯದಿಂದ ಪಾರಾಯಿತು. ಆದರೆ, ಆ ಬೈಕು ನೆಲಕ್ಕೆ ಅಪ್ಪಳಿಸಿತು. ನಾಗರಾಜ ಗೌಡ ಅವರ ತಲೆಯೂ ಎರಡು ಹೋಳಾಯಿತು.
ಅಪಘಾತದ ರಭಸಕ್ಕೆ ನಾಗರಾಜ ಗೌಡ ಅವರು ಅಲ್ಲಿಯೇ ಪ್ರಾಣಬಿಟ್ಟರು. ನಾಗರಾಜ ಗೌಡ ಅವರ ಅಣ್ಣ ಮಹೇಶ ಗೌಡ ಅವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಹೊನ್ನಾವರ ಪೊಲೀಸರು ಸ್ಥಳ ಪರಿಶೀಲನೆ ಮಾಡಿ, ಪ್ರಕರಣ ದಾಖಲಿಸಿದರು.
