ಮೇಷ ರಾಶಿ: ನಿಮ್ಮ ಮನಸ್ಸಿನ ಗೊಂದಗಳನ್ನು ಬಗೆಹರಿಸಿಕೊಳ್ಳಿ. ನೂತನ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ. ಧೈರ್ಯದಿಂದ ನಿರ್ಧಾರಗಳನ್ನು ಪ್ರಕಟಿಸಿ.
ವೃಷಭ ರಾಶಿ: ಅತಿಯಾದ ಆತ್ಮ ವಿಶ್ವಾಸ ಒಳ್ಳೆಯದಲ್ಲ. ಆತುರ ನಿರ್ಧಾರವನ್ನು ಮಾಡಬೇಡಿ. ನಿಧಾನವಾಗಿ ಚಿಂತಿಸಿ, ನಿರ್ಣಯ ಕೈಗೊಳ್ಳಿ. ದೂರ ಪ್ರಯಾಣದ ಸಾಧ್ಯತೆಗಳು ಇವೆ.
ಮಿಥುನ ರಾಶಿ: ಭೂಮಿ, ವಾಹನ ಖರೀದಿ ಸೇರಿ ಹೂಡಿಕೆಯ ವಿಷಯಗಳ ಚರ್ಚೆಗೆ ಈ ದಿನ ಉತ್ತಮ. ಹಣಕಾಸು ವಿಚಾರದಲ್ಲಿ ಎಚ್ಚರಿಕೆಯಿಂದ ವ್ಯವಹರಿಸದೇ ಇದ್ದರೆ ಮೋಸವಾಗುವ ಸಾಧ್ಯತೆಯಿದೆ. ವ್ಯಸನಗಳಿಂದ ದೂರವಿರಿ.
ಕರ್ಕ ರಾಶಿ: ನಿಮಗ ಲಾಭವಾಗುವ ಕೆಲಸ ಸಿಗಲಿದೆ. ಬಂಧು-ಮಿತ್ರರ ಭೇಟಿ ಆಗಲಿದೆ. ನಿರ್ಣಯಗಳನ್ನು ಮಾಡುವಾಗ ಆಪ್ತರ ಸಲಹೆಪಡೆಯಿರಿ.
ಸಿಂಹ ರಾಶಿ: ಸಹದ್ಯೋಗಿಗಳ ಜೊತೆ ಜಗಳ ಬೇಡ. ಸ್ನೇಹಿತರ ಸಹಕಾರದಲ್ಲಿ ಕೆಲಸ ಮಾಡಿ. ಕಾರ್ಯ ಸಾಧನೆಯಲ್ಲಿ ಯಶಸ್ಸು ಸಿಗಲಿದೆ.
ಕನ್ಯಾ ರಾಶಿ: ಕೆಲಸದ ವಿಷಯದಲ್ಲಿ ಉತ್ತಮ ಸಾಧನೆ ಆಗಲಿದೆ. ನಿಮ್ಮ ಮಾತು ಬೇರೆಯವರ ಮೇಲೆ ಪ್ರಭಾವ ಬೀರಲಿದೆ. ಆರೋಗ್ಯದ ಕಡೆ ಗಮನಹರಿಸುವುದು ಮುಖ್ಯ.
ತುಲಾ ರಾಶಿ: ಸ್ನೇಹಿತರ ಸಹಕಾರದಲ್ಲಿ ಶುಭ ಕಾರ್ಯಗಳು ಶುರುವಾಗಲಿದೆ. ಅನಗತ್ಯ ಮಾತುಗಳಿಂದ ದೂರವಿರಿ. ಶತ್ರುಗಳ ಬಗ್ಗೆ ಚಿಂತಿಸಿ ಪ್ರಯೋಜನವಿಲ್ಲ.
ವೃಶ್ಚಿಕ ರಾಶಿ: ನಿಮಗಾದ ಹಾನಿಗೆ ತಕ್ಕ ಪರಿಹಾರ ಸಿಗಲಿದೆ. ಆರ್ಥಿಕ ಸುಧಾರಣೆ ಆಗಲಿದೆ. ಮಾನಸಿಕ ನೆಮ್ಮದಿಗಾಗಿ ಧ್ಯಾನ ಮಾಡಿ.
ಧನು ರಾಶಿ: ಆರೋಗ್ಯ ಸುಧಾರಣೆ ಆಗಲಿದೆ. ಖರ್ಚುಗಳು ಹೆಚ್ಚಾಗಲಿದೆ. ನಕಾರಾತ್ಮಕ ಚಿಂತನೆಗಳಿoದ ದೂರವಿರುವುದು ಕ್ಷೇಮ.
ಮಕರ ರಾಶಿ: ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಕಾಣಲಿದೆ. ಉದ್ಯೋಗದಲ್ಲಿಯೂ ಪ್ರಗತಿ ಆಗಲಿದೆ. ಯೋಜನೆಗಳ ಕುರಿತು ಸ್ಪಷ್ಠ ನಿಲುವು ಅಗತ್ಯ.
ಕುಂಭ ರಾಶಿ: ಗುತ್ತಿಗೆದಾರರು, ವ್ಯಾಪಾರಿಗಳ ಜೊತೆ ಉದ್ದಿಮೆದಾರರಿಗೆ ಸಹ ಈ ದಿನ ಶುಭವಾಗಿದೆ. ಹಣಕಾಸು ವಿಷಯದಲ್ಲಿ ಲಾಭವಾಗುವ ಲಕ್ಷಣಗಳಿವೆ. ತೊಡಕುಗಳನ್ನು ಜಾಣ್ಮೆಯಿಂದ ನಿಭಾಯಿಸಿ.
ಮೀನ ರಾಶಿ: ನಿಮ್ಮೊಳಗಿನ ಬದ್ಧತೆ ನಿಮ್ಮ ಪ್ರಗತಿಗೆ ಕಾರಣವಾಗಲಿದೆ. ವೃತ್ತಿ ಜೀವನದಲ್ಲಿ ಕೆಲ ತೊಡಕು ಬರುವ ಸಾಧ್ಯತೆಯಿದೆ. ಆತ್ಮವಿಶ್ವಾಸವೇ ನಿಮಗೆ ಶಕ್ತಿ ಎಂಬುದನ್ನು ಮರೆಯದಿರಿ.
