ಬಾಳಿ ಬದುಕಬೇಕಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬರು ಶಿರಸಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆರೆಗೆ ಹಾರಿ ಅವರು ಪ್ರಾಣ ತ್ಯಜಿಸಿದ್ದು, ಅವರ ಈ ದುಡುಕು ನಿರ್ಧಾರಕ್ಕೆ ಕಾರಣ ಏನು? ಎನ್ನುವುದರ ಬಗ್ಗೆ ತನಿಖೆ ನಡೆಯುತ್ತಿದೆ.
ಸ್ನೇಹಾ (17) ಅವರು ಪ್ರಥಮ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿದ್ದರು. ಓದಿನ ಜೊತೆ ಆಟ-ಓಟಗಳಲ್ಲಿ ಸಹ ಸ್ನೇಹಾ ಅವರು ಚುರುಕಾಗಿದ್ದರು. ಬದುಕಿ ಸಾಧನೆ ಮಾಡುವ ಬಗ್ಗೆ ನೂರಾರು ಕನಸು ಕಂಡಿದ್ದರು. ಎಲ್ಲರ ಜೊತೆಯಲ್ಲಿಯೂ ಅನ್ಯೋನ್ಯವಾಗಿ ಬೆರೆಯುತ್ತಿದ್ದ ಅವರ ಸಾವಿನ ಹಾದಿ ತುಳಿದರು. ಇಳಸೂರಿನ ಕೆರೆಗೆ ಹಾರಿ ಅವರು ತಮ್ಮ ಪ್ರಾಣ ಬಿಟ್ಟರು.
ಸ್ನೇಹಾ ಅವರನ್ನು ಯಾವ ಸಮಸ್ಯೆ ಕಾಡುತ್ತಿತ್ತು? ಎಂದು ಯಾರಿಗೂ ಗೊತ್ತಾಗಲಿಲ್ಲ. ಅವರ ಈ ದುಡುಕಿನ ನಿರ್ಧಾರದ ಬಗ್ಗೆ ಆಪ್ತರಿಗೆ ಸಹ ಸುಳಿವು ನೀಡಿರಲಿಲ್ಲ. ಸ್ನೇಹಾ ಅವರ ತಂದೆ ಪೊಲೀಸ್ ಇಲಾಖೆಯ ಸೇವೆಯಲ್ಲಿದ್ದಾರೆ. ಸದ್ಯ ಡಿಆರ್ ವಿಭಾಗದಲ್ಲಿ ಅವರು ಕರ್ತವ್ಯದಲ್ಲಿದ್ದು, ಪುತ್ರಿ ಸಾವಿನಿಂದ ಅವರ ಮನೆಯಲ್ಲಿ ಶೋಕ ಆವರಿಸಿದೆ.
ಯುವತಿಯ ಆತ್ಮಹತ್ಯೆಯ ಬಗ್ಗೆ ಅರಿತ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನೀರಿನಲ್ಲಿದ್ದ ಶವವನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಶಿರಸಿ ಗ್ರಾಮೀಣ ಠಾಣೆ ಪಿಎಸ್ಐ ಸಂತೋಷಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಅವರ ಜೊತೆಯಿದ್ದ ಇನ್ನಿತರ ಪೊಲೀಸರು ಕುಟುಂಬದವರಿಗೆ ಸಾಂತ್ವಾನ ಹೇಳುತ್ತಿದ್ದಾರೆ.
`ಆತ್ಮಹತ್ಯೆ ಅಪರಾಧ’
