ಕಾರವಾರದ ಕೆರವಡಿ, ಮಲ್ಲಾಪುರ ಸೇರಿ ಹಲವು ಗ್ರಾಮಗಳಿಗೆ ಸಮಯಕ್ಕೆ ಸರಿಯಾಗಿ ಸರ್ಕಾರಿ ಬಸ್ ಸೇವೆ ಸಿಗುತ್ತಿಲ್ಲ. ಇದರಿಂದ ಬೇಸತ್ತ ವಿದ್ಯಾರ್ಥಿಗಳು ದಿಢೀರ್ ಆಗಿ ಹಲವು ಮಾರ್ಗದ ಬಸ್ ತಡೆದು ಪ್ರತಿಭಟಿಸಿದ್ದಾರೆ. ವಿದ್ಯಾರ್ಥಿಗಳ ಸಮಸ್ಯೆ ಅರಿತು ಇತರೆ ಪ್ರಯಾಣಿಕರು ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲವ್ಯಕ್ತಪಡಿಸಿದರು.
ಸೋಮವಾರ ಮಧ್ಯಾಹ್ನ 3ಗಂಟೆಯಿoದ ವಿದ್ಯಾರ್ಥಿಗಳು ಕಾಯುತ್ತಿದ್ದರೂ ಕೆರವಡಿ ಮಾರ್ಗವಾಗಿ ಮಲ್ಲಾಪುರಕ್ಕೆ ಹೋಗಬೇಕಿದ್ದ ಬಸ್ಸು ಸಂಜೆಯಾದರೂ ಮುಂದೆ ಸಾಗಲಿಲ್ಲ. ಸಂಜೆ 5 ಗಂಟೆಯ ಬಸ್ಸು ಸಹ ಸಮಯಕ್ಕೆ ಸರಿಯಾಗಿ ಬರಲಿಲ್ಲ. ಮೂರು ತಾಸು ಸಹನೆಯಿಂದ ಕಾದ ವಿದ್ಯಾರ್ಥಿಗಳು ನಂತರ ಎಲ್ಲಾ ಬಸ್ಸುಗಳನ್ನು ತಡೆಹಿಡಿದರು.
1ಗಂಟೆಯಿAದ 5.30ರವರೆಗೂ ಕೆರವಡಿ, ಮಲ್ಲಾಪುರ ಭಾಗಕ್ಕೆ ತೆರಳುವ ಪ್ರಮಾಣಕರು ಬಸ್ಸುಗಳಿಲ್ಲದೇ ಪರಿತಪಿಸಿದರು. ಗ್ರಾಮೀಣ ಭಾಗಕ್ಕೆ ಸುಮಾರು 3-4 ಬಸ್ ಸಂಚಾರವಿದ್ದರೂ ಅವೆಲ್ಲವೂ ಕೈ ಕೊಟ್ಟಿದ್ದವು. ಶಾಲೆ-ಕಾಲೇಜು ಮುಗಿಸಿ ಮನೆಗೆ ತೆರಳುವವರು ಸಹ ಬಸ್ ಇಲ್ಲದ ಕಾರಣ ಬಸ್ ನಿಲ್ದಾಣದಲ್ಲೇ ಕಾಲ ಕಳೆದರು. ಬಸ್ ಇಲ್ಲದ ಕಾರಣ ಬಸ್ ನಿಲ್ದಾಣದ ಬಳಿಯೇ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗಕ್ಕೆ ಯಾವುದೇ ಬಸ್ ಇಲ್ಲದ ಕಾರಣ ಜನ ಸುಮಾರು ಐದು ತಾಸುಗಳ ಕಾಲ ಬಸ್ ನಿಲ್ದಾಣದಲ್ಲೇ ಕಾದರು. ಜನ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಂತೆ ಅಧಿಕಾರಿಗಳು ಬಸ್ ವ್ಯವಸ್ಥೆ ಮಾಡಿದರು.
