ಭಟ್ಕಳದ ಹಿರಿಯ ಪತ್ರಕರ್ತ ಎಂ ಆರ್ ಮಾನ್ವಿ ಅವರಿಗೆ ಅಂಕೋಲಾ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘವೂ ಬಾರ್ಡೋಲಿ ಗೌರವ ಪ್ರಶಸ್ತಿ ನೀಡಲು ನಿರ್ಧರಿಸಿದೆ. ಸೆಪ್ಟೆಂಬರ್ 8ರಂದು ಅಂಕೋಲಾದ ಗೋಖಲೆ ಸೆಂಟಿನರಿ ಪದವಿ ಕಾಲೇಜಿನಲ್ಲಿ ಜರುಗುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಎಂ ಆರ್ ಮಾನ್ವಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಅಂಕೋಲಾ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘವೂ ಕಳೆದ ಆರು ವರ್ಷಗಳಿಂದ ಸಾಧಕ ಪತ್ರಕರ್ತರನ್ನು ಗುರುತಿಸಿ ಗೌರವಿಸುತ್ತಿದೆ. ಸಾಮಾಜಿಕ ಕಳಕಳಿಹೊಂದಿದ ಪತ್ರಕರ್ತರನ್ನು ಗುರುತಿಸಿ ಈ ಸಂಘವೂ ಸನ್ಮಾನಿಸುತ್ತಿದೆ. ಈ ಹಿನ್ನಲೆ ಎಂ ಆರ್ ಮಾನ್ವಿ ಅವರಿಗೆ ಈ ಬಾರಿಯ ಬಾರ್ಡೋಲಿ ಗೌರವ ಪ್ರಶಸ್ತಿ ನೀಡುವುದಾಗಿ ಅಂಕೋಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ ಅವರು ಘೋಷಿಸಿದರು.
`ರಾಯಚೂರು ಮೂಲದ ಎಂ ಆರ್ ಮಾನ್ವಿ ಅವರು ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿ ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಪತ್ರಿಕಾ ರಂಗದಲ್ಲಿಯೂ ಅವರು 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ವಿವಿಧ ಸಂಘ-ಸAಸ್ಥೆಗಳಲ್ಲಿ ಜವಾಬ್ದಾರಿ ನಿಭಾಯಿಸಿದ್ದಾರೆ. ಅವರು ಈ ಪ್ರಶಸ್ತಿಗೆ ಯೋಗ್ಯವ್ಯಕ್ತಿ’ ಎಂದು ಸಂಘದ ಗೌರವಾಧ್ಯಕ್ಷ ರಾಘು ಕಾಕರಮಠ ಅವರು ಅಭಿಪ್ರಾಯವ್ಯಕ್ತಪಡಿಸಿದರು.
`ಭಟ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅವರು ಪತ್ರಕರ್ತರ ಆಗು-ಹೋಗುಗಳಿಗೆ ಸ್ಪಂದಿಸಿದ್ದಾರೆ. ಭಟ್ಕಳ ಸದ್ಭಾವನಾ ಮಂಚ್ನ ಕಾರ್ಯದರ್ಶಿಯಾಗಿ ಅವರು ಕೆಲಸ ನಿಭಾಯಿಸಿದ್ದಾರೆ. ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ನ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಸಹ ಅವರು ಸೇವೆಯಲ್ಲಿದ್ದಾರೆ’ ಎಂದು ದಿನಕರ ನಾಯ್ಕ ಅವರು ಸ್ಮರಿಸಿದರು.
ಹಿರಿಯ ಪತ್ರಕರ್ತ ಎಂ ಆರ್ ಮಾನ್ವಿ ಅವರಿಗೆ ಬಾರ್ಡೋಲಿ ಗೌರವ ಪ್ರಶಸ್ತಿ ಘೋಷಣೆಯಾಗಿರುವುದಕ್ಕೆ ಅಂಕೋಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾದ್ಯಕ್ಷ ನಾಗರಾಜ ಮಂಜುಗುಣಿ ಸಂತಸವ್ಯಕ್ತಪಡಿಸಿದರು. ಸಂಘದ ಸದಸ್ಯರಾದ ಕೆ ರಮೇಶ, ವಾಸುದೇವ ಗುನಗಾ, ಸುಭಾಷ್ ಕಾರೇಬೈಲ್, ಅಕ್ಷಯ ನಾಯ್ಕ, ನಾಗರಾಜ ಜಾಂಬಳೇಕರ, ದಿನಕರ ನಾಯ್ಕ, ಮೋಹನ ದುರ್ಗೇಕರ ಸಹ ಸಂಘದ ನಿರ್ಣಯವನ್ನು ಸ್ವಾಗತಿಸಿದರು.
