ಉತ್ತಮ ಶಿಕ್ಷಕ ಪ್ರಶಸ್ತಿಗೆ ಹಲವು ಅರ್ಜಿ ಬಂದಿದ್ದರೂ ಶಿಕ್ಷಣ ಇಲಾಖೆ ಅಳೆದು-ತೂಗಿ ಪ್ರಶಸ್ತಿ ಪ್ರಕಟಿಸಿದೆ. ಶೈಕ್ಷಣಿಕ ವಲಯದಲ್ಲಿ ಪ್ರಾಮಾಣಿಕ ಕೆಲಸ ಮಾಡುವವರನ್ನು ಗುರುತಿಸಿ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಗಾಗಿ ಒಟ್ಟು 40 ಶಿಕ್ಷಕರು ಅರ್ಜಿ ಸಲ್ಲಿಸಿದ್ದರು. ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 29 ಶಿಕ್ಷಕರು ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದರು. ಎಲ್ಲರ ಸೇವಾ ವಿವರ ಪರಿಶೀಲಿಸಿದ ಶೈಕ್ಷಣಿಕ ತಜ್ಞರು ಯೋಗ್ಯರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದರು. ಅದರ ಪ್ರಕಾರ ಜಿಲ್ಲಾ ಉತ್ತಮ ಶಿಕ್ಷರ ಪ್ರಶಸ್ತಿಗೆ ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಜೋಯಿಡಾದ ಕ್ಯಾಸಲ್ರಾಕ್ ಶಾಲೆಯ ಸಹಶಿಕ್ಷಕ ಮುತ್ತಪ್ಪ ವಠಾರ, ಹಳಿಯಾಳದ ಹೊಸಹಡಗಲಿಯ ವನಶ್ರೀ ಸಿಂಧೆ, ಯಲ್ಲಾಪುರದ ಅಲ್ಕೇರಿ ಗೌಳಿವಾಡದ ಗಂಗಪ್ಪ ಎಸ್ ಲಮಾಣಿ, ಮುಡಗೋಡದ ತಟ್ಟಿಹಳ್ಳಿಯ ಸುನೀತಾ ಕೃಷ್ಣಪ್ಪ ಪವಾರ, ಸಿದ್ದಾಪುರದ ಕೊಳಗಿಯ ಧರ್ಮಣ್ಣ, ಶಿರಸಿಯ ಭದ್ರಾಪುರದ ರಂಜನಾ ಹೆಗಡೆ ಅವರನ್ನು ಆಯ್ಕೆ ಮಾಡಲಾಯಿತು.
ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಜೋಯಿಡಾದ ಮೌವಳಿಂಗ ಶಾಲೆಯ ಶ್ರೀಕಾಂತ ನಾಯ್ಕ, ಹಳಿಯಾಳದ ಕೇರವಾಡದ (ಹವಗಿ) ಸುನೀತಾ ಹುಲುಸ್ವಾರ, ಯಲ್ಲಾಪುರದ ಅರಬೈಲನ ಶೀವಲೀಲಾ ಹುಣಸಗಿ, ಮುಂಡಗೋಡದ ಹಿರೇಹಳ್ಳಿಯ ಪೂರ್ಣಿಮಾ ಕೈಟಕರ್, ಸಿದ್ದಾಪುರದ ವಾಜಗದ್ದೆಯ ವಿನಾಯಕ ಹೆಗಡೆ, ಶಿರಸಿ ರಾಮನಬೈಲ್ನ ಎನ್ ಬಿ ನಾಯ್ಕ ಅವರು ಆಯ್ಕೆಯಾದರು. ಪ್ರೌಢ ಶಾಲಾ ವಿಭಾಗದಲ್ಲಿ ಜೋಯಿಡಾ ಬಾಪೇಲಿಕ್ರಾಸ್ ಶಾಲೆಯ ಸಹಶಿಕ್ಷಕ ಶಿವನಂದಾ ಕೆ ಎಚ್, ದಾಂಡೇಲಿಯ ಜನತಾ ವಿದ್ಯಾಲಯದ ಕಿಶೋರ ಕಿಂದಳಕರ, ಯಲ್ಲಾಪುರದ ವಿಶ್ವದರ್ಶನ ಪ್ರೌಢ ಶಾಲೆಯ ಮುಕ್ತಾಬಾಯಿ ಎಸ್ ಹೆಗಡೆ, ಮುಂಡಗೋಡದ ಮುಳಗಿ ಕರ್ನಾಟಕ ಪಬ್ಲಿಕ್ ಶಾಲೆಯ ಅಶೋಕ ಸಂಕ್ರಿಕೊಪ್ಪ, ಸಿದ್ದಾಪುರದ ಬೇಡ್ಕಣಿಯ ಜನತಾ ವಿದ್ಯಾಲಯದ ಪ್ರಕಾಶ ಮಂಜುನಾಥ ನಾಯ್ಕ, ಶಿರಸಿ ಬಿಸ್ಲಕೊಪ್ಪ ಶ್ರೀ ಸೂರ್ಯನಾರಾಯಣ ಪ್ರೌಢ ಶಾಲೆಯ ಗಣೇಶ ಭಟ್ಟ ಅವರು ಆಯ್ಕೆಯಾದರು.
ಕಾರವಾರ ಶೈಕ್ಷಣಿಕ ಜಿಲ್ಲೆಯ ಉತ್ತಮ ಶಿಕ್ಷರ ಪ್ರಶಸ್ತಿಗೆ ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಕಾರವಾರದ ಹಬ್ಬುವಾಡ ಶಾಲೆಯ ನಾಗವೇಣಿ ಶಿವಾನಂದ ನಾಯ್ಕ, ಅಂಕೋಲಾ ಕಟ್ಟಿನಹಕ್ಕಲದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬಾಬು ಬುಧದಂತ ಗೌಡ, ಕುಮಟಾ ತಾರಿಬಾಗಿಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಉಷಾಬಾಯಿ ಗಣಪತಿ ನಾಯ್ಕ, ಹೊನ್ನಾವರ ಕೋಟಾ ಅನಂತವಾಡಿಯ ಸುನಂದಾ ಕೃಷ್ಣ ಭಟ್ಟ ಹಾಗೂ ಭಟ್ಕಳದ ಹಡಾಳ ಶಾಲೆಯ ಸುಮನಾ ಕೆ ಅವರು ಆಯ್ಕೆಯಾದರು. ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕಾರವಾರದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಾಲಿನಿ ಕೃಷ್ಣ ನಾಯಕ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಮೀನುಗಾರಿಕೆ)ಯ ಸಾವಿತ್ರಿ ಹಮ್ಮಣ್ಣ ನಾಯಕ, ಕುಮಟಾದ ಉಪ್ಪಿನಪಟ್ಟಣದ ಶ್ಯಾಮಲಾ ಸುಬ್ರಾಯ ಹೆಗಡೆ, ಹೊನ್ನಾವರದ ಅಪ್ಸರಕೊಂಡದ ಗಣಪಯ್ಯ ಈರ ಗೌಡ, ಭಟ್ಕಳದ ಪಿ ಎಮ್ ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾಸು ಡಿ ನಾಯ್ಕ ಆಯ್ಕೆಯಾದರು.
ಪ್ರೌಢಶಾಲಾ ವಿಭಾಗದಲ್ಲಿ ಕಾರವಾರದ ಚೆಂಡಿಯಾದ ದಿ ಪೊಪ್ಯುಲರ್ ನ್ಯೂ ಇಂಗ್ಲೀಷ್ ಸ್ಕೂಲ್ನ ತಿಮ್ಮಪ್ಪ ಪರಮೇಶ್ವರ ನಾಯಕ, ಅಂಕೋಲಾ ಶೆಟಗೇರಿ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದ ನೇಮಸಿಂಗ ವಾಲಪ್ಪ ರಾಠೋಡ, ಗೋಕರ್ಣದ ಬಿ ಸಿ ಪಿ ಯು ಕಾಲೇಜ್ ಪ್ರೌಢಶಾಲಾ ವಿಭಾಗದ ಚಂದ್ರಶೇಖರ ಗೌಡಣ್ಣ ನಾಯಕ ದೊರೆ, ಹೊನ್ನಾವರದ ಕರ್ಕಿಯ ಶ್ರೀ ಚೆನ್ನಕೇಶದ ಪ್ರೌಢಶಾಲೆಯ ಶ್ರೀಕಾಂತ ಭೀಮಪ್ಪ ಹಿಟ್ನಳ್ಳಿ, ಭಟ್ಕಳದ ಬೈಲೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್’ನ ಸುಜಾತಾ ಟಿ ಹೊರ್ಟಾ ಆಯ್ಕೆಯಾದರು.
