ಬಾವಿಯಲ್ಲಿ ಬಿದ್ದ ತೆಂಗಿನಕಾಯಿ ಹೆಕ್ಕಲು ಹೋಗಿದ್ದ ಹೊನ್ನಾವರದ ಸುಭಾಶ ಶಾನಭಾಗ್ ಅವರು ಅದೇ ಬಾವಿಗೆ ಬಿದ್ದು ಸಾವನಪ್ಪಿದ್ದಾರೆ.
ಹೊನ್ನಾವರದ ಆಳಂಕಿ ಹೇರಂಗಡಿಯಲ್ಲಿ ಸುಭಾಶ ಶಾನಭಾಗ (62) ಅವರು ವಾಸವಾಗಿದ್ದರು. ಕೃಷಿ ಕೆಲಸದ ಜೊತೆ ಅವರು ಕಿರಾಣಿ ವ್ಯಾಪಾರವನ್ನು ಮಾಡಿ ಬದುಕು ಕಟ್ಟಿಕೊಂಡಿದ್ದರು. ತಮ್ಮ ಅಡಿಕೆ ತೋಟದಲ್ಲಿ ಅವರು ತೆಂಗಿನ ಮರಗಳನ್ನು ಬೆಳೆಸಿದ್ದು, ಮರದಿಂದ ಬಿದ್ದ ಕಾಯಿಗಳನ್ನು ನಿತ್ಯವೂ ಮನೆಗೆ ತಂದು ರಾಶಿ ಕೊಡುತ್ತಿದ್ದರು.
ಅಗಸ್ಟ 2ರಂದು ತೋಟದ ಬಾವಿಯಲ್ಲಿ ತೆಂಗಿನಕಾಯಿ ಬಿದ್ದಿರುವುದನ್ನು ಸುಭಾಶ ಶಾನಭಾಗ ಅವರು ನೋಡಿದರು. ಆ ಕಾಯಿಯನ್ನು ಬಾವಿಯಿಂದ ಮೇಲೆತ್ತಲು ಪ್ರಯತ್ನಿಸಿದರು. ಕಾಯಿ ಮೇಲೆ ಬರದಿದ್ದಾಗ ಇನ್ನಷ್ಟು ಸಾಹಸ ಮಾಡಲು ಮುಂದಾದರು. ಆ ವೇಳೆ ಅದೇ ಬಾವಿಯಲ್ಲಿ ಸುಭಾಶ ಶಾನಭಾಗ ಅವರು ಬಿದ್ದರು. ಅಲ್ಲಿಂದ ಮೇಲೆ ಬರಲು ಅವರಿಂದ ಸಾಧ್ಯವಾಗಲಿಲ್ಲ.
ಸುಭಾಶ ಶಾನಭಾಗ ಅವರ ಮಗ ಶುಭಂ ಶಾನಭಾಗ ಅವರು ಬಾವಿ ಬಳಿ ಬರುವಷ್ಟರಲ್ಲಿ ಸುಭಾಶ ಶಾನಭಾಗ ಅವರು ಶವವಾಗಿದ್ದರು. ಶುಭಂ ಶಾನಭಾಗ ಅವರು ತಂದೆಯ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿದರು.
