ಮೇಷ ರಾಶಿ: ಕುಟುಂಬ ಕಲಹಗಳಾಗುವ ಸಾಧ್ಯತೆಯಿದೆ. ಕೆಲಸದ ವಿಷಯದಲ್ಲಿ ತಾಳ್ಮೆ ಅಗತ್ಯ. ಹಣಕಾಸು ವಿಷಯ ಸ್ಥಿರವಾಗಿರಲಿದೆ.
ವೃಷಭ ರಾಶಿ: ನಿಮ್ಮ ನಿರ್ಧಾರಗಳಲ್ಲಿ ಗೊಂದಲ ಬೇಡ. ವೃತ್ತಿಯಲ್ಲಿನ ಸವಾಲುಗಳನ್ನು ಸವಕಾಶವಾಗಿ ನಿಭಾಯಿಸಿ. ಆರೋಗ್ಯ ಸುಧಾರಿಸಲಿದೆ.
ಮಿಥುನ ರಾಶಿ: ನಿಮ್ಮ ಉನ್ನತಿಯ ಬಗ್ಗೆ ಯೋಚಿಸಲು ಶುಭ ದಿನ. ಕುಟುಂಬದವರ ಸಹಕಾರವೂ ಸಿಗಲಿದೆ. ನಿಮ್ಮ ಹೊಣೆಗಾರಿಕೆ ಹೆಚ್ಚಲಿದೆ.
ಕರ್ಕ ರಾಶಿ: ಕೆಲಸದ ವಿಷಯದಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಹಣಕಾಸಿನ ಒತ್ತಡ ಹೆಚ್ಚಾಗಲಿದೆ. ಇಡೀ ದಿನ ಶುಭವಾಗಿರಲಿದ್ದು, ಉತ್ತಮ ಚಿಂತನೆಗಳನ್ನು ಜಾರಿಗೊಳಿಸಿ.
ಸಿಂಹ ರಾಶಿ: ಉದ್ಯೋಗದ ವಿಷಯದಲ್ಲಿ ಒತ್ತಡ ಹೆಚ್ಚಾಗಲಿದೆ. ಹಣಕಾಸು ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಆರೋಗ್ಯದ ಕಡೆ ಗಮನಹರಿಸಿ.
ಕನ್ಯಾ ರಾಶಿ: ಆರೋಗ್ಯದಲ್ಲಿ ಏರಿಳಿತ ಆಗಲಿದೆ. ಕುಟುಂಬದವರ ಜೊತೆ ಮಾತನಾಡಿ, ಭಾವನೆಗಳನ್ನು ತಿಳಿಸಿ. ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಮುನ್ನಡೆಯಿರಿ.
ತುಲಾ ರಾಶಿ: ತುರ್ತು ಸಮಯದಲ್ಲಿ ನಿಮ್ಮೊಳಗಿನ ಸಮಯ ಪ್ರಜ್ಞೆ ಶ್ರೀರಕ್ಷೆ ಆಗಲಿದೆ. ಹಿರಿಯರ ಸಲಹೆಪಡೆದು ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ.
ವೃಶ್ಚಿಕ ರಾಶಿ: ಆರ್ಥಿಕ ಅಭಿವೃದ್ಧಿಗಾಗಿ ಯೋಗ್ಯ ಕಡೆ ಹೂಡಿಕೆ ಮಾಡಿ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ವೃತ್ತಿಯಲ್ಲಿ ಶ್ರಮವಹಿಸುವುದು ಮುಖ್ಯ.
ಧನು ರಾಶಿ: ಮನೆ ಕಟ್ಟುವ ವಿಚಾರದಲ್ಲಿದ್ದವರಿಗೆ ಉತ್ತಮ ಯೋಗವಿದೆ. ಉದ್ಯೋಗದಲ್ಲಿಯೂ ಅವಕಾಶಗಳು ಬರಲಿದೆ. ಕಠಿಣ ನಿರ್ಣಯಗಳನ್ನು ಮಾಡುವಾಗ ಧೈರ್ಯ ಬೇಕು.
ಮಕರ ರಾಶಿ: ವಿಶೇಷ ಘಟನೆಗಳು ಈ ದಿನ ನಡೆಯುವ ಸಾಧ್ಯತೆಯಿದೆ. ಕುಟುಂಬದಲ್ಲಿ ಚಿಂತೆ ಮೂಡಲಿದ್ದು, ಅದನ್ನು ದೂರ ಮಾಡಿ. ಶಾಂತಿ ಹಾಗೂ ಸಮಾಧಾನದಿಂದ ಬದುಕಲು ಧ್ಯಾನ ಮಾಡಿ.
ಕುಂಭ ರಾಶಿ: ಹಣಕಾಸು ವಿಷಯದಲ್ಲಿ ಸುಧಾರಣೆ ಆಗಲಿದೆ. ಆರೋಗ್ಯದಲ್ಲಿ ಏರಳಿತ ಉಂಟಾಗಲಿದೆ. ನಿಮ್ಮೊಳಗಿನ ಶಕ್ತಿ ನಿಮಗೆ ನೆರವಾಗಲಿದೆ.
ಮೀನ ರಾಶಿ: ನಿಮ್ಮ ಆರೋಗ್ಯದ ಕಡೆ ನೀವೇ ಗಮನಹರಿಸಬೇಕು. ದೇಹದಲ್ಲಾಗುವ ಬದಲಾವಣೆಗಳನ್ನು ಗಮನಿಸಿ, ಅದಕ್ಕೆ ಚಿಕಿತ್ಸೆಪಡೆಯಬೇಕು. ನಿಮ್ಮ ಯೋಜನೆ ಜಾರಿಗಾಗಿ ನಿರಂತರ ಪ್ರಯತ್ನ ಅಗತ್ಯ.
