ಭಟ್ಕಳದ ಅಬ್ದುಲ್ ಬಾಸಿತ್ ಅವರು ದುಬೈಗೆ ಹೋಗಿ ದುಡಿದ ದುಡ್ಡಿನಲ್ಲಿ ಚಿನ್ನದ ಒಡವೆ ಮಾಡಿಸಿದ್ದು, ಆ ಒಡವೆಯೊಂದಿಗೆ ಅವರ ಪತ್ನಿ ನಕಾತ್ ಅವರು ತವರು ಮನೆ ಸೇರಿದ್ದಾರೆ. `ಒಡವೆ ಕೊಡು’ ಎಂದು ಕೇಳಿದ ಕಾರಣ ಅಬ್ದುಲ್ ಬಾಸಿತ್ ಅವರಿಗೆ ಅವರ ಪತ್ನಿಯೇ ಕೊಲೆ ಬೆದರಿಕೆ ಹಾಕಿದ್ದಾರೆ!
ಭಟ್ಕಳದ ಮುಸ್ಮಾಸ್ಟಿಟಿನ ಲಂಕಾ ಹೌಸಿನಲ್ಲಿ ಅಬ್ದುಲ್ ಬಾಸಿತ್ ವಾಸವಾಗಿದ್ದಾರೆ. ಕಿರಾಣಿ ವ್ಯಾಪಾರ ಮಾಡಿಕೊಂಡಿರುವ ಅವರು ಮದುವೆಗೂ ಮುನ್ನ ದುಬೈಲಿ ದುಡಿಯುತ್ತಿದ್ದರು. ಆ ವೇಳೆ ಮನೆ ಕಟ್ಟುವುದಕ್ಕಾಗಿ ಅವರು ಸಾಕಷ್ಟು ಶ್ರಮಿಸಿದ್ದು, ದುಡಿದ ದುಡ್ಡನ್ನು ಚಿನ್ನದ ಮೇಲೆ ಹೂಡಿಕೆ ಮಾಡಿದ್ದರು. 15 ಲಕ್ಷ ರೂ ಮೌಲ್ಯದ ಚಿನ್ನಾಭರಣ ಮಾಡಿಸಿ ಅದನ್ನು ತಮ್ಮ ತಾಯಿಯ ಬಳಿ ಕೊಟ್ಟಿದ್ದರು.
ಈ ನಡುವೆ ಭಟ್ಕಳ ಬಂದರು ರಸ್ತೆಯ 4ನೇ ಕ್ರಾಸಿನ ನಕಾತ್ ಅವರನ್ನು ಅಬ್ದುಲ್ ಅವರು ವಿವಾಹವಾದರು. ಆ ದಂಪತಿಗೆ ಇಬ್ಬರು ಮಕ್ಕಳು ಆದರು. ಅದಾದ ನಂತರ ಅಬ್ದುಲ್ ಅವರು ಮತ್ತೆ ದುಡಿಯಲು ದುಬೈಗೆ ಹೋಗಿದ್ದು, ಅವರ ಪತ್ನಿ ನಕಾತ್ ಅವರು ಅಬ್ದುಲ್ ಅವರಿಂದ ದೂರವಾದರು. ಇಬ್ಬರು ಮಕ್ಕಳನ್ನು ಕರೆದುಕೊಂಡು ನಕಾತ್ ಅವರು ತವರು ಮನೆ ಸೇರಿದರು. ಹೀಗಿರುವಾಗ ಒಮ್ಮೆ ಅಬ್ದುಲ್ ಅವರ ತಾಯಿ ಬಳಿ ಆಗಮಿಸಿದ ನಕಾತ್ ಅವರು `ನಿಮ್ಮ ಮಗ ಒಡವೆಗಳನ್ನು ಕೊಡಲು ಹೇಳಿದ್ದಾರೆ’ ಎಂದು ನಂಬಿಸಿ 150 ಗ್ರಾಂ ಮೌಲ್ಯದ ಚಿನ್ನಾಭರಣವನ್ನು ತಮ್ಮೊಂದಿಗೆ ಒಯ್ದರು.
ದುಬೈಯಿಂದ ಮರಳಿದ ಅಬ್ದುಲ್ ಅವರು ಒಡೆವೆ ವಿಷಯ ಅರಿತು ನಕಾತ್ ಅವರ ಮನೆಗೆ ಹೋದರು. ಒಡವೆ ಮರಳಿಸುವಂತೆ ಕೇಳಿದರು. ಆಗ ಜಗಳ ಶುರು ಮಾಡಿದ ನಕಾತ್ ಅವರು ಡೈವರ್ಸ ಕೊಡುವಂತೆ ಅಬ್ದುಲ್ ಅವರಲ್ಲಿ ಪಟ್ಟುಹಿಡಿದರು. ಅಗಸ್ಟ 5ರಂದು ಈದ್ ಹಬ್ಬದ ಅಂಗವಾಗಿ ಅಬ್ದುಲ್ ಅವರು ಮಕ್ಕಳನ್ನು ಭೇಟಿ ಮಾಡಲು ಹೋದಾಗ ಸಹ ನಕಾತ್ ಅವರು ನಕರಾ ಮಾಡಿದರು.
ಆ ವೇಳೆ ಒಡವೆ ಕೇಳಿದಾಗ `ನಿನ್ನ ಜೊತೆ ಮೂವರು ಸಹೋದರರನ್ನು ಕೊಲೆ ಮಾಡಿಸುವೆ’ ಎಂದು ಬೆದರಿಸಿದರು. ಇದರಿಂದ ನೊಂದ ಅಬ್ದುಲ್ ಅವರು ಈ ಎಲ್ಲಾ ವಿಷಯಗಳ ಬಗ್ಗೆ ಭಟ್ಕಳ ಶಹರ ಠಾಣೆ ಪೊಲೀಸರಿಗೆ ದೂರು ನೀಡಿದರು. ಅಬ್ದುಲ್ ಅವರ ದೂರಿನ ಅನ್ವಯ ಪೊಲೀಸರು ಅವರ ಪತ್ನಿ ವಿರುದ್ಧ ಪ್ರಕರಣ ದಾಖಲಿಸಿದರು.
`ಚಿನ್ನಕ್ಕಿಂತಲೂ ಕುಟುಂಬದ ಸಂಬoಧ ಮುಖ್ಯ’
