ದಾಂಡೇಲಿಯ ವಿಕ್ರಂಸಿoಗ್ ಪರಿಹಾರ ಹಾಗೂ ಅನೀಲ ಕೊಲ್ಲೂರು ಅವರ ಕುಟುಂಬದ ನಡುವೆ ನಡೆಯುತ್ತಿದ್ದ ಭೂಮಿ ಕಾಳಗ ಹೈಕೋರ್ಟಿನವರೆಗೆ ಹೋದರೂ ಅವರ ಜಗಳ ತಪ್ಪಿಲ್ಲ. ಅಗಸ್ಟ 2ರಂದು ಸಹ ಈ ಎರಡು ಕುಟುಂಬದವರು ಪರಸ್ಪರ ಜಗಳ ಮಾಡಿಕೊಂಡಿದ್ದು, ವಿಕ್ರಂಸಿoಗ್ ಪರಿಹಾರ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ.
ದಾಂಡೇಲಿಯ ಕುಳಗಿ ರಸ್ತೆ ಈಶ್ವರ ದೇವಸ್ಥಾನ ಬಳಿ ವಿಕ್ರಂಸಿAಗ್ ಪರಿಹಾರ ಅವರು ವಾಸವಾಗಿದ್ದಾರೆ. ಅವರ ಪಕ್ಕದಲ್ಲಿಯೇ ಅನೀಲ ಕೊಲ್ಲೂರು ಅವರು ವಾಸವಾಗಿದ್ದಾರೆ. ಅವರಿಬ್ಬರ ನಡುವೆ ಮೊದಲಿನಿಂದಲೂ ಭೂಮಿ ವಿಷಯವಾಗಿ ಕಾದಾಟ ನಡೆಯುತ್ತಿದೆ. ಈ ಪ್ರಕರಣ ಹೈಕೋರ್ಟಿನವರೆಗೆ ಹೋಗಿದ್ದು, `ಅನೀಲ ಕೊಲ್ಲೂರು ಅವರಿಗೆ ವಿಕ್ರಂಸಿoಗ್ ಅವರ ಭೂಮಿಯಲ್ಲಿ ಹಾದು ಹೋಗುವ ಹಕ್ಕಿಲ್ಲ’ ಎಂದು ಕೋರ್ಟು ಆದೇಶ ನೀಡಿದೆ.
ಹೀಗಿದ್ದರೂ ಅನೀಲ ಕೊಲ್ಲೂರು ಅವರ ಜೊತೆ ಅವರ ಕುಟುಂಬದ ಆರತಿ ಕೊಲ್ಲೂರು, ಶಾಂತಾ ಕೊಲ್ಲೂರು, ವೇದ ಕೊಲ್ಲೂರು ನಿತ್ಯವೂ ವಿಕ್ರಂಸಿoಗ್ ಪರಿಹಾರ ಅವರ ಜೊತೆ ಜಗಳ ಮಾಡುತ್ತಿದ್ದಾರೆ. ಸಣ್ಣಪುಟ್ಟ ಕಾರಣಗಳಿಗೂ ಅವರಿಬ್ಬರು ಕಿತ್ತಾಡುತ್ತಿದ್ದಾರೆ. ಅದರಂತೆ ಅಗಸ್ಟ 2ರಂದು ಸಹ ಅನೀಲ ಕೊಲ್ಲೂರು ಹಾಗೂ ಅವರ ಕುಟುಂಬದವರು ವಿಕ್ರಂಸಿoಗ್ ಪರಿಹಾರ ಅವರ ಮನೆಯ ಗೇಟಿಗೆ ಹಾಕಿದ್ದ ಬೀಗ ಒಡೆಯುವ ಪ್ರಯತ್ನ ಮಾಡಿದ್ದಾರೆ.
ಅಕ್ಕಪಕ್ಕದ ಮನೆಯವರ ಈ ಜಗಳ ಹೈಕೋರ್ಟಿನವರೆಗೆ ಹೋಗಿದ್ದರೂ ಬಗೆಹರಿದಿಲ್ಲ. ಹೀಗಾಗಿ ವಿಕ್ರಂಸಿAಗ್ ಪರಿಹಾರ ಅವರು ಗೇಟಿನ ಬೀಗ ಮುರಿಯಲು ಪ್ರಯತ್ನಿಸಿದ ಬಗ್ಗೆ ಮತ್ತೆ ಕಾನೂನು ಹೋರಾಟ ಶುರು ಮಾಡಿದ್ದಾರೆ. ಎದುರಾಳಿಗಳ ವಿರುದ್ಧ ಅವರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ತಮ್ಮ ಭೂಮಿಗೆ ಅವರು ಅಕ್ರಮ ಪ್ರವೇಶ ಮಾಡಿ, ಬೆದರಿಕೆ ಒಡ್ಡಿದ ಬಗ್ಗೆ ವಿಕ್ರಂಸಿAಗ್ ಪರಿಹಾರ ಅವರು ದಾಂಡೇಲಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
