ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿ ಉತ್ತಮ ಶಿಕ್ಷಕ ಪ್ರಶಸ್ತಿಪಡೆದಿರುವ ಯಲ್ಲಾಪುರದ ಶಿಕ್ಷಕರಿಗೆ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಅವರು ಅಭಿನಂದಿಸಿದ್ದಾರೆ.
`ಸಾಧಕ ಶಿಕ್ಷಕರು ಶೈಕ್ಷಣಿಕ ರಂಗದ ಜೊತೆಗೆ ಸಾಮಾಜಿಕ, ಸಾಂಸ್ಕ್ರತಿಕ, ಧಾರ್ಮಿಕ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ವಿಶ್ವದರ್ಶನ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾಗಿರುವ ಮುಕ್ತಾ ಶಂಕರ್, ಅರಬೈಲ್ ಶಾಲೆಯ ಮುಖ್ಯ ಶಿಕ್ಷಕರಾಗಿರುವ ಶಿವಲೀಲಾ ಹುಣಸಗಿ ಹಾಗೂ ಅಲ್ಕೇರಿ ಗೌಳಿವಾಡಾ ಶಾಲೆಯ ಮುಖ್ಯ ಶಿಕ್ಷಕ ಗಂಗಾಧರ ಲಮಾಣಿ ಅವರಿಗೆ ಪ್ರಶಸ್ತಿ ಸಿಕ್ಕಿರುವುದು ಸಂತಸ ತಂದಿದೆ’ ಎಂದವರು ಹೇಳಿದ್ದಾರೆ.
`ಅವರೆಲ್ಲರ ಸೇವೆ ಹಾಗೂ ಸಾಧನೆ ಇನ್ನಷ್ಟು ಉತ್ತಂಗಕ್ಕೆ ಏರಲಿ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಈ ಶಿಕ್ಷಕರು ಇತರರಿಗೆ ಮಾದರಿ ಆಗಲಿ’ ಎಂದು ರಾಮು ನಾಯ್ಕ ಅವರು ಹೇಳಿದ್ದಾರೆ.
