ಕಾರವಾರದ ತರಕಾರಿ ವ್ಯಾಪಾರಿಗಳಿಬ್ಬರ ನಡುವೆ ಜಗಳವಾಗಿದ್ದು, ಆ ಜಗಳ ಹೊಡೆದಾಟದ ಸ್ವರೂಪಪಡೆದಿದೆ. ತರಕಾರಿ ಮಾರಾಟಕ್ಕೂ ಮುನ್ನ ರಸ್ತೆ ಮೇಲೆ ವ್ಯಾಪಾರಿಗಳು ಹೊಡೆದಾಡಿಕೊಂಡಿದ್ದಾರೆ.
ತರಕಾರಿ ವ್ಯಾಪಾರಿ ರವಿಕಾಂತ ತೆಂಡುಲ್ಕರ್ ಅವರಿಗೆ ಜುಬೇರ ಮುಸ್ತಪಾ ಹಾಗೂ ಅಲಾಭಕ್ಷ ಎಂಬಾತರು ಸೇರಿ ಹೊಡೆದಿದ್ದಾರೆ. ಕಾರವಾರದ ಲೈಬ್ರೆರಿ ರಸ್ತೆಯ ಬಳಿ ಅಗಸ್ಟ 3ರಂದು ಈ ಹೊಡೆದಾಟ ನಡೆದಿದೆ.
ಕೆಇಬಿ ರಸ್ತೆಯ ರವಿಕಾಂತ ತೆಂಡುಲ್ಕರ್ ಅವರು ತಳ್ಳುಗಾಡಿ ಮೇಲೆ ತರಕಾರಿ ಜೋಡಿಸುತ್ತಿರುವಾಗ ಅಲ್ಲಿ ಅಲ್ಲಾಬಕ್ಷ ಅವರು ಬಂದರು. ಅಲ್ಲಾಬಕ್ಷ ಅವರು ತಮ್ಮ ತಳ್ಳುಗಾಡಿಯನ್ನು ರವಿಕಾಂತ ಅವರ ತಳ್ಳುಗಾಡಿಗಿಂತಲೂ ಮುಂದೆ ನಿಲ್ಲಿಸಿದರು. ಅದನ್ನು ಜುಬೇರ ಮುಸ್ತಪಾ ಅವರು ರವಿಕಾಂತರ ಬಳಿ ಪ್ರಶ್ನಿಸಿದರು.
ಆಗ, ರವಿಕಾಂತ ಅವರು `ತಾನು ಗಾಡಿಯನ್ನು ರಸ್ತೆ ಅಂಚಿನಲ್ಲಿರಿಸಿದ್ದು, ಆತ ರಸ್ತೆ ನಡುವೆ ನಿಲ್ಲಿಸಿದ್ದಾನೆ’ ಎಂದು ಉತ್ತರಿಸಿದರು. ಇದರಿಂದ ಸಿಟ್ಟಾದ ಅಲ್ಲಾಬಕ್ಷ ಅವರು ರವಿಕಾಂತ ಅವರ ಬಳಿ ಜಗಳಕ್ಕೆ ಬಂದರು. ಆ ವೇಳೆ ಜುಬೇರ್ ಸಹ ಅಲ್ಲಾಬಕ್ಷ ಜೊತೆ ಕೈ ಜೋಡಿಸಿ ರವಿಕಾಂತ ಅವರಿಗೆ ಹೊಡೆದರು.
ಈ ಬಗ್ಗೆ ರವಿಕಾಂತ ತೆಂಡುಲ್ಕರ್ ಅವರು ಕಾರವಾರ ನಗರಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
