ಮೇಷ ರಾಶಿ: ಹೊಸ ಯೋಜನೆ ಹಾಗೂ ಹೊಸ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಕುಟುಂಬದಿoದ ಒಳ್ಳೆಯ ಸುದ್ದಿ ಬರಲಿದೆ. ಆರೋಗ್ಯದ ವಿಷಯದಲ್ಲಿ ಎಚ್ಚರಿಕೆವಹಿಸಿ. ಗೊಂದಲದ ನಿರ್ಧಾರಗಳಿಂದ ದೂರವಿರಿ.
ವೃಷಭ ರಾಶಿ: ವೃತ್ತಿ ವಿಷಯವಾಗಿ ನಿಮ್ಮ ಕೆಲಸಗಳಿಗೆ ಮಾನ್ಯತೆ ಸಿಗಲಿದೆ. ಖರ್ಚು ಹೆಚ್ಚಾಗುವುದರ ಜೊತೆ ಆದಾಯ ಕಡಿಮೆ ಆಗುವ ಸಾಧ್ಯತೆಯಿದ್ದು, ಅದನ್ನು ತಪ್ಪಿಸಲು ಪ್ರಯತ್ನಿಸಿ. ಕುಟುಂಬದಲ್ಲಿ ಕಲಹವಾಗುವ ಸಾಧ್ಯತೆಗಳಿವೆ. ಮಹತ್ವದ ನಿರ್ಧಾರ ಪ್ರಕಟಿಸುವಾಗ ಆಳವಾದ ಅಧ್ಯಯನ ಅಗತ್ಯ.
ಮಿಥುನ ರಾಶಿ: ಕೆಲಸ ಕಾರ್ಯದ ವಿಷಯದಲ್ಲಿ ಒತ್ತಡ ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಲಾಭ ಸಿಗಲಿದೆ. ಮಿತ್ರರ ಜೊತೆ ಜಗಳ ಮಾಡದಿರುವುದು ಒಳಿತು. ಹಣಕಾಸು ವ್ಯವಹಾರದಲ್ಲಿ ಈ ದಿನ ನಿರ್ಧಾರ ಮಾಡಬೇಡಿ.
ಕರ್ಕ ರಾಶಿ: ನಿಮ್ಮೊಳಗಿನ ಆತ್ಮ ವಿಶ್ವಾಸ ಹೆಚ್ಚಾಗಲಿದೆ. ಕುಟುಂಬ ಸದಸ್ಯರ ಜೊತೆ ಸರಿಯಾಗಿ ಮಾತನಾಡಿ. ಸಾಲ ಬಾಧೆ ಹೆಚ್ಚಾಗುವ ಸಾಧ್ಯತೆಗಳಿದೆ. ಉತ್ತಮ ಅವಕಾಶಕ್ಕಾಗಿ ಕಾಯುವುದು ಅನಿವಾರ್ಯ.
ಸಿಂಹ ರಾಶಿ: ವೃತ್ತಿ ಬದುಕಿನಲ್ಲಿ ಉತ್ತೇಜನ ಸಿಗಲಿದೆ. ಹಣಕಾಸು ವಿಷಯದಲ್ಲಿ ನೆಮ್ಮದಿ ಸಾಧ್ಯವಿದೆ. ಆರೋಗ್ಯ ಏರುಪೇರಾಗಬಹುದು. ನಿಮ್ಮ ಮೇಲೆ ಬರುವ ಆರೋಪಗಳನ್ನು ನಯವಾಗಿ ನಿರಾಕರಿಸಿ.
ಕನ್ಯಾ ರಾಶಿ: ಸ್ನೇಹಿತರಿಂದ ಶುಭ ಸುದ್ದಿ ಕೇಳಿಬರಲಿದೆ. ಅನಾವಷ್ಯಕ ಚಿಂತೆಗಳು ನಿಮ್ಮನ್ನು ಕಾಡಲಿದೆ. ಕೆಲಸದಲ್ಲಿ ಪ್ರಗತಿ ಆಗಲಿದೆ. ಸಂಜೆ ವೇಳೆ ಕುಟುಂಬದಲ್ಲಿ ಕಲಹ ಮೂಡಬಹುದು.
ತುಲಾ ರಾಶಿ: ವೃತ್ತಿ ಬದುಕಿನಲ್ಲಿ ಹೊಸ ಅವಕಾಶ ಸಿಕ್ಕರೆ ಅದನ್ನು ತಪ್ಪಿಸಿಕೊಳ್ಳಬೇಡಿ. ಆರೋಗ್ಯದಲ್ಲಿ ಅಲ್ಪ ಪ್ರಮಾಣದಲ್ಲಿ ಸಮಸ್ಯೆ ಆಗಬಹುದು. ಹಣಕಾಸು ಲಾಭದ ನಿರೀಕ್ಷೆಯಿದೆ. ನಿಮ್ಮ ನಿರ್ಧಾರಗಳು ದೃಢವಾಗಿರಲಿ.
ವೃಶ್ಚಿಕ ರಾಶಿ: ಆರೋಗ್ಯ ವಿಷಯದಲ್ಲಿ ಸಮತೋಲನ ಕಾಪಾಡಿಕೊಳ್ಳಿ. ಸಮಯಕ್ಕೆ ಸರಿಯಾಗಿ ಊಟ-ನಿದ್ದೆ ಅವಶ್ಯ. ಕುಟುಂಬದಲ್ಲಿ ನೆಮ್ಮದಿ ಕಾಣಬಹುದು. ಸ್ನೇಹಿತರ ನಡುವೆ ಗೊಂದಲದ ಲಕ್ಷಣವಿದೆ.
ಧನು ರಾಶಿ: ಹಣಕಾಸು ಅಭಿವೃದ್ಧಿ ಆಗಲಿದೆ. ಹೊಸ ಆಸ್ತಿ ಖರೀದಿ ಯೋಚನೆ ನಿಮಗೆ ಬರಬಹುದು. ದಾಂಪತ್ಯದಲ್ಲಿ ಬಿನ್ನಾಭಿಪ್ರಾಯ ಬಾರದಂತೆ ನೋಡಿಕೊಳ್ಳುವುದು ಮುಖ್ಯ. ಮನಸ್ಸಿನ ಒತ್ತಡದಿಂದ ಹೊರಬನ್ನಿ.
ಮಕರ ರಾಶಿ: ಆರೋಗ್ಯದಲ್ಲಿ ಏರುಪೇರಾಗುವ ಲಕ್ಷಣಗಳಿವೆ. ಅಪಾಯದ ನಿರ್ಧಾರಗಳನ್ನು ಮಾಡಬೇಡಿ. ಕೌಟುಂಬಿಕ ಜೀವನವನ್ನು ಸರಿಯಾಗಿ ರೂಪಿಸಿಕೊಳ್ಳುವುದು ಮುಖ್ಯ.
ಕುಂಭ ರಾಶಿ: ಉದ್ಯೋಗದಲ್ಲಿ ಉತ್ತಮ ಅವಕಾಶಗಳು ಸಿಗಲಿದೆ. ಕುಟುಂಬ ಸದಸ್ಯರ ಜೊತೆ ಗಲಾಟೆಯಾಗುವ ಸಾಧ್ಯತೆಯಿದೆ. ಹಣಕಾಸು ವಿಷಯಗಳು ಸ್ಥಿರವಾಗಿರಲಿದೆ. ಹೊಸ ಗೆಳೆತನ ಸಾಧ್ಯವಿದೆ.
ಮೀನ ರಾಶಿ: ಉದ್ಯೋಗ ಹುಡುಕಾಟದಲ್ಲಿರುವವರಿಗೆ ಶುಭ ದಿನ. ಆರೋಗ್ಯ ಸುಧಾರಣೆಯೂ ಆಗಲಿದೆ. ಖರ್ಚಿನ ಬಗ್ಗೆ ಎಚ್ಚರಿಕೆ ಅಗತ್ಯ. ಸ್ನೇಹಿತರ ಸಹಾಯಪಡೆಯಲು ಹೆದರಿಕೆ ಬೇಡ.
