ಯಲ್ಲಾಪುರದ ಎಲ್ ಎಸ್ ಎಂ ಪಿ ಸೊಸೈಟಿ ಈ ಸಲ 52.06 ಲಕ್ಷ ರೂ ಲಾಭಗಳಿಸಿದೆ. ಈ ಸೊಸೈಟಿಯ ಸರ್ವ ಸಾಧಾರಣ ಸಭೆ ಸೆ 13ರ ಮಧ್ಯಾಹ್ನ 3.30ಕ್ಕೆ ಪಟ್ಟಣದ ಹುಲ್ಲೋರಮನೆ ಗಜಾನನ ಮಾರುತಿ ಸಭಾ ಭವನದಲ್ಲಿ ನಡೆಯಲಿದೆ.
ಸೊಸೈಟಿ ಅಧ್ಯಕ್ಷ ನಾಗರಾಜ ಕವಡಿಕೇರಿ ಈ ಬಗ್ಗೆ ಗುರುವಾರ ಮಾಹಿತಿ ನೀಡಿದರು. `ಸಂಘವೂ 2393 ಸದಸ್ಯರನ್ನು ಹೊಂದಿದೆ. ಸಂಘದ ಸದಸ್ಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ವಾಣಿಜ್ಯ ಸಂಕೀರ್ಣ, ಅಡಿಕೆ ವಿಕ್ರಿ ಮೂಲಕ ಸಂಘದ ಲಾಭಗಳಿಸುತ್ತಿದೆ’ ಎಂದವರು ವಿವರಿಸಿದರು. `ವ್ಯಾಪಾರಿ ಮಳಿಗೆಯಿಂದ ವಾರ್ಷಿಕವಾಗಿ 23 ಲಕ್ಷ ರೂ ಆದಾಯ ಬಂದಿದೆ. ಸೊಸೈಟಿಗೆ ಪೆಟ್ರೋಲ್ ಬಂಕ್ ಮಂಜೂರಿಯಾಗಿದ್ದು, ಆರಂಭದ ಸಿದ್ಧತೆಗಳು ನಡೆದಿವೆ’ ಎಂದು ಹೇಳಿದರು.
`ಸಂಘದ ಸದಸ್ಯರು ಮರಣ ಹೊಂದಿದರೆ ಅವರ ಅಂತ್ಯ ಸಂಸ್ಕಾರಕ್ಕೆ ತಕ್ಷಣ 5 ಸಾವಿರ ರೂ ನೆರವು ನೀಡಲಾಗುತ್ತದೆ. ಆಪತ್ ಠೇವು ಸಹ ಸಂಘದ ಸದಸ್ಯರಿಗೆ ಅನುಕೂಲವಾಗಿದೆ’ ಎಂದರು. `ಕಳೆದ ವರ್ಷ ಸಂಘದ ಮೂಲಕ ಒಟ್ಟೂ 4 ಸಾವಿರ ಕ್ವಿಂಟಲ್ ಅಡಿಕೆ ವಿಕ್ರಿ ಆಗಿದೆ. ಅಡಿಕೆ ವಿಕ್ರಿ ಸಂಬAಧ ಟಿಎಂಎಸ್ ನಿಂದ 30 ಸಾವಿರ ರೂ ಬಹುಮಾನ ಬಂದಿದೆ’ ಎಂದರು. `ಬೇರೆ ಬ್ಯಾಂಕಿನ ನೆರವುಪಡೆಯದೇ ಸ್ವಂತ ಬಂಡವಾಳದಿAದ ಮಾಧ್ಯಮಿಕ ಸಾಲ ನೀಡಲಾಗಿದೆ. ಸಾಲ ಮರುಪಾವತಿ ಪ್ರಮಾಣ ಸಹ ಶೇ 94ರಷ್ಟಿದೆ’ ಎಂದು ವಿವರಿಸಿದರು.
ಸಂಘದ ಉಪಾಧ್ಯಕ್ಷ ಟಿ ಆರ್ ಹೆಗಡೆ,ನಿರ್ದೇಶಕರಾದ ಆರ್ ಎಸ್ ಭಟ್ಟ, ಅಪ್ಪು ಆಚಾರಿ, ಸುಬ್ಬಣ್ಣ ದಾನ್ಯಾನಕೊಪ್ಪ, ತಿಮ್ಮಣ್ಣ ಘಟ್ಟಿ, ನರಸಿಂಹ ಕೋಣೆಮನೆ, ಗಾಬ್ರಿಯಲ್ ಫರ್ನಾಂಡೀಸ್, ಹನುಮಂತ ಕೊರವರ, ಮುಖ್ಯಕಾರ್ಯನಿರ್ವಾಹಕ ಎಂ ಎಸ್ ಹೆಗಡೆ ಇತರರಿದ್ದರು.
