ಮುಂಡಗೋಡದ ಚಂದ್ರಕಾoತ ಐಹೋಳಿ ಹಾಗೂ ಅನ್ನಪೂರ್ಣ ನೇಕಾರ ಅವರ ಕುಟುಂಬದವರ ನಡುವೆ ಗಡಿ ಜಗಳ ನಡೆದಿದೆ. ಈ ಜಗಳ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಮುಂಡಗೋಡು ಕೊಪ್ಪ ಬಳಿಯ ಇಂದಿರಾನಗರದ ಚಂದ್ರಕಾoತ ಐಹೋಳಿ ಅವರು ಸದ್ಯ ಗೋಕಾಕಿನಲ್ಲಿ ವಾಸವಾಗಿದ್ದಾರೆ. 70 ವರ್ಷ ವಯಸ್ಸಾಗಿರುವ ಅವರಿಗೆ ತಾವು ಹೊಂದಿದ ಭೂಮಿ ಮೇಲೆ ಅಪಾರ ಪ್ರೀತಿ. ಹೀಗಾಗಿ ಆಗಾಗ ಊರಿಗೆ ಬಂದ ಅವರು ಕುಟುಂಬದವರ ಜೊತೆ ಕೃಷಿ ಕೆಲಸ ಮಾಡುತ್ತಾರೆ.
ಮೇ 9ರಂದು ಅವರು ತಮ್ಮ ಮಗ ರೊಬಿನ್ ಐಹೋಳಿ, ಸೊಸೆ ಭಾಗ್ಯ ಐಹೋಳಿ, ಸಂಬoಧಿಕರಾದ ಹೊನ್ನವ್ವಾ ಕಟ್ಟಿಮನಿ ಹಾಗೂ ಕರಿಯಪ್ಪ ಕಟ್ಟಿಮನಿ ಅವರ ಜೊತೆ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಎಲ್ಲರೂ ಸೇತಿ ತಮ್ಮ ಭೂಮಿಯ ಗಡಿಗೆ ಬೇಲಿ ನಿರ್ಮಿಸುತ್ತಿದ್ದರು. ಆಗ, ಪಕ್ಕದಮನೆಯ ಅನ್ನಪೂರ್ಣ ನೇಕಾರ ಅವರ ಜೊತೆ ರವಿ ನೇಕಾರ ಹಾಗೂ ಸಂತೋಷ ನೇಕಾರ ಅಲ್ಲಿಗೆ ಬಂದು ಬೈಗುಳ ಶುರು ಮಾಡಿದರು. ಜಾತಿಯನ್ನು ನಿಂದಿಸಿ ಬೈದರು.
ಇದರಿಂದ ಮಾನಸಿಕವಾಗಿ ನೊಂದ ಚಂದ್ರಕಾAತ ಐಹೋಳಿ ಅವರು ಮೂರು ತಿಂಗಳ ನಂತರ ಪೊಲೀಸ್ ದೂರು ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಿದ್ದಾರೆ.
