ಅಕ್ರಮ ಹಣ ವರ್ಗಾವಣೆ, ಲೆಕ್ಕಕ್ಕಿಲದ ಹಣ ಸಂಗ್ರಹ ಹಾಗೂ ಅದಿರು ನಾಪತ್ತೆ ಪ್ರಕರಣದ ವಿಷಯವಾಗಿ ಜಾರಿ ನಿರ್ದೇಶನಾಲಯದಿಂದ ಜೈಲು ಸೇರಿದ್ದ ಕಾರವಾರ ಶಾಸಕ ಸತೀಶ್ ಸೈಲ್ ಅವರಿಗೆ ಗುರುವಾರ ಜಾಮೀನು ಸಿಕ್ಕಿದೆ.
ಅಗಸ್ಟ 13 ಹಾಗೂ 14ರಂದು ಜಾರಿ ನಿರ್ದೇಶನಾಲಯದವರು ಮಾಜಾಳಿಯಲ್ಲಿರುವ ಸತೀಶ್ ಸೈಲ್ ಮನೆ ಮೇಲೆ ದಾಳಿ ಮಾಡಿದ್ದರು. ಆಗ ಅಲ್ಲಿ ಅಪಾರ ಪ್ರಮಾಣದ ಹಣ ಹಾಗೂ ಚಿನ್ನ ಸಿಕ್ಕಿತ್ತು. ಅವೆಲ್ಲವನ್ನು ಅಧಿಕಾರಿಗಳು ವಶಕ್ಕೆಪಡೆದಿದ್ದರು.
ಈ ವಿಷಯದ ಬಗ್ಗೆ ವಿಚಾರಣೆಗಾಗಿ ಅಧಿಕಾರಿಗಳು ಸತೀಶ್ ಸೈಲ್ ಅವರನ್ನು ಬಂಧಿಸಿದ್ದರು. ಅದಾದ ನಂತರ ಅವರನ್ನು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಸತೀಶ್ ಸೈಲ್ ಅವರ ಆರೋಗ್ಯ ಸರಿ ಇಲ್ಲದ ಕಾರಣ ಅವರಿಗೆ ಜಾಮೀನು ಕೊಡಬೇಕು ಎಂದು ಅವರ ಪರ ವಕೀಲರು ವಾದಿಸಿದ್ದರು.
ನ್ಯಾಯಾಲಯವೂ ಸತೀಶ್ ಸೈಲ್ ಅವರ ಆರೋಗ್ಯ ಹಾಗೂ ವೈದ್ಯಕೀಯ ದಾಖಲೆಗಳನ್ನು ಗಮನಿಸಿತು. ಸತೀಶ್ ಸೈಲ್ ಅವರು ದೀರ್ಘಕಾಲದಿಂದ ಲಿವರ್ ಸೈರೋಸಿಸ್ ಮತ್ತು ಸ್ಲೀಪ್ ಆಪ್ನಿಯಾ ಸಮಸ್ಯೆಯಿಂದ ಬಳಲುತ್ತಿರುವುದನ್ನು ಅರಿತು 7 ದಿನಗಳ ಕಾಲಕ್ಕೆ ಮಧ್ಯಂತರ ಜಾಮೀನು ಮಂಜೂರಿ ಮಾಡಿತು.
Discussion about this post