ಬೆಣ್ಣೆಹೊಳೆ ಜಲಪಾತಕ್ಕೆ ಹೋಗಿ ನೀರುಪಾಲಾಗಿದ್ದ ಶಿರಸಿ ಅರಣ್ಯ ಕಾಲೇಜು ವಿದ್ಯಾರ್ಥಿ ರಾಹುಲ್ ಅವರು ಶವವಾಗಿ ಸಿಕ್ಕಿದ್ದಾರೆ. ಅವರು ನೀರಿನಲ್ಲಿ ಮುಳುಗಿದ್ದ ಅನತಿ ದೂರದಲ್ಲಿ ಶವ ಪತ್ತೆಯಾಗಿದೆ.
ಭಾನುವಾರ ಅರಣ್ಯ ವಿದ್ಯಾಲಯದ ನಾಲ್ವರು ಜಲಪಾತ ವೀಕ್ಷಣೆಗೆ ಹೋಗಿದ್ದರು. ಕಾಲು ತೊಳೆಯಲು ಹೋಗಿದ್ದ ಶ್ರೀನಿವಾಸ ಎಂಬಾತರು ಕಾಲು ಜಾರಿ ನೀರಿಗೆ ಬಿದ್ದಿದ್ದರು. ಶ್ರೀನಿವಾಸ ಅವರ ರಕ್ಷಣೆಗೆ ಹೋಗಿದ್ದ ರಾಹುಲ್ ಅವರು ನೀರುಪಾಲಾಗಿದ್ದರು. ಶ್ರೀನಿವಾಸ ಅವರನ್ನು ಇತರರು ರಕ್ಷಣೆ ಮಾಡಿದ್ದು, ರಾಹುಲ್ ಅವರು ನೀರಿನಲ್ಲಿ ನಾಪತ್ತೆ ಆಗಿದ್ದರು.
ನಿರಂತರ ಶೋಧ ಕಾರ್ಯಾಚರಣೆ ನಂತರ ಈ ದಿನ ಅವರ ಶವ ಜಲಪಾತದ ನೀರಿನಲ್ಲಿಯೇ ಸಿಕ್ಕಿದೆ. ಅಲ್ಲಿನ ಕಲ್ಬಂಡೆಗೆ ಬಡಿದಿದ್ದ ಶವವನ್ನು ರಕ್ಷಣಾ ತಂಡದವರು ಮೇಲೆತ್ತಿದ್ದಾರೆ. ಮುಳುಗು ತಜ್ಞ ಈಶ್ವರ ಮಲ್ಪೆ ಅವರ ಜೊತೆ ಮಾರಿಕಾಂಬಾ ಲೈಫ್‌ಗಾರ್ಡ ತಂಡದವರು ಈ ಕಾರ್ಯಾಚರಣೆ ನಡೆಸಿದ್ದಾರೆ.
.
Discussion about this post