ಗಾಂಜಾ ಸೇವಿಸಿದ ಆಟೋ ಚಾಲಕನ ವಿರುದ್ಧ ಶಿರಸಿ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಆಟೋ ಚಾಲಕನ ಜೊತೆ ಮತ್ತೊಬ್ಬ ಸಿಕ್ಕಿಬಿದ್ದಿದ್ದು, ಆತನ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.
ಶಿರಸಿಯ ಚಿಪಗಿ ದಮನಬೈಲಿನ ಆಟೋ ಪ್ರದೀಪ ಶೆಟ್ಟಿ ಹಾಗೂ ಇಂದಿರಾನಗರದಲ್ಲಿ ವಾಸವಾಗಿರುವ ಕೇರಳ ಮೂಲದ ಮೊಹಮದ್ ರೇನಿಸ್ ಗಾಂಜಾ ಸೇವಿಸಿ ಸಿಕ್ಕಿಬಿದ್ದಿದ್ದಾರೆ. ನಗರದ ಸುಪ್ರಸನ್ನ ನಗರದ ಕ್ಯಾಪ್ಟನ್ ಕ್ಯಾಂಪಸ್ ಹೋಗುವ ಕಚ್ಚಾ ರಸ್ತೆಯಲ್ಲಿ ಅವರಿಬ್ಬರು ಗಾಂಜಾ ಸೇವನೆ ಮಾಡಿದ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು.
ಈ ಹಿನ್ನಲೆ ಪೊಲೀಸರು ಅಲ್ಲಿ ದಾಳಿ ನಡೆಸಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿಯೂ ಪ್ರದೀಪ ಶೆಟ್ಟಿ ಹಾಗೂ ಮೊಹಮದ್ ರೇನಿಸ್ ಮಾದಕ ವ್ಯಸನ ಸೇವನೆ ದೃಢವಾಗಿದೆ. ಈ ಹಿನ್ನಲೆ ಪೊಲೀಸರು ಅವರಿಬ್ಬರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದರು. ಮಾದಕ ವ್ಯಸನ ಸೇವನೆ ಅಪರಾಧ ಆಗಿದ್ದರಿಂದ ಪ್ರಕರಣವನ್ನು ದಾಖಲಿಸಿದರು.
Discussion about this post