`1999ರಲ್ಲಿ ಮುಂಡಗೋಡಿನಲ್ಲಿ ಮತಪತ್ರ ಸುಟ್ಟ ಪ್ರಕರಣದಲ್ಲಿ ಕಾಂಗ್ರೆಸ್ ವಿರುದ್ಧ ಆರೋಪ ಕೇಳಿ ಬಂದಿದ್ದು, ಇದೀಗ ಕಾಂಗ್ರೆಸ್ಸಿಗರೇ ಮತಗಳ್ಳತನದ ಬಗ್ಗೆ ಸಾರ್ವಜನಿಕ ಸಭೆ ಮಾತನಾಡುತ್ತಿದ್ದಾರೆ. ಆದರೆ, ಅಧಿಕೃತ ದೂರು ಮಾತ್ರ ಕೊಡುವವರಿಲ್ಲ’ ಎಂದು ಬಿಜೆಪಿ ಮುಖಂಡ ರಾಮು ನಾಯ್ಕ ಹೇಳಿದ್ದಾರೆ.
`ಮತಗಳ್ಳತನದ ಬಗ್ಗೆ ಸಾರ್ವಜನಿಕ ಸಭೆಯಲ್ಲಿ ಆರೋಪಿಸುವ ರಾಹುಲ್ ಗಾಂಧಿ ಅವರು ಈ ಬಗ್ಗೆ ಅಧಿಕೃತ ದೂರು ಕೊಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ. `ರಾಹುಲ್ ಆರೋಪದಲ್ಲಿ ಹುರುಳೆಷ್ಟಿದೆಯೋ ಗೊತ್ತಿಲ್ಲ. ಆದರೆ, ಸದ್ಯ ಈ ಯುವರಾಜನ ಅಕ್ಕಪಕ್ಕದಲ್ಲಿ ಇದ್ದವರ ಮೇಲೆ ಮಾತ್ರ ಸಾಕಷ್ಟು ಚುನಾವಣಾ ಅಕ್ರಮದ ಆರೋಪಗಳು ಕೇಳಿ ಬಂದಿದೆ’ ಎಂದವರು ಹೇಳಿದ್ದಾರೆ.
`ಬಿಹಾರದ ಆರ್ ಜೆ ಡಿ ಮುಖ್ಯಸ್ಥ ತೇಜಸ್ವಿ ಪ್ರಸಾದ ಕಳೆದ ಕೆಲವು ದಿನಗಳಿಂದ ರಾಹುಲ್ ಜೊತೆಗೇ ಹೆಜ್ಜೆ ಹಾಕುತ್ತಿದ್ದಾರೆ. ಈ ತೇಜಸ್ವಿ ಮೇಲೆಯೇ ನಕಲಿ ಗುರುತಿನ ಚೀಟಿ ಹೊಂದಿದ ಆರೋಪ ಇದ್ದು, ಚುನಾವಣಾ ಆಯೋಗದಿಂದ ಅಧಿಕೃತ ನೋಟಿಸೂ ನೀಡಲಾಗಿದೆ’ ಎಂದವರು ಹೇಳಿದ್ದಾರೆ. `1975 ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸ್ವತಃ ಅಲಹಾಬಾದ ಹೈಕೋರ್ಟ್, ಇಂದಿರಾಗಾoಧಿಯವರ ಚುನಾವಣಾ ಅಕ್ರಮಗಳನ್ನು ಬಯಲಿಗೆಳೆದಿದೆ. ಮೊಮ್ಮಗ ರಾಹುಲ್ ಇದನ್ನು ಮರೆತಿರಬಹುದು, ನಾವು ಮರೆತಿಲ್ಲ’ ಎಂದವರು ಹೇಳಿದ್ದಾರೆ. `ಕಾಂಗ್ರೆಸ್ಸಿಗರು ಚುನಾವಣೆಗೂ ಮುಂಚೆಯೇ ತಮ್ಮ ಸೋಲಿಗೆ ಬೇರೆಯವರನ್ನು ಹೊಣೆ ಮಾಡುವ ಮುಂಗಡ ಪ್ರಯತ್ನ ಬಿಡಬೇಕು’ ಎಂದು ಸಲಹೆ ನೀಡಿದ್ದಾರೆ.
Discussion about this post