ಕಾರವಾರದ ಸದಾಶಿವಗಡದಲ್ಲಿರುವ ಲಯನ್ಸ ಕ್ಲಬ್ ಘಟಕ ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಿದ್ದು, ಪ್ರಾಂತ ಆಡಳಿತ ಮುಖ್ಯಸ್ಥ ರಾಜೇಶ ಸಾಲೆಹಿತ್ತಲ ಹಾಗೂ ವಿಭಾಗೀಯ ಮುಖ್ಯಸ್ಥ ಅನೀಲ ಶೇಟ್ ಅವರು ಈ ಕಾರ್ಯಕ್ಕೆ ಮೆಚ್ಚುಗೆವ್ಯಕ್ತಪಡಿಸಿದ್ದಾರೆ.
ಅಸ್ನೋಟಿಯ ಕಲ್ಯಾಣ ಪುರುಷ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಲಯನ್ಸ ಕ್ಲಬ್ಬಿನ ಸೇವೆಯನ್ನು ಶ್ಲಾಘಿಸಿದರು. `ಲಯನ್ಸ ಕ್ಲಬ್ ನಿಯಮದ ಪ್ರಕಾರ 9 ಬಗೆಯ ಸೇವೆಯನ್ನು ನೀಡಬೇಕು. ಜೊತೆಗೆ ಹೊಸ ಸದಸ್ಯರನ್ನು ಸಹ ಕ್ಲಬ್ಬಿಗೆ ಸೇರಿಸಿಕೊಳ್ಳಬೇಕು’ ಎಂದು ರಾಜೇಶ ಸಾಲೆಹಿತ್ತಲ ಅವರು ತಿಳಿಸಿದರು. `ಸದಾಶಿವಗಡ ಲಯನ್ಸ ಕ್ಲಬ್ ಮೊದಲಿನಿಂದಲೂ ಉತ್ತಮ ಕೆಲಸ ಮಾಡುತ್ತಿದೆ. ಕ್ರಿಯಾಶೀಲ ಸದಸ್ಯರೇ ಕ್ಲಬ್ಬಿನ ನಿಜವಾದ ಆಸ್ತಿ’ ಎಂದು ಅನೀಲ ಶೇಟ್ ಅವರು ಹೇಳಿದರು.
ಕ್ಲಬ್ಬಿನ ಜಿಲ್ಲಾ ವಿಭಾಗ ಮುಖ್ಯಸ್ಥ ಶಾಂತರಾಮ ನಾಯ್ಕ ಅವರು ಲಯನ್ಸ್ ಶುಲ್ಕ ಮತ್ತು ಅಂತರ್ಜಾಲ ಮಾಹಿತಿ ನೀಡಿದರು. ಲಯನ್ಸ ಕ್ಲಬ್ ಅಧ್ಯಕ್ಷ ಡಾ ನಯೀಮ್ ಮುಖಾದಂ ಅವರು ಗಣ್ಯರ ಆಗಮನದ ಬಗ್ಗೆ ಸಂತಸವ್ಯಕ್ತಪಡಿಸಿದರು. ಪ್ರಮುಖರಾದ ಸಂದೀಪ್ ಅಣ್ವೇಕರ, ಹೊನ್ನಾವರ ಕ್ಲಬ್ ಸದಸ್ಯರಾದ ಸಂತೋಷ, ಸುನೀಲ್ ಐಗಳ್ ವೇದಿಕೆಯಲ್ಲಿದ್ದರು.
ಸದಾಶಿವಗಡ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ರಾಮಚಂದ್ರ ಅಂದ್ಲಮನೆ ಅವರು ಕೊಡುಗೆಯಾಗಿ ನೀಡಿದ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ವರ್ಷಾ ಸಂಗಡಿಗರು ಪ್ರಾರ್ಥಿಸಿದರು. ಜೆ ಬಿ ತಿಪ್ಪೇಸ್ವಾಮಿ ವರದಿ ವಾಚಿಸಿದರು. ಗಣೇಶ ಬಿಷ್ಟಣ್ಣನವರ ಅವರು ನಿರ್ವಹಿಸಿದರು.
Discussion about this post