ಯಲ್ಲಾಪುರದ ಮದನೂರು, ಕಿರವತ್ತಿ ಭಾಗದಲ್ಲಿ ಹಿಂದುಳಿದ ಸಮುದಾಯದವರು ವಾಸಿಸುವ ಕಡೆ ಮೂಲಭೂತ ಸೌಕರ್ಯ ಕೊರತೆಯಿರುವ ಬಗ್ಗೆ ಬಿಜೆಪಿ ಧ್ವನಿ ಎತ್ತಿದೆ. ಆಡಳಿತದಲ್ಲಿರುವ ಸರ್ಕಾರ ಹಿಂದುಳಿದ ವರ್ಗದವರಿಗೆ ನೆರವಾಗಬೇಕು ಎಂದು ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಆಗ್ರಹಿಸಿದ್ದಾರೆ.
ಬಿಜೆಪಿ ಹಿಂದುಳಿದ ಮೋರ್ಚಾದ ತಾಲೂಕು ಅಧ್ಯಕ್ಷ ವಿಠ್ಠಲ್ ಪಾಂಡ್ರಮಿಸೆ ಹಾಗೂ ಪ್ರಸಾದ ಹೆಗಡೆ ಸುದ್ದಿಗಾರರ ಜೊತೆ ಮಾತನಾಡಿದ್ದು, ಡೋಮಗೇರಿ ಗೌಳಿವಾಡದಲ್ಲಿ ಅಂಗನವಾಡಿ ಇಲ್ಲದೇ ಸ್ಥಳೀಯ ಮಕ್ಕಳು ನಿತ್ಯವೂ ಡೋಮಗೇರಿಗೆ ಅಲೆದಾಡುತ್ತಿದ್ದಾರೆ. ಕಳೆದ ವಾರ ಮರ ಮುರಿದುಬಿದ್ದು, ಅಂಗನವಾಡಿಯಿAದ ಮನೆಗೆ ಮರಳಬೇಕಾದದ ಇಬ್ಬರು ಸಾವನಪ್ಪಿದ್ದು ಶೋಚನೀಯ. ಕೂಡಲೇ ಗೌಳಿವಾಡಾದಲ್ಲಿ ಅಂಗನವಾಡಿ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
`ಮರಾಠಾ, ಗೌಳಿ ಇತ್ಯಾದಿ ಹಿಂದುಳಿದ ಸಮುದಾಯದವರು ವಾಸಿಸುವ ಪ್ರದೇಶದಲ್ಲಿ ಮೂಲಭೂತ ಸೌಲಭ್ಯದ ಕೊರತೆ ಇದೆ. ಸಣ್ಣಯಲವಳ್ಳಿಯಲ್ಲಿ ಶಾಲಾ ಕಟ್ಟಡ ಬೀಳುವ ಹಂತದಲ್ಲಿದೆ. ಕಾರಕುಂಡಿಯಲ್ಲಿ ಕಳೆದ ಎರಡು ವರ್ಷದಿಂದ ಶಾಲೆಯ ಕಟ್ಟಡ ಅಪೂರ್ಣ ಸ್ಥಿತಿಯಲ್ಲಿದೆ. ಶಾಲೆಗಳ ಸುತ್ತ ಮುತ್ತ ದೊಡ್ಡ ದೊಡ್ಡ ಮರಗಳು ಬೀಳುವ ಅಪಾಯದ ಸ್ಥಿತಿಯಲ್ಲಿದ್ದು, ಅವುಗಳನ್ನು ಕಟಾವು ಮಾಡಬೇಕು’ ಎಂದು ಆಗ್ರಹಿಸಿದರು.
`ಡೋಮಗೇರಿಯಲ್ಲಿ ಮೃತರದವರ ಬಡ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕು. ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಗೆ ಆಸ್ಪತ್ರೆಯ ಖರ್ಚುವೆಚ್ಚ ಭರಿಸಬೇಕು’ ಎಂದು ಒತ್ತಾಯಿಸಿದರು. `ಗ್ರಾಮೀಣ ಪ್ರದೇಶದಲ್ಲಿ ಕಾಡುಪ್ರಾಣಿಗಳ ಭಯ ಇದ್ದು, ಶಾಲೆಗಳಿಗೆ ಓಡಾಡಲೂ ಸಮಸ್ಯೆ ಇದೆ. ಶಿಥಿಲ ಇರುವ ಶಾಲಾ ಕಟ್ಟಡದ ಬಗ್ಗೆ ಶಿಕ್ಷಣ ಇಲಾಖೆ ಗಮನಹರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಡೋಮಗೇರಿ ಮಹಿಳೆ, ಮಕ್ಕಳ ಮೇಲೆ ಮರಬಿದ್ದ ಘಟನೆಗೆ ಸಂಬAಧಿಸಿದAತೆ ಕೆಎಂಸಿಯಲ್ಲಿ ಗಾಯಾಳುಗಳಿಗೆ ಬೇರೆ ಬೇರೆ ಕಾರಣಗಳಿಗಾಗಿ ತುರ್ತು ಚಿಕಿತ್ಸೆ ಸಿಕ್ಕಿಲ್ಲ. ಗಾಯಾಳುಗಳಿಗೆ ತುರ್ತು ಚಿಕಿತ್ಸೆ ಸಕಾಲದಲ್ಲಿ ಕೊಡಿಸುವ ವ್ಯವಸ್ಥೆ ಸರ್ಕಾರದಿಂದ ಆಗಬೇಕು’ ಎಂದು ಪ್ರಸಾದ ಹೆಗಡೆ ಹೇಳಿದರು.
ಮದನೂರು ಗ್ರಾ ಪಂ ಅಧ್ಯಕ್ಷ ವಿಠ್ಠು ಶಳಕೆ, ಹಿಂದುಳಿದ ಮೋರ್ಚಾ ಕಾರ್ಯದರ್ಶಿ ರವಿ ದೇವಾಡಿಗ, ಮಾಧ್ಯಮ ಸಹಸಂಚಾಲಕ ಬಜ್ಜು ಪಿಂಗಳೆ, ಬೂತ್ ಅಧ್ಯಕ್ಷ ನವಲು ಜೋರೆ, ಮಂಡಲ ಕಾರ್ಯದರ್ಶಿ ಮಹೇಶ ದೇಸಾಯಿ ಇದ್ದರು.
Discussion about this post