ಶಿರಸಿಯ ಸ್ಕೊಡ್‌ವೆಸ್ ಮಹಿಳಾ ಸೌಹಾರ್ದಕ್ಕೆ ಈ ಬಾರಿ 55.90 ಲಕ್ಷ ನಿವ್ವಳ ಲಾಭ ಸಿಕ್ಕಿದೆ. ಈ ಹಿನ್ನಲೆ ಈ ಸೊಸೈಟಿ ಸದಸ್ಯರಿಗೆ ಶೇ 12ರ ಡಿವಿಡೆಂಡ್ ಘೋಷಣೆ ಮಾಡಿದೆ.
ನಗರದ ರಂಗಧಾಮದಲ್ಲಿ ನಡೆದ ಸ್ಕೊಡ್‌ವೆಸ್ ಮಹಿಳಾ ಸೌಹಾರ್ದ ಸಹಕಾರಿಯ 10ನೇ ಸರ್ವ ಸಾಧಾರಣ ಸಭೆಯಲ್ಲಿ ಭಾಗವಹಿಸಿದ ಉಪವಿಭಾಗಾಧಿಕಾರಿ ಕಾವ್ಯರಾಣಿ ಅವರು `ಮಹಿಳೆಯರ ಆರ್ಥಿಕ ನಿರ್ವಹಣಾ ಬಲವನ್ನು ಹೆಚ್ಚಿಸುವ ಮೂಲಕ ಕುಟುಂಬದ ಸರ್ವತೋಮುಖ ಅಭಿವೃದ್ದಿಗೆ ಸ್ಕೋಡ್‌ವೆಸ್ ಸಹಕಾರಿ’ ಎಂದು ಹೇಳಿದ್ದಾರೆ. `ಬಡ ಹಾಗೂ ಮಧ್ಯಮ ವರ್ಗದ ಹೆಚ್ಚಿನ ಕುಟುಂಬಗಳಲ್ಲಿ ಮಹಿಳೆಯರೇ ಹಣಕಾಸಿನ ವ್ಯವಹಾರಗಳನ್ನು ನಿರ್ವಹಿಸುತ್ತಿರುವುದರಿಂದ ತಮ್ಮ ಆರ್ಥಿಕ ಸ್ವಾವಲಂಬನೆಗೆ ಸ್ವ-ಸಹಾಯ ಸಂಘ ಹಾಗೂ ಸೌಹಾರ್ದ ಸಹಕಾರಿ ಸಂಸ್ಥೆಗಳು ಸಹಾಯವಾಗಿದೆ’ ಎಂದವರು ಅಭಿಪ್ರಾಯಹಂಚಿಕೊoಡಿದ್ದಾರೆ.
ಪೊಲೀಸ್ ಉಪ ಅಧೀಕ್ಷಕಿ ಗೀತಾ ಪಾಟೀಲ್ ಅವರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ಕೋಡ್‌ವೆಸ್ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದರು. ಅದಾದ ನಂತರ ಸಾಧಕರಿಗೆ ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಪರೀಕ್ಷೆಯಲ್ಲಿ ಗರಿಷ್ಟ ಅಂಕಪಡೆದವರಿಗೆ ಸನ್ಮಾನಿಸಿದರು. `ಬದುಕಿನ ಸವಾಲುಗಳು ವಿಶ್ವ ವಿದ್ಯಾಲಯದ ಪಾಠಕ್ಕಿಂತಲೂ ಅಧಿಕ ಅನುಭವ ನೀಡುತ್ತವೆ. ಬಡತನದಿಂದ ಹೊರಗೆ ಬರಲು ಹೋರಾಡುವವನಿಗೆ ಮಾತ್ರ ಪ್ರಪಂಚದ ಅವಕಾಶಗಳ ಪರಿಚಯವಾಗುತ್ತದೆ. ಮಹಿಳೆಯರು ಕಷ್ಟ, ಬಡತನ ಎಂದು ಯೋಚಿಸುತ್ತಾ ಇರುವ ಬದಲು ಲಭ್ಯವಿರುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಪ್ರಯತ್ನ ಮಾಡಿ’ ಎಂದು ಗೀತಾ ಪಾಟೀಲ ಅವರು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಕೊಡ್‌ವೆಸ್ ಮಹಿಳಾ ಸೌಹಾರ್ದ ಸಹಕಾರಿಯ ಅಧ್ಯಕ್ಷೆ ಸರಸ್ವತಿ ಎನ್ ರವಿ ಸಂಸ್ಥೆ ನಡೆದು ಬಂದ ದಾರಿ ಪರಿಚಯಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಮಾತನಾಡಿದರು. ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ಗೀತಾ ಹಣಬರ್, ವೀಣಾ ಮೊಗೇರ್, ಮಾಲಿನಿ ನಾಯ್ಕ, ಸರೋಜಾ ಗಂಗೊಳ್ಳಿ, ಲಕ್ಷಿö್ಮÃ ಕೆ, ಲಲಿತಾ ಹೆಗಡೆ, ಭಾಗೀರಥಿ ನಾಯ್ಕ, ಸ್ವಾತಿ ಶೆಟ್ಟಿ, ಪೂರ್ಣಿಮಾ ಪಾಟೀಲ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಹಾಗೂ ಹಾವೇರಿ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಮಹಿಳಾ ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಸ್ಕೊಡ್‌ವೆಸ್‌ನ ಕಾರ್ಯಕ್ರಮಾಧಿಕಾರಿ ನಾರಾಯಣ ಹೆಗಡೆ ನಿರೂಪಿಸಿದರು. ಸ್ಕೊಡ್‌ವೆಸ್ ಸಹಕಾರಿಯ ನಿರ್ದೇಶಕಿ ಮಾಲಿನಿ ನಾಯ್ಕ ವಂದಿಸಿದರು.
Discussion about this post