ಮೇಷ ರಾಶಿ: ಬೆಳಗ್ಗಿನ ಅವಧಿಯಲ್ಲಿ ನಿಮ್ಮ ಮನಸ್ಥಿತಿ ಶಾಂತ ಸ್ಥಿತಿಯಲ್ಲಿರಲಿದ್ದು, ಆತ್ಮ ವಿಶ್ವಾಸದಿಂದ ಕೆಲಸ ಮಾಡಲು ಸಾಧ್ಯವಾಗಲಿದೆ. ಈ ದಿನ ಹಣಕಾಸಿನ ನೆರವು ಸಿಗಲಿದೆ. ನಿಮ್ಮ ಗುರಿ ತಲುಪಲು ಶ್ರದ್ಧೆಯಿಂದ ಕೆಲಸ ಮಾಡುವುದು ಮುಖ್ಯ. ರಾತ್ರಿ ನಿದ್ದೆ ಹಾಳು ಮಾಡದೇ ವಿರಾಮ ಮಾಡಿ.
ವೃಷಭ ರಾಶಿ: ಸಾಮಾಜಿಕ ಕ್ಷೇತ್ರದಲ್ಲಿರುವವರಿಗೆ ಈ ದಿನ ಮನ್ನಣೆ ಸಿಗಲಿದೆ. ಆರ್ಥಿಕ ಪರಿಸ್ಥಿತಿ ಅಭಿವೃದ್ಧಿ ಆಗಲಿದೆ. ಕುಟುಂಬದಲ್ಲಿ ಗೊಂದಲ ಕಾಡಬಹುದು. ಆರೋಗ್ಯಕರ ಜೀವನಕ್ಕಾಗಿ ನಿಯಮಿತ ಆಹಾರ ಸೇವನೆಗೆ ಆದ್ಯತೆ ಕೊಡಿ.
ಮಿಥುನ ರಾಶಿ: ನಿಮ್ಮ ಕೆಲಸದಲ್ಲಿ ಸಾಧನೆ ಮಾಡಲು ಸಾಧ್ಯವಿದೆ. ಹೊಸ ಯೋಜನೆಗಳ ಸಿದ್ಧತೆ ಮಾಡಿಕೊಳ್ಳಲು ಸಕಾಲ. ದೊಡ್ಡ ದೊಡ್ಡ ಯೋಜನೆಗಳು ನಿಮ್ಮ ಅಭಿವೃದ್ಧಿಗೆ ಪೂರಕವಾಗಿರಲಿದೆ.
ಕರ್ಕ ರಾಶಿ: ಮನಸ್ಸಿನ ಒತ್ತಡ ಕಡಿಮೆ ಮಾಡಿಕೊಳ್ಳಲು ಅಲ್ಪ ವಿರಾಮದ ಅಗತ್ಯವಿದೆ. ಪ್ರೀತಿ, ಪ್ರೇಮದ ವಿಷಯದಲ್ಲಿ ಯಶಸ್ಸು ಸಿಗಲಿದೆ. ಹಣಕಾಸು ಸ್ಥತಿ ಉತ್ತಮವಾಗಿರಲಿದೆ.
ಸಿಂಹ ರಾಶಿ: ಕುಟುಂಬದಲ್ಲಿ ಗೊಂದಲ ಆಗದಂತೆ ಎಚ್ಚರಿಕೆ ಅಗತ್ಯ. ಪ್ರೀತಿ-ದಾಂಪತ್ಯದ ಜೀವನದಲ್ಲಿ ಸಡಗರ ಮೂಡಲಿದೆ. ಉದ್ಯೋಗ ವಿಷಯದಲ್ಲಿ ಗುರಿ ಸಾಧನೆಗೆ ನಿರಂತರ ಪ್ರಯತ್ನ ಬೇಕು.
ಕನ್ಯಾ ರಾಶಿ: ಹಣಕಾಸು ವ್ಯವಹಾರದಲ್ಲಿ ಜಾಗೃತಿವಹಿಸಿ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಬಲವಾಗಿರಲಿದ್ದು, ದುಡಿಮೆಗೆ ಹೊಸ ಹೊಸ ಯೋಜನೆಗಳನ್ನು ರೂಪಿಸಿ. ನಿರಂತರ ಪ್ರಯತ್ನಗಳು ನಿಮಗೆ ಫಲ ಕೊಡುವುದು ನಿಶ್ಚಿತ.
ತುಲಾ ರಾಶಿ: ಹಣಕಾಸು ಹಾಗೂ ಉದ್ಯೋಗದಲ್ಲಿ ಯಶಸ್ಸು ಸಾಧ್ಯವಿದೆ. ಕೌಟುಂಬಿಕ ವಿಷಯಗಳು ನೆಮ್ಮದಿಯಾಗಿರಲಿದೆ. ನೀವು ನಡೆಸುವ ವ್ಯವಹಾರಗಳು ಸಹ ಯಶಸ್ವಿ ಆಗುತ್ತದೆ.
ವೃಶ್ಚಿಕ ರಾಶಿ: ಅನೇಕ ಬಗೆಯ ಚಿಂತೆಗಳು ನಿಮ್ಮನ್ನು ಆವರಿಸಲಿದೆ. ಕಾರ್ಯಕ್ಷೇತ್ರದಲ್ಲಿ ಸಾಧನೆ ಸಾಧ್ಯವಿದೆ. ಹಣಕಾಸು ವಿಷಯದಲ್ಲಿ ಜಾಗ್ರತೆ ಅಗತ್ಯ. ಆರೋಗ್ಯದ ಕಡೆ ಗಮನಹರಿಸುವುದು ಮುಖ್ಯ.
ಧನು ರಾಶಿ: ಈ ದಿನ ನಿಮಗೆ ಸಂತೋಷದಿAದ ಕೂಡಿರಲಿದೆ. ಹೊಸ ಅವಕಾಶಗಳು ನಿಮಗೆ ಸಹಾಯ ಮಾಡಲಿದೆ. ಸಹಕಾರ ಹಾಗೂ ವಿಶ್ವಾಸದಿಂದ ಜನರ ಸ್ನೇಹ ಸಂಪಾದಿಸುವಿರಿ.
ಮಕರ ರಾಶಿ: ಕೆಲಸದಲ್ಲಿ ಉತ್ಸಾಹ ಹೆಚ್ಚಾಗಲಿದೆ. ಹೊಸ ಆರಂಭಕ್ಕೆ ಉತ್ತಮ ದಿನ. ಕುಟುಂಬದಲ್ಲಿ ಶಾಂತಿ ನೆಲೆಸಲಿದೆ. ನಿರ್ಧಾರಗಳನ್ನು ಮಾಡುವಾಗ ನಿಮ್ಮ ಮನಸ್ಸು ಸ್ಪಷ್ಟವಾಗಿರಲಿ.
ಕುಂಭ ರಾಶಿ: ಸಕಾರಾತ್ಮಕ ವಿಷಯಗಳು ನಿಮಗೆ ಶಕ್ತಿ ಕೊಡಲಿದೆ. ಉದ್ಯೋಗದಲ್ಲಿ ಸಾಧನೆ ಸಾಧ್ಯವಿದೆ. ಆರೋಗ್ಯದ ವಿಷಯದಲ್ಲಿ ಧೈರ್ಯದಿಂದ ವರ್ತಿಸಿ.
ಮೀನ ರಾಶಿ: ಕೆಲಸದಲ್ಲಿ ಸಿಗುವ ಹೊಸ ಅವಕಾಶಗಳು ಅನುಭವ ಹೆಚ್ಚಿಸಲಿದೆ. ಆರೋಗ್ಯದ ವಿಷಯವಾಗಿ ವೈಯಕ್ತಿಕ ಕಾಳಜಿ ಅಗತ್ಯ. ಕುಟುಂಬದಲ್ಲಿ ಸಂತೋಷ ಕಾಣಬಹುದು.
Discussion about this post