ವಿದ್ಯಾರ್ಥಿಗಳಲ್ಲಿ ಸಮಾಜ ಸೇವೆಯ ಸಂದೇಶ ಮೂಡಿಸುವುದರ ಜೊತೆ ನಾಯಕತ್ವ ಗುಣ ಬೆಳೆಸುವುದಕ್ಕಾಗಿ ಕಾರವಾರದ ರೋಟರಿ ಕ್ಲಬ್ಬಿನವರು ಶಾಲಾ-ಕಾಲೇಜುಗಳಲ್ಲಿ ರೋಟರಿ ಘಟಕ ಸ್ಥಾಪನೆ ಮಾಡುತ್ತಿದ್ದಾರೆ.
ರೋಟರಿ ಸಂಸ್ಥೆಯ ಸಾಮಾಜಿಕ ಕಾರ್ಯಗಳನ್ನು ಗ್ರಾಮೀಣ ಭಾಗಕ್ಕೂ ವಿಸ್ತರಿಸಿದ್ದು, ಮುದಗಾ ಜನತಾ ವಿದ್ಯಾಲಯದ ಪ್ರತಿಭಾನ್ವಿತ ಸದಸ್ಯರನ್ನು ಒಳಗೊಂಡು ರೋಟರಿ ಇಂಟರಾಕ್ಟಿವ್ ಘಟಕ ಸ್ಥಾಪಿಸಲಾಗಿದೆ. ಈ ಘಟಕದ ಅಧ್ಯಕ್ಷರಾಗಿ ಆಲಿಷ ಅಂಬಿಗ ಅವರು ಆಯ್ಕೆಯಾಗಿದ್ದರೆ. ಕಾರ್ಯದರ್ಶಿಯಾಗಿ ಪೂರ್ವಿ ಕೋಡಾರ್ಕರ್ ಮತ್ತು ಖಜಾಂಚಿಯಾಗಿ ಪ್ರೇರಣ ತಾಂಡೇಲ್ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಿಕಿತಾ ನಾಯ್ಕ ಅವರು ಈ ಘಟಕಕ್ಕೆ ಮಾರ್ಗದರ್ಶಕರಾಗಿದ್ದಾರೆ.
ಕಾರವಾರ ರೋಟರಿ ಕ್ಲಬ್ ಅಧ್ಯಕ್ಷ ಅರ್ಜುನ ಉಪಾಧ್ಯಾಯ ಅವರು ದೀಪ ಬೆಳಗಿಸಿ ಈ ಘಟಕ ಉದ್ಘಾಟಿಸಿದರು. `ವಿದ್ಯಾರ್ಥಿಗಳಲ್ಲಿ ನಾಯಕತ್ವ ಬೆಳವಣಿಗೆಗೆ ರೋಟರಿ ಕ್ಲಬ್ ಸಹಕಾರಿ’ ಎಂದವರು ತಿಳಿಸಿದರು. ಕ್ಲಬ್ಬಿನ ಸೇವಾ ನಿರ್ದೇಶಕರಾದ ನಿವೃತ್ತ ತೆರಿಗೆ ಅಧಿಕಾರಿ ಮೋಹನ್ ನಾಯ್ಕ ಅವರು ಸೇವಾ ಮನೋಭಾವನೆ ಮೈಗೂಡಿಸಿಕೊಳ್ಳುವ ಬಗ್ಗೆ ಮಾತನಾಡಿದರು. ನೂತನ ಘಟಕದ ಆರ್ಥಿಕ ಭದ್ರತೆಗಾಗಿ ಅವರು 5 ಸಾವಿರ ರೂ ನೆರವು ನೀಡಿದರು.
ರೋಟರಿ ಪ್ರಮುಖರಾದ ವಿನೋದ್ ಕೊಠಾರಕರ್, ಗುರುದತ್ತ ಬಂಟ್, ಲಿಯೋ ಎಫ್ ಲೋವಿಸ್ ವೇದಿಕೆಯಲ್ಲಿದ್ದರು. ಹಿರಿಯ ಶಿಕ್ಷಕಿ ಸ್ಮಿತಾ ನಾಯ್ಕ, ಶಾಲಾ ಮುಖ್ಯಾಧ್ಯಾಪಕಿ ವೀಣಾ ಮಾಳಗೆಕರ್ ಕಾರ್ಯಕ್ರಮದಲ್ಲಿದ್ದು ತಮ್ಮ ಜವಾಬ್ದಾರಿ ನಿಭಾಯಿಸಿದರು.
Discussion about this post