ಶಿರಸಿಗೆ ಹೋಗಿ ಬರುವುದಾಗಿ ಹೇಳಿ ಹೊರಟ ಐಶ್ವರ್ಯ ನಾಯ್ಕ ಅವರು ಮುಂಡಗೋಡದಿoದ ಕಾಣೆಯಾಗಿದ್ದಾರೆ. ಗೋದಿ ಬಣ್ಣ, ಸಾಧಾರಣ ಮೈಕಟ್ಟು, ದುಂಡನೆಯ ಮುಖವನ್ನು ಹೊಂದಿದ ಅವರಿಗಾಗಿ ಕುಟುಂಬದವರು ಹುಡುಕಾಟ ನಡೆಸಿದ್ದಾರೆ.
ಐಶ್ವರ್ಯ ನಾಯ್ಕ ಅವರಿಗೆ ಮುಂಡಗೋಡು ತವರುಮನೆ. ಶಿರಸಿಯ ಮರಾಠಿಕೊಪ್ಪದ ಸನ್ನಿಕುಮಾರ ನಾಯ್ಕ ಅವರನ್ನು ಐಶ್ವರ್ಯ ನಾಯ್ಕ ಅವರು ವರಿಸಿದ್ದರು. 27 ವರ್ಷದ ಅವರು ತವರಿಗೆ ಬಂದಿದ್ದು, ಅಲ್ಲಿಂದ ಪತಿಯ ಮನೆಗೆ ಹೊರಟಿದ್ದರು. ಆದರೆ, ಶಿರಸಿಗೆ ಮಾತ್ರ ತಲುಪಲಿಲ್ಲ.
ಮನೆಯಿಂದ ಹೊರಡುವಾಗ ಅಣ್ಣನ ಬಳಿ `ಶಿರಸಿಗೆ ಹೋಗುವೆ’ ಎಂದಿದ್ದರು. ತಂದೆ-ತಾಯಿಯ ಬಳಿ ಸಹ ಗಂಡನ ಮನೆಗೆ ಹೋಗುವ ವಿಷಯ ಹೇಳಿದ್ದರು. 56ಕಿಮೀ ದೂರದ ಶಿರಸಿಗೆ ಹೋಗಲು ಒಂದುವರೆ ತಾಸು ಸಾಕು. ಆದರೆ, ದಿನ ಕಳೆದರೂ ಐಶ್ವರ್ಯ ನಾಯ್ಕ ಅವರು ಶಿರಸಿಗೆ ತಲುಪಲಿಲ್ಲ. ಮುಂಡಗೋಡು-ಶಿರಸಿ ದಾರಿಯಲ್ಲಿ ಐಶ್ವರ್ಯ ನಾಯ್ಕ ಅವರನ್ನು ನೋಡಿದವರಿಲ್ಲ.
ಗಂಡನ ಮನೆಯವರು ಹುಡುಕಾಟ ನಡೆಸಿದರೂ ಅವರು ಸಿಗಲಿಲ್ಲ. ತವರು ಮನೆಗೂ ಅವರು ಮರಳಲಿಲ್ಲ. ಗಂಡನ ಮನೆಯನ್ನು ತಲುಪಲಿಲ್ಲ. ಈ ಎಲ್ಲಾ ಹಿನ್ನಲೆ 4.8 ಅಡಿ ಎತ್ತರ, ದುಂಡನೆಯ ಮುಖ, ಸದೃಢ ಮೈ ಕಟ್ಟು, ಗೋಧಿ ಮೈ ಬಣ್ಣ, ಕನ್ನಡ, ಹಿಂದಿ ಹಾಗೂ ಕೊಂಕಣಿ ಭಾಷೆ ಮಾತನಾಡುವ ಐಶ್ವರ್ಯ ನಾಯ್ಕ ಅವರ ಬಗ್ಗೆ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದರು. ಮನೆಯಿಂದ ಹೊರಡುವಾಗ ಐಶ್ವರ್ಯ ನಾಯ್ಕ ಅವರು ಹಸಿರು ಬಣ್ಣದ ಚೂಡಿದಾರ, ಹಸಿರು ಬಣ್ಣದ ಪ್ಯಾಂಟ್ ಹಾಗೂ ಕೆಂಪು ಬಣ್ಣದ ವೇಲ್ ಧರಿಸಿದನ್ನು ವಿವರಿಸಿದರು.
ಪೊಲೀಸರು ಇದೀಗ ಐಶ್ವರ್ಯ ನಾಯ್ಕ ಅವರಿಗಾಗಿ ಹುಡುಕುತ್ತಿದ್ದಾರೆ. ನೀವು ಅವರನ್ನು ನೋಡಿದ್ದರೆ ಇಲ್ಲಿ ಫೋನ್ ಮಾಡಿ: 9480805258 ಅಥವಾ 9480805257
