ಮೇಷ ರಾಶಿ: ಈ ದಿನ ನೀವು ಮಾಡುವ ಕೆಲಸಗಳು ಪೂರ್ಣ ಪ್ರಮಾಣದಲ್ಲಿ ಮುಗಿಯಲಿದೆ. ವಿರೋಧಿಗಳು ನಿಮಗೆ ಅಡ್ಡಿ ಮಾಡುವ ಸಾಧ್ಯತೆಯಿದ್ದರೂ ಅದನ್ನು ನೀವು ಗೆಲ್ಲುವಿರಿ. ಯಾರಿಂದಲೂ ಸಾಲ ಪಡೆಯಬೇಡಿ.
ವೃಷಭ ರಾಶಿ: ನಿಮ್ಮ ಪ್ರತಿಸ್ಪರ್ಧಿಗಳು ಸಾಕಷ್ಟು ಸವಾಲು ಒಡ್ಡಲಿದ್ದಾರೆ. ಅವರನ್ನು ಮೀರಿ ಬೆಳೆಯಲು ಪ್ರಯತ್ನಿಸುವುದು ಅನಿವಾರ್ಯ. ಕುಟುಂಬದಲ್ಲಿ ಸಮಸ್ಯೆ ಬರಬಹುದು. ಎಚ್ಚರಿಕೆವಹಿಸಿ.
ಮಿಥುನ ರಾಶಿ: ನಿಮ್ಮ ಆರೋಗ್ಯದ ಬಗ್ಗೆ ಮುತುವರ್ಜಿವಹಿಸುವುದು ಮುಖ್ಯ. ಈ ದಿನ ದೂರದ ಊರುಗಳಿಗೆ ವಾಹನ ಓಡಿಸುವುದು ಸರಿಯಲ್ಲ. ಖರ್ಚು-ವೆಚ್ಚಗಳ ಬಗ್ಗೆ ನಿಯಂತ್ರಣ ಬೇಕು.
ಕರ್ಕ ರಾಶಿ: ಹಣಕಾಸು ವಿಷಯದಲ್ಲಿ ನಿಮಗೆ ಹಿನ್ನಡೆ ಆಗಲಿದೆ. ಸರ್ಕಾರಿ ನೌಕರರಿಗೆ ಕೆಲಸದ ವಿಷಯದಲ್ಲಿ ಅನೇಕ ಸವಾಲುಗಳು ಎದುರಾಗಲಿದೆ. ನಿಮ್ಮ ನಡೆ ನುಡಿ ನೇರವಾಗಿದ್ದರೆ ಸಮಸ್ಯೆ ಇಲ್ಲ.
ಸಿಂಹ ರಾಶಿ: ಸಹೋದರರ ನಡುವೆ ಒತ್ತಡ-ಕಲಹ ಮೂಡಬಹುದು. ಸಿಟ್ಟು ನಿಮ್ಮ ಸ್ವಭಾವಕ್ಕೆ ಒಳ್ಳೆಯದಲ್ಲ. ಸಂಜೆ ವೇಳೆ ಶುಭ ಸುದ್ದಿ ಬರಲಿದೆ.
ಕನ್ಯಾ ರಾಶಿ: ಸಾಧನೆ ಮಾಡಲು ಈ ದಿನ ಸೂಕ್ತವಾಗಿದೆ. ಹಣಕಾಸು ಹೂಡಿಕೆಗೂ ಯೋಗ್ಯ ಸಮಯ. ಕುಟುಂಬದಲ್ಲಿ ನೆಮ್ಮದಿ ಮೂಡಲಿದೆ.
ತುಲಾ ರಾಶಿ: ಆದಾಯಕ್ಕಿಂತ ಹೆಚ್ಚು ಖರ್ಚು ಆಗದಂತೆ ಮುನ್ನಚ್ಚರಿಕೆವಹಿಸುವುದು ನಿಮ್ಮ ಕೈಯಲ್ಲಿದೆ. ಖರೀದಿ ವಿಷಯದಲ್ಲಿ ಮಿತಿ ಇರಲಿ. ಯೋಗ-ಧ್ಯಾನ ಮಾಡುವುದು ಉತ್ತಮ.
ವೃಶ್ಚಿಕ ರಾಶಿ: ಮಹಿಳೆಯರಿಗೆ ಈ ದಿನ ಮುನ್ನಡೆ ಕಾಣಲಿದೆ. ವಿದ್ಯಾರ್ಥಿಗಳಿಗೂ ಶುಭ ದಿನ. ಕುಟುಂಬದವರ ಸಹಕಾರದಿಂದ ಎಲ್ಲಾ ಕೆಲಸಗಳು ಸರಿಯಾಗಿ ಸಾಗಲಿದೆ.
ಧನು ರಾಶಿ: ವ್ಯಾಪಾರದಲ್ಲಿ ಉತ್ತಮ ಲಾಭ ಆಗಲಿದೆ. ಶೈಕ್ಷಣಿಕ ಕ್ಷೇತ್ರದಲ್ಲಿರುವವರಿಗೆ ನೆಮ್ಮದಿಯ ವಾತಾವರಣ ನಿರ್ಮಾಣವಾಗಲಿದೆ. ನಿಮ್ಮ ಮನಸ್ಸಿನಲ್ಲಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿ
ಮಕರ ರಾಶಿ: ಪರಿಪೂರ್ಣ ಕೆಲಸದಿಂದ ಆದಾಯ ಹೆಚ್ಚಳ ಆಗಲಿದೆ. ಶೃದ್ಧೆಯಿಂದ ಮಾಡಿದ ಸೇವೆ ಪರಿಣಾಮ ಬೀರಲಿದೆ. ಹೂಡಿಕೆಗಳಿಗೆ ಈ ದಿನ ಸೂಕ್ತವಾಗಿದೆ.
ಕುಂಬ ರಾಶಿ: ನಿಮ್ಮ ಆಪ್ತರಾಗಿ ನಟಿಸುವವರ ಬಗ್ಗೆ ಎಚ್ಚರಿಕೆ ಅಗತ್ಯ. ಆರೋಗ್ಯ ಸಮಸ್ಯೆಗಳು ಸಹ ನಿಮ್ಮನ್ನು ಕಾಡಬಹುದು. ಸಹದ್ಯೋಗಿಗಳ ಸಹಕಾರಪಡೆಯುವ ಮುನ್ನ ಯೋಚಿಸಿ.
ಮೀನ ರಾಶಿ: ನಿಮ್ಮೊಳಗಿನ ಆತ್ಮ ವಿಶ್ವಾಸ ಕಡಿಮೆ ಆಗದಂತೆ ನೋಡಿಕೊಳ್ಳಿ. ಬೆಳಗ್ಗೆ ಹಾಗೂ ಸಂಜೆ ತಪ್ಪದೇ ವಾಕಿಂಗ್ ಮಾಡಿ. ಹಣಕಾಸು ವಿಷಯದಲ್ಲಿಯೂ ಜಾಗೃತರಾಗಿರಿ.
Discussion about this post