ಜೊಯಿಡಾ ನಂದಿಗದ್ದೆ ಬಳಿಯ ಕರಿಯಾದಿ ಗ್ರಾಮದಲ್ಲಿ ಒಂಟಿ ಸಲಗ ಓಡಾಟ ನಡೆದಿದೆ. ಆ ಕಾಡಾನೆ ತೋಟ-ಗದ್ದೆಗಳಿಗೆ ನುಗ್ಗಿ ರಂಪಾಟ ಮಾಡುತ್ತಿದೆ.
ಉಳವಿ ಕಡೆಯಿಂದ ಈ ಒಂಟಿ ಆನೆ ಬಂದಿರುವ ಅನುಮಾನವಿದೆ. ಕರಿಯಾದಿ ಗ್ರಾಮದ ಮಧ್ಯದಲ್ಲಿರುವ ಸೊಪ್ಪಿನ ಬೆಟ್ಟದಲ್ಲಿ ಈ ಆನೆ ಬೈನೆ ಮರವನ್ನು ಕೆಡವಿದೆ. ಆನೆ ಮುಂದೆ ಯರಮುಖ ಗ್ರಾಮದತ್ತ ಹೋಗಿರುವ ಹೆಜ್ಜೆಯ ಗುರುತನ್ನು ಗ್ರಾಮಸ್ಥರು ಗುರುತಿಸಿದ್ದಾರೆ. ಈ ಆನೆ ಓಡಾಡಿರುವ ಜಾಗ ಗುಂದ ಊರಿನ ಮಧ್ಯಭಾಗವಾಗಿದ್ದು, ಸುತ್ತಲಿನ ಊರಿನವರು ಆತಂಕದಲ್ಲಿದ್ದಾರೆ.
ಈ ರಸ್ತೆಯಲ್ಲಿ ಸದಾ ಜನರು ಕಾಲ್ನಡಿಗೆಯಲ್ಲಿ ಓಡಾಡುತ್ತಾರೆ. ವಾಹನದಲ್ಲಿ ಓಡಾಡುವವರು ಇದ್ದಾರೆ. ಇದೇ ರಸ್ತೆಯಲ್ಲಿ ಶಾಲೆ ವಿದ್ಯಾರ್ಥಿಗಳು ಓಡಾಡುವ ಕಾರಣ ಜನ ಭಯದಲ್ಲಿದ್ದಾರೆ. ರಾತ್ರಿ ಈ ರಸ್ತೆಯಲ್ಲಿ ಗಸ್ತು ತಿರುಗಾಟ ನಡೆಸಿ ಒಂಟಿ ಸಲಗವನ್ನು ಕಾಡಿಗೆ ಕಳಿಸುವಂತೆ ಜನ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.
Discussion about this post