ಜನಪರ ಕೆಲಸಗಳ ಮೂಲಕ ಜನಮನ್ನಣೆಗಳಿಸಿರುವ ಯಲ್ಲಾಪುರದ ಲಯನ್ಸ ಕ್ಲಬ್ ಶೈಕ್ಷಣಿಕ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸುತ್ತಿದೆ. ಕಳೆದ ಒಂದು ದಶಕದಿಂದ ಲಯನ್ಸ ಕ್ಲಬ್ ಪದಾಧಿಕಾರಿಗಳು ಉತ್ತಮ ಶಿಕ್ಷಕರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುತ್ತಿದ್ದಾರೆ.
ಲಯನ್ಸ ಕ್ಲಬ್ ಯಲ್ಲಾಪುರ ಘಟಕವು ಈ ಬಾರಿಯೂ 5 ಶಿಕ್ಷಕರನ್ನು ಗೌರವಿಸಲು ನಿರ್ಧರಿಸಿದೆ. ಕುಂದರಗಿ ಸಂಸ್ಕೃತ ಪಾಠಶಾಲೆಯ ಶಿಕ್ಷಕ ಗಜಾನನ ಭಟ್ಟ, ಹುಟಕಮನೆ ಶಾಲೆಯ ಶಿಕ್ಷಕ ಸುಭ್ರಾಯ ಭಟ್ಟ, ಆನಗೋಡು ಶಾಲೆ ಶಿಕ್ಷಕ ಮಾರುತಿ ಆಚಾರಿ, ಕುಂದರಗಿ ಶಾಲೆಯ ಶಿಕ್ಷಕಿ ಶೋಭಾ ನಾಯ್ಕ ಹಾಗೂ ಕಿರವತ್ತಿಯ ಲಿಟ್ಲ ಪ್ಲವರ್ ಸ್ಕೂಲ್ ಶಿಕ್ಷಕಿ ತನುಜಾ ದೇವಾಡಿಗ ಅವರು ಈ ಬಾರಿ ಲಯನ್ಸ್ ಕ್ಲಬ್ಬಿನ ಸನ್ಮಾನ ಸ್ವೀಕರಿಸಲಿದ್ದಾರೆ.
ಪರಿಸರ ರಕ್ಷಣೆ, ಆರೋಗ್ಯದ ಬಗ್ಗೆ ಅರಿವು, ರಕ್ತದಾನ ಶಿಬಿರ ಸೇರಿ ಅನೇಕ ಕಾರ್ಯಚಟುವಟಿಕೆಗಳಲ್ಲಿ ಯಲ್ಲಾಪುರ ಲಯನ್ಸ ಕ್ಲಬ್ ಸದಸ್ಯರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶೈಕ್ಷಣಿಕ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಲಯನ್ಸ ಕ್ಲಬ್ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಸೆಪ್ಟೆಂಬರ್ 18ರ ಸಂಜೆ 5 ಗಂಟೆಗೆ ಎಪಿಎಂಸಿ ಅಡಿಕೆ ಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಅಲ್ಲಿಯೇ ಉತ್ತಮ ಶಿಕ್ಷಕರನ್ನು ಸನ್ಮಾನಿಸಲಾಗುತ್ತದೆ. ಲಯನ್ಸ ಕ್ಲಬ್ ಅಧ್ಯಕ್ಷ ಶೇಶಗಿರಿ ಪ್ರಭು, ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ, ಲಯನ್ಸ ಪ್ರಮುಖರಾದ ಸಯ್ಯದ ತಂಗಲ್, ಸುರೇಶ ಬೋರ್ಕರ್, ಮೋಹನ ರೇವಣಕರ್, ರವಿರಾಜ ಪ್ರಭು ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿರಲಿದ್ದಾರೆ.
Discussion about this post