ಅರಣ್ಯಾಧಿಕಾರಿಗಳಿಂದ ಅತಿಕ್ರಮಣದಾರರ ಮೇಲೆ ನಡೆಯುವ ದೌರ್ಜನ್ಯದ ವಿರುದ್ಧ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಪೊಲೀಸ್ ದೂರು ನೀಡಲು ನಿರ್ಧರಿಸಿದೆ. ಸಿದ್ದಾಪುರದಲ್ಲಿ ಈ ಬಗ್ಗೆ ನಿರ್ಧರಿಸಲಾಗಿದ್ದು, ಬುಧವಾರ ಅರಣ್ಯ ಅತಿಕ್ರಮಣದಾರರು ಅಲ್ಲಿನ ಪೊಲೀಸ್ ಠಾಣೆಗೆ ತೆರಳಿ ತಮಗೆ ರಕ್ಷಣೆ ಒದಗಿಸುವಂತೆ ಒತ್ತಾಯಿಸಿದ್ದಾರೆ.
`ಅರಣ್ಯವಾಸಿಗಳ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದೆ. ಕಾನೂನುಬಾಹಿರವಾಗಿ ಒಕ್ಕಲೆಬ್ಬಿಸಲಾಗುತ್ತಿದೆ. ಪದೇ ಪದೇ ದೌರ್ಜನ್ಯ ನಡೆಯುತ್ತಿದ್ದು, ಅರಣ್ಯವಾಸಿಗಳಿಗೆ ಪೊಲೀಸರು ರಕ್ಷಣೆ ಒದಗಿಸಬೇಕು’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಆಗ್ರಹಿಸಿದರು. ವಾಸ ಹಾಗೂ ಸಾಗುವಳಿಗಾಗಿ ಅರಣ್ಯ ಭೂಮಿ ಒತ್ತುವರಿ ಮಾಡಿದವರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಅವರು ಖಂಡಿಸಿದರು.
ಅರಣ್ಯವಾಸಿಗಳಿಗೆ ಆತಂಕ ಮಾಡಿದ ಅಧಿಕಾರಿಗಳ ವಿರುದ್ಧ ಅತಿಕ್ರಮಣದಾರರು ಆಕ್ರೋಶವ್ಯಕ್ತಪಡಿಸಿದರು. ಸಿದ್ದಾಪುರ ವಲಯ ಅರಣ್ಯಾಧಿಕಾರಿ ಕಛೇರಿಯಲ್ಲಿ ತಹಶೀಲ್ದಾರ ಮಧುಸೂಧನ್ ಕುಲಕರ್ಣಿ, ಪಿಐ ಸೀತಾರಾಮ ಹಾಗೂ ವಲಯ ಅರಣ್ಯಾಧಿಕಾರಿ ಅಜಯ ಅವರ ಸಮಕ್ಷೇಮದಲ್ಲಿ ಅರಣ್ಯವಾಸಿಗಳ ಸಭೆ ನಡೆಯಿತು. `ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದವರ ಪರಿಶೀಲನಾ ಪ್ರಕ್ರಿಯೆ ಪೂರ್ಣ ಆಗುವವರೆಗೆ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವುದು ಸರಿಯಲ್ಲ’ ಎಂದು ರವೀಂದ್ರ ನಾಯ್ಕ ಅವರು ತಿಳಿಸಿದರು. ಈ ಬಗ್ಗೆ ಸರ್ಕಾರದ ಸುತ್ತೋಲೆಗಳನ್ನು ಅವರು ಪ್ರದರ್ಶಿಸಿದರು.
ಹಿರಿಯ ದುರೀಣ ವಸಂತ ನಾಯ್ಕ ಮನಮನೆ ಸಹ ಹೋರಾಟಕ್ಕೆ ಧ್ವನಿಗೂಡಿಸಿದರು. ಪ್ರಮುಖರಾದ ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ಬಿಡಿ ನಾಯ್ಕ ಇಟಗಿ, ಹರಿಹರ ನಾಯ್ಕ ಹೆಗ್ಗರಣೆ, ಸೀತಾರಾಮ ಗೌಡ, ಹೆಗ್ಗರಣೆ, ಜಗದೀಶ ನಾಯ್ಕ ಶಿರಳಗಿ, ದಿನೇಶ ನಾಯ್ಕ ಬೇಡ್ಕಣಿ, ಜೈವಂತ ನಾಯ್ಕ ಕಾನಗೋಡ, ರಾಘು ಕವಂಚೂರು, ಸುಧಾಕರ್ ಮಡಿವಾಳ ಬಿಳಗಿ, ನಾಗÀರಾಜ ಮರಾಠಿ ದೊಡ್ಮನೆ, ಚೌಡು ಗೌಡ, ಜನಾರ್ಧನ್ ನಾಯ್ಕ ಹೊಸುರೂ, ಸುಭಾನ್ ಸಾಬ ಅರೆಂದೂರು, ಹಾಜೀರಾ ಬೇಂಗA ಕಾನಗೋಡ, ಉಮೇಶ ನಾಯ್ಕ ಬೇಡ್ಕಣಿ, ವಿನಾಯಕ ಮರಾಠಿ ದೊಡ್ಮನೆ, ರಾಮಚಂದ್ರ ನಾಯ್ಕ, ಭಾಸ್ಕರ್ ನಾಯ್ಕ ಮೊದಲಾದವರು ತಮ್ಮ ಆಕ್ರೋಶಹೊರಹಾಕಿದರು.
Discussion about this post