ಕಾರವಾರ ಮಾಜಾಳಿ ಗಾಭೀತವಾಡದಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಪೊಲೀಸರು ಬೇದಿಸಿದ್ದು, ಮಾಂಗಲ್ಯ ಸರ ಕದ್ದವನನ್ನು ಜೈಲಿಗೆ ಕಳುಹಿಸಿದ್ದಾರೆ.
ಮಾಜಾಳಿ ಗಾಭೀತವಾಡದ ಪರೇಶ ಮೇಥಾ ಅವರ ಮನೆಗೆ ನುಗ್ಗಿದ ರಮೇಶ ಮೇಥಾ ಅವರು ಅಲ್ಲಿದ್ದ ಒಡವೆ ಕದ್ದಿದ್ದರು. ಪರೇಶ ಮೇಥಾ ಅವರ ತಂಗಿ ಪ್ರಗತಿ ಮಾಜಾಳಿಕರ್ ಅವರ ಮಾಂಗಲ್ಯದ ಸರವನ್ನು ಅಪಹರಿಸಿ ಪರಾರಿಯಾಗಿದ್ದರು. ಈ ಬಗ್ಗೆ ಪೊಲೀಸ್ ದೂರು ನೀಡಿದ ಪರೇಶ ಮೇಥಾ ಅವರು ಕುಟುಂಬದವರೇ ಚಿನ್ನಾಭರಣ ಕದ್ದಿರುವ ಸಂಶಯವ್ಯಕ್ತಪಡಿಸಿದ್ದರು. ಅಗಸ್ಟ 7ರಂದು ಚಿನ್ನ ಕಳ್ಳತನ ನಡೆದಿದ್ದು, ಎಲ್ಲಾ ಕಡೆ ಚಿನ್ನಾಭರಣ ಹುಡುಕಿದರೂ ಸಿಗದ ಕಾರಣ ಸೆಪ್ಟೆಂಬರ್ 4ರಂದು ಅವರು ಪೊಲೀಸ್ ಪ್ರಕರಣ ದಾಖಲಿಸಿದ್ದರು.
ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಮುಂದಾಳತ್ವದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಜಗದೀಶ ಎಂ ಜೊತೆ ಡಿವೈಎಸ್‌ಪಿ ಎಸ್ ವಿ ಗಿರೀಶ್ ಅವರು ಕದ್ರಾ ಪಿಐ ಪ್ರಕಾಶ ದೇವಾಡಿಗ ಅವರ ಜೊತೆ ಕಳ್ಳತನದ ವಿಧಾನ ಗಮನಿಸಿದರು. ಎ ಎಸ್ ಐ ಸುನಿತಾ ಕಡವಡಕರ್, ಪೊಲೀಸ್ ಸಿಬ್ಬಂದಿ ರಾಜೇಶ ನಾಯ್ಕ, ವಿನಯ ಕಾಣಕೋಣಕರ್, ಅಜಿತ್ ಗೋವೇಕರ್, ಪ್ರವೀಣ ಗವಾಣಿಕರ್, ಕುಮಾರೇಶ ಲಮಾಣಿ, ಸತೀಶ ಗಾಂವ್ಕರ್ ಹಾಗೂ ಜಗದೀಶ್ ಸೇರಿ ಕಳ್ಳನ ಹುಡುಕಾಟ ನಡೆಸಿದರು.
ವಾರಗಳ ಕಾಲ ಹುಡುಕಾಟ ನಡೆಸಿದ ಪರಿಣಾಮ ರಮೇಶ ಮೇಥಾ ಸಿಕ್ಕಿಬಿದ್ದರು. ಅವರು ಕದ್ದಿದ್ದ ಮಾಂಗಲ್ಯ ಸರವನ್ನು ಪೊಲೀಸರು ವಶಕ್ಕೆಪಡೆದರು. ಕಳ್ಳನನ್ನು ಬಂಧಿಸಿ ಜೈಲಿಗೆ ಕಳುಹಿಸಿದರು.
Discussion about this post