ಮಾಧ್ಯಮ ಶ್ರೀ ಪ್ರಶಸ್ತಿ ಪುರಸ್ಕೃತ ಪತ್ರಕರ್ತೆ ವಿನುತಾ ಹೆಗಡೆ ಅವರನ್ನು ತವರೂರಿನ ಜನ ಸನ್ಮಾನಿಸಿದ್ದಾರೆ. ಬುಧವಾರ ಯಲ್ಲಾಪುರದ ಭಾಗಿನಕಟ್ಟಾದಲ್ಲಿ ನಡೆದ ಸಮಗ್ರ ತೋಟಗಾರಿಕೆ ಕ್ಷೇತ್ರ ಪಾಠಶಾಲೆಗೆ ಅವರನ್ನು ಆಮಂತ್ರಿಸಿ, ಅದೇ ವೇದಿಕೆಯಲ್ಲಿ ವಿನುತಾ ಹೆಗಡೆ ಅವರನ್ನು ಊರಿನವರು ಗೌರವಿಸಿದ್ದಾರೆ.
ಸನ್ಮಾನ ಸ್ವೀಕರಿಸಿ ವಿನುತಾ ಹೆಗಡೆ ಅವರು `ಊರಿನಲ್ಲಿ ಸಿಕ್ಕ ಸನ್ಮಾನ ಖುಷಿ ಹೆಚ್ಚಿಸಿದೆ. ಮಾಧ್ಯಮ ಶ್ರೀ ದೊರೆತ ಹಿನ್ನಲೆ ಊರಿನವರು ಗೌರವಿಸಿದ್ದು ನಿಜಕ್ಕೂ ಸ್ಮರಣೀಯ. ಈ ಸನ್ಮಾನ ಪ್ರದ್ಮಶ್ರೀ ಪ್ರಶಸ್ತಿಯ ಖುಷಿ ನೀಡಿದೆ’ ಎಂದರು. ಸಾಧಕ ಕೃಷಿಕ ಶ್ರೀಕೃಷ್ಣ ಭಟ್ಟ ಅವರನ್ನು ಈ ವೇದಿಕೆಯಲ್ಲಿ ಗೌರವಿಸಲಾಯಿತು. `ಅಡಿಕೆ ಬೆಳೆಯುವ ರೈತರು ಇದರೊಂದಿಗೆ ಉಪಬೆಳೆಗಳಿಗೂ ಒತ್ತು ಕೊಡಬೇಕು. ಸನ್ಮಾನಿತರನ್ನು ಮಾದರಿಯಾಗಿರಿಸುಕೊಂಡು ರೈತರು ಸಾಧನೆ ಮಾಡಬೇಕು’ ಎಂದು ಸಹಾಯಕ ತೋಟಗಾರಿಕೆ ನಿರ್ದೇಶಕ ಸತೀಶ ಹೆಗಡೆ ಅವರು ಕರೆ ನೀಡಿದರು. ಕೃಷಿ ಸುಧಾರಣಾ ಪದ್ಧತಿಗಳ ಬಗ್ಗೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ನಾಯ್ಕ ಅವರು ಅರಿವು ಮೂಡಿಸಿದರು.
ಮಾವಿನ ಮನೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಬ್ಬಣ್ಣ ಕುಂಟೇಗಾಳಿ, ವಜ್ರಳ್ಳಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಭಗೀರಥ ನಾಯ್ಕ, ಉಪಾಧ್ಯಕ್ಷೆ ಗಂಗಾ ಕೋಮಾರ, ತೋಟಗಾರಿಕೆ ಸಹಾಯಕ ಅಧಿಕಾರಿ ವೇದಾವತಿ ನಾಯ್ಕ, ಆತ್ಮ ಯೋಜನೆಯ ಎಂ ಜಿ ಭಟ್ಟ, ಪ್ರಮುಖರಾದ ಲಲಿತಾ ಹೆಗಡೆ ಉಂಚಳ್ಳಿ, ಸದಾನಂದ ಭಟ್ಟ ಮಾತನಾಡಿದರು. ಹಿರಿಯ ವೈದಿಕ ರಾಮಕೃಷ್ಣ ಭಟ್ಟ ನೆಲೆಮನೆ ಗ್ರಾಮೀಣ ಪ್ರದೇಶದ ಸಾಧಕರ ಶ್ರಮ ಪರಿಚಯಿಸಿದರು. ಶ್ರೀಮತಿ ಹೆಗಡೆ, ಸುಬ್ರಹ್ಮಣ್ಯ ಗಾಂವ್ಕರ, ಶಿವಪ್ರಸಾದ ಗಾಂವ್ಕರ್, ಗಜಾನನ ಭಟ್ಟ ಕಳಚೆ ತಮ್ಮ ಜವಾಬ್ದಾರಿ ನಿಭಾಯಿಸಿದರು.
Discussion about this post