ಭಟ್ಕಳದ ಕಾಡಿನಲ್ಲಿ ರಾಶಿ ರಾಶಿ ಮೂಳೆ ಬಿದ್ದ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಜಾನುವಾರುಗಳನ್ನು ಹತ್ಯೆ ಮಾಡಿದ ಇಬ್ಬರನ್ನು ಬಂಧಿಸಿದ್ದಾರೆ. ಸೆ 11ರಂದು ಉಪವಲಯ ಅರಣ್ಯಾಧಿಕಾರಿ ಮಾರುತಿ ಸೊರಗಾಂವಿ ಅವರು ದೂರು ನೀಡಿದ ಪರಿಣಾಮ ದುಷ್ಕರ್ಮಿಗಳು ಸಿಕ್ಕಿ ಬಿದ್ದಿದ್ದಾರೆ.
ಭಟ್ಕಳ ನಗರದ ಮುಗ್ಗುಂ ಕಾಲೋನಿ ಗುಡ್ಡೆ ಪ್ರದೇಶದಲ್ಲಿ ಜಾನುವಾರುಗಳ ಹತ್ಯೆ ನಡೆದಿತ್ತು. ಜಾನುವಾರುಗಳ ಚರ್ಮ-ಎಲುಬು ಸೇರಿದಂತೆ ಬಿಡಿಭಾಗಗಳನ್ನು ಅರಣ್ಯ ಪ್ರದೇಶದಲ್ಲಿ ಬಿಸಾಡಲಾಗಿತ್ತು. ಅರಣ್ಯ ಪ್ರದೇಶದಲ್ಲಿ ತ್ಯಾಜ್ಯ ಎಸೆದ ಬಗ್ಗೆ ಅರಣ್ಯಾಧಿಕಾರಿಗಳು ದೂರು ನೀಡಿದ್ದರು.
ಕರ್ನಾಟಕ ಗೋಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯಿದೆ-2020ರ ಕಲಂ 4, 12 ಸೇರಿದಂತೆ ಹಲವು ವಿಧಿಗಳಡಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆದಾಗ ಸೆ 17ರಂದು ಡಿವೈಎಸ್ಪಿ ಮಹೇಶ್ ಎಂ ಕೆ ಅವರ ತಂಡಕ್ಕೆ ಮುಗ್ಗುಂ ಕಾಲೋನಿಯ ಮೊಹಮ್ಮದ್ ಸಮಾನ್ ಹಾಗೂ ಚೌಥನಿಯ ಮೊಹಮ್ಮದ್ ರಾಹೀನ್ ಅವರ ಮೇಲೆ ಅನುಮಾನ ಮೂಡಿತು. ಪಿಐ ದಿವಾಕರ ಪಿ.ಎಮ್ ನೇತೃತ್ವದ ತಂಡ ಅವರಿಬ್ಬರನ್ನು ವಿಚಾರಣೆಗೆ ಒಳಪಡಿಸಿತು. ಆಗ ತಪ್ಪಿತಸ್ಥರು ಸಿಕ್ಕಿಬಿದ್ದಿದ್ದು, ಪಿಎಸ್ಐ ನವೀನ್ ನಾಯ್ಕ, ತಿಮ್ಮಪ್ಪ ಎಸ್ ಸೇರಿ ಇಬ್ಬರನ್ನು ವಶಕ್ಕೆಪಡೆದರು.
Discussion about this post