ಮುoಡಗೋಡಿನ ನಕಲಿ ವೈದ್ಯೆ ರತ್ನಮ್ಮ ಅವರು ಎರಡನೇ ಬಾರಿ ಸಿಕ್ಕಿಬಿದ್ದಿದ್ದಾರೆ. ಅನಧಿಕೃತವಾಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೇಳೆಯಲ್ಲಿಯೇ ಆರೋಗ್ಯ ಅಧಿಕಾರಿಗಳು ಅವರ ಕ್ಲಿನಿಕ್ ಮೇಲೆ ದಾಳಿ ಮಾಡಿದ್ದಾರೆ.
ಮುಂಡಗೋಡದ ಕಾತೂರ ಗ್ರಾಮದಲ್ಲಿ ರತ್ನಮ್ಮ ಅವರು ಕ್ಲಿನಿಕ್ ನಡೆಸುತ್ತಿದ್ದರು. ಕೆಲ ತಿಂಗಳ ಹಿಂದೆ ಅಧಿಕಾರಿಗಳು ಆ ಕ್ಲಿನಿಕ್ ಮೇಲೆ ದಾಳಿ ಮಾಡಿದ್ದರು. ಆ ವೇಳೆ ನಿಯಮಾನುಸಾರ ಕ್ಲಿನಿಕ್ ನಡೆಸದೇ ಇರುವುದು ಗಮನಕ್ಕೆ ಬಂದಿದ್ದು, ಅಧಿಕಾರಿಗಳು ಕ್ಲಿನಿಕ್’ಗೆ ಬೀಗ ಜಡಿದಿದ್ದರು.
ಈ ವೇಳೆ ರತ್ನಮ್ಮ ಅವರು ಮುಚ್ಚಳಿಕೆ ಬರೆದುಕೊಟ್ಟಿದ್ದು, ಅನಧೀಕೃತ ಕ್ಲಿನಿಕ್ ನಡೆಸುವುದಿಲ್ಲ ಎಂದಿದ್ದರು. ಆದರೆ, ಬುಧವಾರ ಆರೋಗ್ಯ ಅಧಿಕಾರಿಗಳು ಮತ್ತೆ ದಾಳಿ ನಡೆಸಿದಾಗ ಅಲ್ಲಿ ಅನಧಿಕೃತವಾಗಿ ಕ್ಲಿನಿಕ್ ನಡೆಯುತ್ತಿತ್ತು. ಕೆ ಪಿ ಎಂ ಇ ನೋಂದಣಿ ಸಹ ಇಲ್ಲದೇ ರತ್ನಮ್ಮ ಕ್ಲಿನಿಕ್ ನಡೆಸುತ್ತಿದ್ದು, ಈ ಹಿನ್ನಲೆ ಆರೋಗ್ಯ ಅಧಿಕಾರಿಗಳು ಕಾನೂನು ಕ್ರಮ ಜರುಗಿಸಿದರು.
ರತ್ನಮ್ಮ ಅವರ ಬಗ್ಗೆ ಸಾರ್ವಜನಿಕರು ಸಹ ಸಾಕಷ್ಟು ದೂರು ನೀಡಿದ್ದರು. ಸದ್ಯ ಕ್ಲಿನಿಕ್ ಬಂದ್ ಮಾಡಲಾಗಿದ್ದು, ವಿಚಾರಣೆ ಮುಂದುವರೆದಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ನೀರಜ್ ಬಿ., ತಾಲೂಕ ಆರೋಗ್ಯಾಧಿಕಾರಿ ಡಾ ನರೇಂದ್ರ ಪವಾರ್, ಆಡಳಿತ ವೈದ್ಯಾಧಿಕಾರಿ ಡಾ ಭರತ್ ಅವರ ತಂಡ ಈ ದಾಳಿ ನಡೆಸಿದೆ.
Discussion about this post