ಮೇಷ ರಾಶಿ: ಈ ದಿನ ನೀವು ಅತ್ಯಂತ ತಾಳ್ಮೆಯಿಂದ ವ್ಯವಹರಿಸುವುದು ಮುಖ್ಯ. ನಿಮ್ಮ ನಿರ್ಧಾರಗಳು ಸ್ಪಷ್ಠತೆಯಿಂದ ಕೂಡಿರಲಿ. ನಿಮ್ಮ ಆದಾಯ ಹೆಚ್ಚಾಗಲಿದೆ. ಗಲಾಟೆ ನಡೆಯುವ ಸ್ಥಳಗಳಿಗೆ ಹೋಗಬೇಡಿ.
ವೃಷಭ ರಾಶಿ: ನಿಮ್ಮ ಕುಟುಂಬದವರ ಜೊತೆ ದಿನ ಕಳೆಯಿರಿ. ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳು ಏಳಿಗೆ ಬಗ್ಗೆ ಯೋಚಿಸಿ. ಖುರ್ಚ ವೆಚ್ಚಗಳು ನಿಮ್ಮ ನಿಯಂತ್ರಣದಲ್ಲಿರಲಿ.
ಮಿಥುನ ರಾಶಿ: ನಿಮ್ಮ ಉದ್ಯೋಗ ಸರಾಗವಾಗಿ ಸಾಗಲಿದೆ. ವ್ಯಾಪಾರ-ವ್ಯವಹಾರದಲ್ಲಿ ತೊಡಗಿದವರಿಗೆ ಆದಾಯ ಹೆಚ್ಚಳವಾಗಲಿದೆ. ಪ್ರಯಾಣ ಸಾಧ್ಯತೆಗಳಿವೆ.
ಕರ್ಕ ರಾಶಿ: ಆರೋಗ್ಯ ಏರುಪೇರಾಗುವ ಲಕ್ಷಣಗಳು ಹೆಚ್ಚಾಗಿದೆ. ಸಣ್ಣ ಸಣ್ಣ ನೋವುಗಳನ್ನು ಉದಾಸೀನ ಮಾಡಬೇಡಿ. ದೂರದೃಷ್ಠಿಯ ಯೋಜನೆಗಳು ಫಲ ಕೊಡಲಿದೆ.
ಸಿಂಹ ರಾಶಿ: ನಿಮ್ಮ ಉದ್ದೇಶಿತ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಉತ್ತಮ ಸಮಯ. ನಿಮ್ಮ ಕೌಶಲ್ಯದಿಂದ ಆದಾಯಗಳಿಸಲು ಸಾಧ್ಯವಿದೆ. ಕುಟುಂಬದವರ ಬೆಂಬಲಪಡೆದು ಕೆಲಸ ಮಾಡುವುದು ಉತ್ತಮ.
ಕನ್ಯಾ ರಾಶಿ: ವ್ಯಾಪಾರ-ವ್ಯವಹಾರಗಳಲ್ಲಿ ತೊಡಗಿದವರಿಗೆ ಲಾಭ ಆಗಲಿದೆ. ಹೊಸ ವಿಷಯಗಳ ಕಲಿಕೆಗೆ ಯೋಗ್ಯ ಸಮಯ. ವಿದ್ಯಾರ್ಥಿಗಳ ಓದಿಗೂ ಉತ್ತಮ ದಿನ. ಒತ್ತಡಗಳಿಂದ ಹೊರರಲು ಪ್ರಯತ್ನಿಸಿ.
ತುಲಾ ರಾಶಿ: ರಾಜಕೀಯ ಸೇರಿ ಸಾಮಾಜಿಕ ಚಟುವಟಿಕೆಗಳಲ್ಲಿರುವವರಿಗೆ ಮನ್ನಣೆ ಸಿಗಲಿದೆ. ನಿಮ್ಮ ಮಾತು ನಿಮ್ಮ ಹಿಡಿತದಲ್ಲಿರಲಿ. ತಾಳ್ಮೆಯಿಂದ ವ್ಯವಹರಿಸಿ.
ವೃಶ್ಚಿಕ ರಾಶಿ: ಸ್ವಂತ ಉದ್ದಿಮೆಗಳಲ್ಲಿ ತೊಡಗಿದವರಿಗೆ ಯಶಸ್ಸು ಸಿಗಲಿದೆ. ಆರೋಗ್ಯದಲ್ಲಿ ಏರಳಿತ ಆಗುವ ಸಾಧ್ಯತೆಯಿದೆ. ನಿಮ್ಮ ಮನಸ್ಸು ನಿಮ್ಮ ಹಿಡಿತದಲ್ಲಿರುವಂತೆ ನೋಡಿಕೊಳ್ಳಿ.
ಧನು ರಾಶಿ: ನಿಮ್ಮಲ್ಲಿರುವ ಹಣ ಖರ್ಚಾಗುವ ಸಾಧ್ಯತೆಗಳಿವೆ. ಹೀಗಾಗಿ ಅನಗತ್ಯ ಖರ್ಚುಗಳನ್ನು ತಪ್ಪಿಸಿ. ಮಾನಸಿಕವಾಗಿ ಕುಗ್ಗದಿರಿ. ಹೊಸ ಅವಕಾಶಗಳು ಬಂದರೆ ಅದಕ್ಕೆ ಹೊಂದಿಕೊಳ್ಳುವುದು ಅನಿವಾರ್ಯ.
ಮಕರ ರಾಶಿ: ನೀವು ಮಾಡುತ್ತಿರುವ ಉದ್ಯೋಗ ಹಾಗೂ ಉದ್ದಿಮೆಯನ್ನು ಮೇಲ್ದರ್ಜೆಗೆ ಏರಿಸಲು ಚಿಂತಿಸಿ. ಆಪ್ತರ ಸಹಾಯಪಡೆದು ಅವರ ಸಲಹೆ ಅನುಸರಿಸಿ.
ಕುಂಭ ರಾಶಿ: ನಿಮ್ಮ ಈ ಪರಿಸ್ಥಿತಿಯಲ್ಲಿ ಕುಟುಂಬದ ಸಂಬoಧಗಳು ಹಾಳಾಗದಂತೆ ನೋಡಿಕೊಳ್ಳುವುದು ಅತಿ ಮುಖ್ಯ. ನೀವು ಆಡುವ ಮಾತು ಬೇರೆಯವರಿಗೆ ನೋವಾಗದಂತೆ ಎಚ್ಚರಿಕೆವಹಿಸಬೇಕು. ಪ್ರೀತಿ-ಸ್ನೇಹ ವಿಷಯದಲ್ಲಿ ಮುನ್ನಚ್ಚರಿಕೆವಹಿಸಿ.
ಮೀನ ರಾಶಿ: ಮಕ್ಕಳ ಜೊತೆ ಕಾಲ ಕಳೆಯಿರಿ. ಮಕ್ಕಳ ಆಗು-ಹೋಗುಗಳಿಗೆ ಸ್ಪಂದಿಸಿ. ಹಣಕಾಸು ನಿರ್ವಹಣೆ ಸರಿಯಾದ ದಿಕ್ಕಿನಲ್ಲಿರಲಿ. ಧ್ಯಾನ ಮಾಡುವುದನ್ನು ಮರೆಯಬೇಡಿ.
Discussion about this post