ಸಿಗರೇಟಿನ ಸೀಸದೊಳಗೆ ಗಾಂಜಾ ಹಾಕಿ ಹೊಗೆ ಬಿಡುತ್ತಿದ್ದ ಕಾಲೇಜು ವಿದ್ಯಾರ್ಥಿ ವಿರುದ್ಧ ದಾಂಡೇಲಿ ಪೊಲೀಸರು ಕ್ರಮ ಜರುಗಿಸಿದ್ದಾರೆ. ದಾಂಡೇಲಿ ನ್ಯೂ ಸ್ಟಾಪ್ ಕ್ವಾಟರ್ಸ ಸೋಹೇಬ ಗುಡಸಾಬ (21) ಗಾಂಜಾ ಸೇದುವಾಗ ಸಿಕ್ಕಿ ಬಿದ್ದಿದ್ದಾರೆ.
ಸೆ 16ರ ರಾತ್ರಿ ಸುಭಾಸ ನಗರದ ಒಳಾಂಗಣ ಕ್ರೀಡಾಂಗಣದ ಬಳಿ ಸೋಹೇಬ ಗುಡಸಾಬ ಅಲೆದಾಡುತ್ತಿದ್ದರು. ಅವರ ಕೈಯಲ್ಲಿ ಅರ್ದ ಸೇದಿದ ಸಿಗರೇಟಿನ ತುಂಡು ಪೊಲೀಸರಿಗೆ ಕಾಣಿಸಿತು. ಪೊಲೀಸರು ಅವರ ಬಳಿ ಹೋದಾಗ ಅಡಗುವ ಪ್ರಯತ್ನ ಮಾಡಿದರು. ಪೊಲೀಸರ ಪ್ರಶ್ನೆಗೆ ಸರಿಯಾಗಿ ಉತ್ತರಿಸಲು ಸೋಹೇಬ ಗುಡಸಾಬ್ ತಡವರಿಸಿದರು.
ಅರ್ದ ಸೇದಿದ ಸಿಗರೇಟಿನ ಮೇಲೆ ಪೊಲೀಸರಿಗೆ ಅನುಮಾನ ಮೂಡಿತು. ಅದನ್ನು ವಶಕ್ಕೆಪಡೆದು ಸೋಹೇಬ ಗುಡಸಾಬ ಅವರನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದರು. ತಪಾಸಣೆ ನಡೆಸಿದ ವೈದ್ಯಾಧಿಕಾರಿಗಳು `ಸೋಹೇನ್ ಗುಡಸಾಬ್ ಸೇದಿರುವುದು ಸಿಗರೇಟಲ್ಲ.. ಗಾಂಜಾ’ ಎಂದು ದೃಢೀಕರಿಸಿದರು. ಪಿಎಸ್ಐ ಕಿರಣ ಪಾಟೀಲ ಅವರು ಸೋಹೇಬ್ ಗಡಸಾಬ್ ಅವರನ್ನು ವಶಕ್ಕೆಪಡೆದು ಪ್ರಕರಣ ದಾಖಲಿಸಿದರು.
ಹಗಲಿನಲ್ಲಿ ಶ್ರಮಿಕ: ಸಂಜೆ ವೇಳೆ ಮಾದಕ!
ಹಗಲಿನ ವೇಳೆ ದಾಂಡೇಲಿಯ ಸಿಮೆಂಟ್ ಅಂಗಡಿಯಲ್ಲಿ ಕೆಲಸ ಮಾಡುವ ಪ್ರತಾಪ ಮಾದರ್ ಅವರು ಸಂಜೆ ಅಕ್ರಮ ಸರಾಯಿ ಮಾರಾಟ ದಂಧೆ ಶುರು ಮಾಡಿದ್ದು, ಪೊಲೀಸರು ಇದಕ್ಕೆ ತಡೆ ಒಡ್ಡಿದ್ದಾರೆ. ದಾಂಡೇಲಿ ಕೊಳಗಿಬೀಸಿನ ಪ್ರತಾಪ ಮಾದರ್ ಅವರು ಅಂಬೇವಾಡಿಯ ಜಿ+2 ವಸತಿ ಸಂಕೀರ್ಣದ ಬಳಿ ಸರಾಯಿ ಮಾರಾಟ ಮಾಡುವಾಗ ಸಿಕ್ಕಿ ಬಿದ್ದಿದ್ದಾರೆ. ಸೆ 16ರ ಸಂಜೆ ಅವರು ಅಲ್ಲಿ ಬರುವ ಜನರಿಗೆ ಸರಾಯಿ ಮಾರಾಟ ಮಾಡುತ್ತಿದ್ದಾಗ ಪಿಎಸ್ಐ ಅಮೀನ ಸಾಬ್ ಅತ್ತಾರ್ ದಾಳಿ ನಡೆಸಿದರು. ಪ್ರತಾಪ ಮಾದರ್ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದರು.
