ಹೊನ್ನಾವರದಲ್ಲಿ ಸ್ನೇಹಿತರಿಬ್ಬರ ನಡುವೆ ಶುರುವಾದ ಜಗಳ ಜಾಕು ಇರಿತದ ಸ್ವರೂಪಪಡೆದಿದೆ. ವಿವೇಕ ನಾಯ್ಕ ಹಾಗೂ ಅದ್ನಾನ್ ಸಂಶಿ ಎಂಬಾತರು ಪರಸ್ಪರ ಹೊಡೆದಾಡಿದ ವಿಡಿಯೋ ವೈರಲ್ ಆಗಿದೆ.
ಹೊನ್ನಾವರ ಮಾವಿನಹೊಳೆ ಬಳಿ ಗುರುವಾರ ಈ ಗಲಾಟೆ ನಡೆದಿದೆ. ಹೊಡೆದಾಟದಲ್ಲಿ ಅದ್ನಾನ್ ಸಂಶಿ ಅವರು ವಿವೇಕ ನಾಯ್ಕ ಅವರಿಗೆ ಚಾಕು ಚುಚ್ಚಿದ್ದಾರೆ. ಗಾಯಗೊಂಡ ಕುದ್ರಿಯ ವಿವೇಕ ನಾಯ್ಕ ಅವರನ್ನು ಮೊದಲು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಆದರ್ಶ ಆಸ್ಪತ್ರೆಗೆ ಕಳುಹಿಸಲಾಗಿದೆ. ಪೊಲೀಸರು ಚಾಕು ಚುಚ್ಚಿದ ಅದ್ನಾನ್ ಸಂಶಿ ಅವರನ್ನು ಬಂಧಿಸಿದ್ದಾರೆ.
ವಿವೇಕ ನಾಯ್ಕ ಹಾಗೂ ಅದ್ನಾನ್ ಸಂಶಿ ಮೊದಲು ಸ್ನೇಹಿತರಾಗಿದ್ದರು. ನಂತರ ಅವರ ನಡುವೆ ದ್ವೇಷ ಹುಟ್ಟಿದ್ದು, ಈ ದಿನದ ಹೊಡೆದಾಟಕ್ಕೆ ಕಾರಣ ಗೊತ್ತಾಗಿಲ್ಲ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ತೆರಳುವುದನ್ನು ತಡೆದಿದ್ದಾರೆ. ಚಾಕು ಇರಿತದ ಸುದ್ದಿ ಕೇಳಿ ನೂರಾರು ಜನ ಹೊನ್ನಾವರ ಪೊಲೀಸ್ ಠಾಣೆಗೆ ಜಮಾಯಿಸಿದ್ದಾರೆ.
Discussion about this post