• Latest
Save Sharavathi campaign No one has applied for pump storage!

ಶರಾವತಿ ಉಳಿಸಿ ಅಭಿಯಾನ: ಪಂಪ್ ಸ್ಟೋರೇಜ್ ಪರವಾಗಿ ಅರ್ಜಿ ಸಲ್ಲಿಸಿದವರೇ ಇಲ್ಲ!

1 month ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Thursday, October 23, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಶರಾವತಿ ಉಳಿಸಿ ಅಭಿಯಾನ: ಪಂಪ್ ಸ್ಟೋರೇಜ್ ಪರವಾಗಿ ಅರ್ಜಿ ಸಲ್ಲಿಸಿದವರೇ ಇಲ್ಲ!

ಸಿಂಗಳಿಕ ಪರ ಧ್ವನಿ ಎತ್ತಿದ ಜನ | 16 ಸಾವಿರ ಮರಗಳಿಗೆ ಮರು ಜೀವ | ಶರಾವತಿ ತಾಯಿಗೆ ಸ್ಥಳೀಯರೇ ಶ್ರೀರಕ್ಷೆ

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Save Sharavathi campaign No one has applied for pump storage!
ADVERTISEMENT

ಶರಾವತಿ ಪಂಪ್ ಸ್ಟೋರೇಜ್ ವಿಷಯವಾಗಿ ಗುರುವಾರ ಸಾರ್ವಜನಿಕ ಅಹವಾಲು ಸಭೆ ನಡೆದಿದ್ದು, ಒಟ್ಟು 4043 ಅರ್ಜಿಗಳು ಜಿಲ್ಲಾಡಳಿತದ ಕಡತ ಸೇರಿವೆ. ಸಾವಿರ ಸಂಖ್ಯೆಯ ಜನ ಬಂದಿದ್ದರೂ ಯೋಜನೆ ಪರವಾಗಿ ಒಬ್ಬರು ಸಹ ಅರ್ಜಿ ಸಲ್ಲಿಸಿಲ್ಲ!

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಜೀವನದಿಯಾಗಿರುವ ಶರಾವತಿ ನದಿಗೆ ಅಡ್ಡಲಾಗಿ ಸರ್ಕಾರ ಪಂಪ್ ಸ್ಟೋರೇಜ್ ಯೋಜನೆ ರೂಪಿಸಲು ನಿರ್ಧರಿಸಿದೆ. ಇದಕ್ಕಾಗಿ ಯೋಜನೆ ಅನುಷ್ಠಾನಕ್ಕಾಗಿ ಸೂಕ್ಷ್ಮ ಪ್ರದೇಶದಲ್ಲಿ 16041 ಮರಗಳನ್ನು ಕಡಿಯಲಾಗುತ್ತದೆ. ಜೊತೆಗೆ ಅಪರೂಪದಲ್ಲಿಯೇ ಅಪರೂಪವಾಗಿರುವ ಸಿಂಹ ಬಾಲದ ಕೋತಿಗೆ ಈ ಯೋಜನೆ ಮಾರಕವಾಗಿದೆ. ಈ ನಿಟ್ಟಿನಲ್ಲಿ ಅನೇಕರು ಯೋಜನೆಗೆ ವಿರೋಧವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಯೋಜನೆ ವಿರೋಧವಾಗಿ ಭಾರೀ ಪ್ರಮಾಣದಲ್ಲಿ ಜನ ಜಾಗೃತಿ ನಡೆದಿದೆ.

ADVERTISEMENT

`ಶರಾವತಿ ಉಳಿಸಿಕೊಳ್ಳಲು ಕೊನೆಯ ಅವಕಾಶ’ ಎನ್ನುವ ಬಗ್ಗೆ ಸಾರ್ವಜನಿಕ ಅಹವಾಲು ಸಭೆಯ ಬಗ್ಗೆ ಮಾಹಿತಿ ಪ್ರಸಾರವಾಗಿದ್ದು, ಮೂಕಜೀವಗಳ ಪರವಾಗಿ ಈ ದಿನ ಜನ ಮಾತನಾಡಿದರು. ಬೈಕ್ ರ‍್ಯಾಲಿಗಳ ಮೂಲಕ ಸರ್ಕಾರಕ್ಕೆ ತಮ್ಮ ವಿರೋಧವ್ಯಕ್ತಪಡಿಸಿದರು. ಶಿವಮೊಗ್ಗದಲ್ಲಿ ನಡೆದ ಸಭೆಯಲ್ಲಿ ಸಹ ಪರಿಸರವಾದಿಗಳು ಯೋಜನೆಗೆ ವಿರೋಧ ಮಾಡಿದ್ದು, ಹೊನ್ನಾವರದಲ್ಲಿಯೂ ಅದೇ ಮಾತು ಪ್ರತಿಧ್ವನಿಸಿತು.

ಯೋಜನೆಯ ಬಗ್ಗೆ ಸರಿಯಾದ ಮಾಹಿತಿ ನೀಡದೇ ಅಧಿಕಾರಿಗಳು ಪೇಜಿಗೆ ಸಿಲುಕಿದರು. ಬಂಗಾರಮಕ್ಕಿಯ ಮಾರುತಿ ಗುರೂಜಿಯವರು ರಾತ್ರಿಯವರೆಗೂ ಸಭೆ ನಡೆಯುವ ಸ್ಥಳದಲ್ಲಿಯೇ ಇದ್ದು ಯೋಜನೆಯನ್ನು ಖಂಡಿಸಿದರು. ತಮ್ಮ ಮಾತಿನಲ್ಲಿಯೂ ಸಹ ಮಾರುತಿ ಗುರೂಜಿ ಯೋಜನೆಯ ವಿರುದ್ಧ ಆಕ್ರೋಶದ ಮಾತುಗಳನ್ನಾಡಿದರು. ಯೋಜನೆಗೆ 54.15 ಹೆಕ್ಟೇರ್ ಅರಣ್ಯ ಅಗತ್ಯವಿದ್ದು, ಇಲ್ಲಿ ಕಡಿದ ಮರಕ್ಕೆ ಪರ್ಯಾಯವಾಗಿ ಚಿಕ್ಕಮಗಳೂರಿನಲ್ಲಿ ಗಿಡ ನೆಡುವ ವಿಧಾನ ಟೀಕೆಗೆ ಒಳಗಾಯಿತು.

ಈ ಯೋಜನೆಯಿಂದ ಅಪರೂಪದ ಸಸ್ಯ ಸಂಪತ್ತು, ವನ್ಯಜೀವಿಗಳಿರುವ ಹೊನ್ನಾವರ ಅರಣ್ಯ ವಿಭಾಗ ಅಲ್ಲಲ್ಲಿ ಬರಡಾಗುವ ಬಗ್ಗೆ ಜನ ಆತಂಕವ್ಯಕ್ತಪಡಿಸಿದರು. ಭೂಮಿಯ ಒಳಗೆ 7ಕಿಮೀ ಸುರಂಗ ತೆರೆಯುವುದನ್ನು ತಡೆಯುವುದಾಗಿ ಹೇಳಿದರು. ಹೊನ್ನಾವರದ ನಗರಬಸ್ತಿಕೇರಿ, ಗೇರುಸೊಪ್ಪ, ಬೆಗೊಡಿ ಗ್ರಾಮಗಳ 24.31 ಹೆಕ್ಟೇರ್ ಖಾಸಗಿ ಜಮೀನು ಈ ಯೋಜನೆಗೆ ಬಲಿ ಆಗುವುದನ್ನು ಕೇಳಿ ಆತಂಕವ್ಯಕ್ತಪಡಿಸಿದರು. ಈ ವ್ಯಾಪ್ತಿಯಲ್ಲಿ ಬರುವ ಮನೆ, ದೇವಾಲಯ, ಅಂಗನವಾಡಿಗಳನ್ನು ಬಿಟ್ಟು ಕೊಡುವುದಿಲ್ಲ ಎಂದು ಶಪಥ ಮಾಡಿದರು.

ADVERTISEMENT

Discussion about this post

Previous Post

ಕವಳಕ್ಕೆ ಎಲೆ ತರಲು ಹೋದವ ಬಾವಿಗೆ ಬಿದ್ದ: ಅಲ್ಲಿಯೇ ಪ್ರಾಣ ಬಿಟ್ಟ!

Next Post

ಕೂಸಿನಮನೆಗೆ ಕಂಟಕನಾದ ಗುತ್ತಿಗೆದಾರ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋