ಕಾರವಾರದಲ್ಲಿ ಮಟ್ಕಾ ಆಡಲು ಹೋಗಿದ್ದ ಮಂಜುನಾಥ ನಾಯ್ಕ ಅವರು ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ಮಟ್ಕಾ ಆಟಗಾರ ಮಂಜುನಾಥ ನಾಯ್ಕ ಅವರ ಜೊತೆ ಜೊತೆ ಮಟ್ಕಾ ಆಡಿಸುತ್ತಿದ್ದ ಸಂತೋಷ ಗೌಡ ಹಾಗೂ ಮಟ್ಕಾ ಬುಕ್ಕಿ ಸುಭಾಷ್ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
ಸಿದ್ದರ ಮುದಗದ ಚಾಲಕ ಸಂತೋಷ ಗಣಪತಿ ಗೌಡ ಅವರು ಸೆಪ್ಟೆಂಬರ್ 17ರಂದು ಶೇಜವಾಡದ ಸದಾನಂದ ಸಭಾ ಭವನದ ಬಳಿ ಮಟ್ಕಾ ಆಡಿಸುತ್ತಿದ್ದರು. 1ರೂಪಾಯಿಗೆ 80ರೂ ಕೊಡುವುದಾಗಿ ಆಮೀಷ ಒಡ್ಡುತ್ತಿದ್ದರು. ಕಾರವಾರ ಮೇಲಿನ ಮಕ್ಕೇರಿಯ ಪೇಂಟರ್ ಮಂಜುನಾಥ ಗಣಪತಿ ನಾಯ್ಕ ಅವರು ಮಟ್ಕಾ ಆಡುವುದಕ್ಕಾಗಿ ಹಣ ಕೊಟ್ಟಿದ್ದರು. ಈ ವೇಳೆ ಪೊಲೀಸರು ದಾಳಿ ಮಾಡಿದರು.
ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ನೇಹಾಲ್ ಖಾನ್ ಅವರು ಸಂತೋಷ ಗೌಡ ಅವರನ್ನು ವಿಚಾರಣೆಗೆ ಒಳಪಡಿಸಿದರು. ಆಗ ಸಂತೋಷ ಗಣಪತಿ ಗೌಡ ಅವರು ಮಟ್ಕಾ ಬುಕ್ಕಿ ಅವರ ಹೆಸರನ್ನು ಬಾಯ್ಬಿಟ್ಟರು. ಮಟ್ಕಾ ಆಡಿಸುವ ಸಂತೋಷ ಗೌಡ ಅವರು ಸುಭಾಷ್ ಎಂಬಾತರ ಹೆಸರು ಹೇಳಿದ್ದು, ಅವರ ವಿಳಾಸ ತಿಳಿಸಲಿಲ್ಲ. ಹೀಗಾಗಿ ಪೊಲೀಸರು ಮಟ್ಕಾ ಬುಕ್ಕಿ ಸುಭಾಷ್ ಅವರ ಹೆಸರನ್ನು ಪ್ರಕರಣದಲ್ಲಿ ಸೇರಿಸಿ ತನಿಖೆ ಶುರು ಮಾಡಿದರು.
Discussion about this post