ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಕಾರವಾರದ ಗೀತಾಂಜಲಿ ಚಿತ್ರಮಂದಿರದಲ್ಲಿ 1 ರೂಪಾಯಿಗೆ ಸಿನಿಮಾ ತೋರಿಸಲಾಗುತ್ತಿದೆ. ಒಟ್ಟು ಆರು ದಿನಗಳ ಈ ವಿಶೇಷ ದರದಲ್ಲಿ ಸಿನಿಮಾ ಪ್ರದರ್ಶನ ನಡೆಯಲಿದೆ.
ಸೆಪ್ಟೆಂಬರ್ 17ರಂದು ನರೇಂದ್ರ ಮೋದಿ ಅವರು 75ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನಲೆ ಮೋದಿ ಅಭಿಮಾನಿಗಳು ಎಲ್ಲಡೆ ಸಂಭ್ರಮಾಚರಣೆ ಮಾಡಿದ್ದಾರೆ. ವಿವಿಧ ತಾಲೂಕುಗಳಲ್ಲಿ ಶ್ರಮದಾನ, ಸ್ವಚ್ಛತಾ ಅಭಿಯಾನಗಳು ನಡೆದಿವೆ. ಜೊತೆಗೆ ದೇಶದ ಅನೇಕ ಕಡೆ 1 ರೂ ದರದಲ್ಲಿ ಸಿನಿಮಾ ಪ್ರದರ್ಶನವನ್ನು ಸಹ ಆಯೋಜಿಸಲಾಗುತ್ತಿದೆ.
ಅದರಂತೆ, ಕಾರವಾರದ ಗೀತಾಂಜಲಿ ಚಿತ್ರ ಮಂದಿರದಲ್ಲಿ ಸಹ `ಚಲೋ ಜೀತೆ ಹೈ’ ಎಂಬ ಸಿನಿಮಾ ಪ್ರದರ್ಶನವಾಗುತ್ತಿದೆ. ಸ್ವಾಮಿ ವಿವೇಕಾನಂದರ ತತ್ವದಿಂದ ಪ್ರಭಾವಿತರಾದ ನರೇಂದ್ರ ಮೋದಿ ಅವರು ನಾಯಕರಾಗಿ ಬೆಳೆದ ರೀತಿಯನ್ನು ಸಿನಿಮಾ ಮೂಲಕ ತೋರಿಸಲಾಗಿದೆ. ಸ್ಪೂರ್ತಿದಾಯಕ ಕಥೆಯನ್ನು ಒಳಗೊಂಡ ಈ ಸಿನಿಮಾ ಸೆ 19ರಂದು ಕಾರವಾರದಲ್ಲಿ ಮೊದಲ ಪ್ರದರ್ಶನ ಕಂಡಿದ್ದು, ಸಾಕಷ್ಟು ಸಂಖ್ಯೆಯ ಜನ ಚಿತ್ರ ನೋಡಿದ್ದಾರೆ.
ಸೆಪ್ಟೆಂಬರ್ 24ರವರೆಗೆ ಸಿನಿಮಾ ಪ್ರದರ್ಶನ ನಡೆಯಲಿದೆ. ಹಿಂದಿ ಭಾಷೆಯಲ್ಲಿರುವ ಈ ಸಿನಿಮಾ ಪ್ರತಿ ದಿನ ಸಂಜೆ 7ಗಂಟೆಗೆ ಪ್ರದರ್ಶನವಾಗಲಿದೆ. 1 ತಾಸಿನ ಅವಧಿಯ ಚಲನಚಿತ್ರ ಇದಾಗಿದೆ. ವಿವಿಧ ಕಡೆ 1ರೂ ದರದಲ್ಲಿ ಸಿನಿಮಾ ಪ್ರದರ್ಶಿಸುತ್ತಿದ್ದು, ಕಾರವಾರದಲ್ಲಿ ಆ ಹಣವನ್ನು ಸಹಪಡೆಯದೇ ಸಿನಿಮಾ ತೋರಿಸಲಾಗುತ್ತಿದೆ’ ಎಂದು ಗೀತಾಂಜಲಿ ಸಿನಿಪ್ಲೆಕ್ಸ್’ನ ರಾಹುಲ್ ಬೋರ್ಕರ್ ತಿಳಿಸಿದರು.
Discussion about this post